ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್ ಚಿತ್ರ ಸತ್ಯಕ್ಕೆ ದೂರಾವಾಗಿದ್ದು ಎಂದು ಯಾರಾದರೂ ಸಾಬೀತು ಪಡಿಸಿದರೆ ನಾನು ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ‘ ಎಂದು ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಅಸಭ್ಯ, ಕೀಳು ಅಭಿರುಚಿಯ ಚಿತ್ರ. ಪ್ರಚಾರದ ಉದ್ದೇಶದ ಈ ಚಿತ್ರವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಸೂಕ್ತವಾದುದಲ್ಲ’ ಎಂದು ಐಎಫ್ಎಫ್ಐ ಅಂತರರಾಷ್ಟ್ರೀಯ ಸ್ಪರ್ಧೆ ವಿಭಾಗದ ತೀರ್ಪುಗಾರರಾದ ನಾಡವ್ ಲ್ಯಾಪಿಡ್ ಹೇಳಿದ್ದರು.

ಇದನ್ನೂ ಓದಿ:'ಕಾಶ್ಮೀರ್ ಫೈಲ್ಸ್' ಅಸಭ್ಯ,ಕೀಳು ಅಭಿರುಚಿದ್ದು: ಸ್ಪರ್ಧೆಯ ತೀರ್ಪುಗಾರರ ಅಭಿಪ್ರಾಯ

ಲ್ಯಾಪಿಡ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವಿಟರ್ನಲ್ಲಿ ವಿಡಿಯೊ ಹಂಚಿಕೊಂಡಿರುವ ವಿವೇಕ್ ಅಗ್ನಿಹೋತ್ರಿ, ‘ಈ ಸಿನಿಮಾದಲ್ಲಿ ಒಂದು ದೃಶ್ಯ, ಸಂಭಾಷಣೆ ಅಥವಾ ಒಂದು ಘಟನೆ ಸತ್ಯಕ್ಕೆ ದೂರವಾಗಿದ್ದು ಎಂದು ಸಾಬೀತು ಪಡಿಸಲು, ಇಡೀ ಪ್ರಪಂಚದಲ್ಲಿರುವ ಬುದ್ಧಿಜೀವಿಗಳು, ಇಸ್ರೇಲ್ನ ಖ್ಯಾತ ಸಿನಿಮಾ ನಿರ್ದೇಶಕರಿಗೆ ನಾನು ಸವಾಲು ಹಾಕುತ್ತೇನೆ‘ ಎಂದು ಹೇಳಿದ್ದಾರೆ.

ಅಲ್ಲದೇ ಈ ಸಿನಿಮಾದ ಯಾವುದೇ ಒಂದು ದೃಶ್ಯ ಸತ್ಯವಲ್ಲ ಎಂದು ಸಾಬೀತು ಪಡಿಸಿದರೆ ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆ ಎಂದು ಅವರು ಸವಾಲು ಎಸೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.