11th ಅವರ್

ತಮನ್ನಾ ಭಾಟಿಯಾ ನಟನೆಯ ತೆಲುಗು ವೆಬ್‌ಸರಣಿ ‘11th ಅವರ್’. ಪ್ರವೀಣ ಸತ್ತಾರು ನಿರ್ದೇಶನದ ಈ ವೆಬ್‌ಸರಣಿ ಅಲ್ಲು ಅರವಿಂದ್ ಒಡೆತನದ ಆಹಾ ಒರಿಜಿನಲ್ ಒಟಿಟಿ ವೇದಿಕೆಯಲ್ಲಿ ಇಂದು (ಜನವರಿ 22ಕ್ಕೆ) ಬಿಡುಗಡೆಯಾಗುತ್ತಿದೆ.

ಒಂದೇ ಒಂದು ರಾತ್ರಿಯಲ್ಲಿ ನಡೆಯುವ ಕಾರ್ಪೊರೇಟ್ ಥ್ರಿಲ್ಲರ್ ಕಥೆ ಇದಾಗಿದೆ. ಆರ್ತ್ರಿಕಾ ರೆಡ್ಡಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ತಮನ್ನಾ. ಇದು ತಮನ್ನಾ ಅವರ ಮೊದಲ ತೆಲುಗು ವೆಬ್‌ಸರಣಿಯಾಗಿದೆ. ಈ ವೆಬ್‌ಸರಣಿ ಉಪೇಂದ್ರ ನಂಬುರಿ ಅವರ ‘8 ಅವರ್ಸ್’ ಕಾದಂಬರಿಯನ್ನು ಆಧರಿಸಿದೆ. ಪ್ರದೀಪ್ ಉಪ್ಪಲಪತಿ ಈ ವೆಬ್‌ಸರಣಿಗೆ ಹಣ ಹೂಡಿಕೆ ಮಾಡಿದ್ದಾರೆ. ತಮನ್ನಾ ತಮಿಳಿನ ‘ನವೆಂಬರ್ ಸ್ಟೋರಿ’ ವೆಬ್‌ಸರಣಿಯಲ್ಲೂ ನಟಿಸಿದ್ದಾರೆ.

ಜೀತ್ ಕಿ ಝಿದ್
ಸತ್ಯಘಟನೆ ಆಧಾರಿತ ಕಥೆಯಾಗಿರುವ ಜೀತ್ ಕಿ ಝಿದ್ ವೆಬ್‌ಸರಣಿ ಇಂದು ಜೀ 5ನಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಅಮಿತ್ ಸಾಧ್, ಅಮೃತಾ ಪುರಿ ಹಾಗೂ ಸುಶಾಂತ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಸರಣಿಯು ಅಪಾರ ದೇಶಭಕ್ತಿಯುಳ್ಳ ಸೈನಿಕನೊಬ್ಬನ ಸ್ಫೂರ್ತಿದಾಯಕ ಕಥೆಯನ್ನು ಹೊಂದಿದೆ. ಆ್ಯಕ್ಷನ್ ಥ್ರಿಲ್ಲರ್ ಕಥೆ ಹೊಂದಿರುವ ಈ ವೆಬ್‌ಸರಣಿ ದೇಶಪ್ರೇಮದ ಅಂಶವನ್ನೂ ಹೊಂದಿದೆ. ಅಸಾಧ್ಯವಾದುದನ್ನೂ ಸಾಧ್ಯವಾಗಿಸುವ ಸೈನಿಕನ ಛಲ, ದೇಶಪ್ರೇಮಕ್ಕಾಗಿ ಅವನು ಸವೆಸುವ ಕಠಿಣ ಹಾದಿ ಈ ಎಲ್ಲಾ ಅಂಶಗಳನ್ನು ಈ ಸರಣಿ ಒಳಗೊಂಡಿದೆ.

ಬ್ಯಾಂಗ್ ಬ್ಯಾಂಗ್
ಫೈಸಲ್ ಶೇಖ್ ಹಾಗೂ ರೂಹಿ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬ್ಯಾಂಗ್ ಬ್ಯಾಂಗ್ ವೆಬ್‌ಸರಣಿ ಜೀ 5ನಲ್ಲಿ ಜನವರಿ 25ಕ್ಕೆ ಬಿಡುಗಡೆಯಾಗಲಿದೆ.

ಆ್ಯಕ್ಷನ್ ಥ್ರಿಲ್ಲರ್ ಕಥೆ ಹೊಂದಿರುವ ಈ ವೆಬ್‌ಸರಣಿಯು ಕೊಲೆ ಪ್ರಕರಣವನ್ನು ಭೇದಿಸುವ ಕಥಾಸಾರಾಂಶವನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.