ಗುಂಡ್ಲುಪೇಟೆ: ‘ಈಗ’, ‘ಬಾಹುಬಲಿ’ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು ಪತ್ನಿ ರಮಾ ಅವರೊಂದಿಗೆ ತಾಲ್ಲೂಕಿನ ಬಂಡೀಪುರ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬುಧವಾರ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಸವಿದರು.

ಮಂಗಳವಾರವೇ ಬಂದಿದ್ದ ಅವರು ತಾಲ್ಲೂಕಿನ ಕಣಿಯನಪುರದಲ್ಲಿರುವ ಸೆರಾಯ್ ರೆಸಾರ್ಟ್ನಲ್ಲಿ ತಂಗಿದ್ದರು. ಬುಧವಾರ ಬೆಳಿಗ್ಗೆ ಸಫಾರಿಗೆ ತೆರಳಿದರು. ಆ ಬಳಿಕ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅರ್ಚಕರು ದಂಪತಿಗೆ ಶಾಲು ಹೊದೆಸಿ ಸನ್ಮಾನಿಸಿದರು.

ಗೋಪಾಲಸ್ವಾಮಿ ದೇವಾಲಯದ ಹೊರ ಆವರಣದಲ್ಲಿ ಸುತ್ತಾಡಿದ ಅವರು, ರಮಣೀಯ ಪ್ರಕೃತಿಯನ್ನು ವೀಕ್ಷಿಸಿದರು. ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಅವರು ದಂಪತಿಯ ಜೊತೆಗಿದ್ದು, ಮಾರ್ಗದರ್ಶನ ಮಾಡಿದರು.

ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜಮೌಳಿ ಅವರು, ಅರಣ್ಯ ಇಲಾಖೆಯು ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.