‘ತ್ರಿವಿಕ್ರಮ’– ನಿರ್ದೇಶಕ ಸಹನಾಮೂರ್ತಿ ಹಾಗೂ ವಿಕ್ರಮ್ ರವಿಚಂದ್ರನ್ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಚಿತ್ರ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಒಂಟೆಗಳ ಮೇಲೆ ಸಾಹಸ ದೃಶ್ಯಗಳನ್ನು ಶೂಟಿಂಗ್ ಮಾಡಲಾಗಿದೆ. ಚೇಸಿಂಗ್ ದೃಶ್ಯಗಳನ್ನು ಚಿತ್ರೀಕರಿಸಿರುವುದೂ ಒಂಟೆಗಳನ್ನು ಬಳಸಿಯೇ.

ಅಂದಹಾಗೆ ವಿಕ್ರಮ್ ರವಿಚಂದ್ರನ್ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದಾರೆ. ಅವರಿಗೆ ಆಕಾಂಕ್ಷಾ ಶರ್ಮಾ ಹೀರೊಯಿನ್. ನವಿರು ಪ್ರೇಮದ ಸುತ್ತದ ಇದರ ಕಥೆ ಹೆಣೆಯಲಾಗಿದೆ. ಇದರಲ್ಲಿ ಒಟ್ಟು ಆರು ಹಾಡುಗಳಿದ್ದು, ವಿ. ನಾಗೇಂದ್ರ ಪ್ರಸಾದ್, ಚೇತನ್‌ಕುಮಾರ್ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ವಿಜಯ್ ಪ್ರಕಾಶ್ ಮತ್ತು ಸಂಚಿತ್ ಹೆಗ್ಡೆ ಸಾಂಗ್‌ಗಳಿಗೆ ಧ್ವನಿಯಾಗಿದ್ದಾರೆ.

ಈ ಚಿತ್ರದ ಆಡಿಯೊ ಹಕ್ಕುಗಳು ₹ 50 ಲಕ್ಷಕ್ಕೆ ಮಾರಾಟವಾಗಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಬಿಡುಗಡೆಗೆ ಸಿದ್ಧವಾಗಿರುವ ಇದರ ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ವಿಕ್ರಮ್ ರವಿಚಂದ್ರನ್ ಅವರ ಹುಟ್ಟುಹಬ್ಬದ ಸಿಹಿ ಸಂದರ್ಭದಲ್ಲಿ ಇದೇ 16ಕ್ಕೆ ಹೊಸ ಟೀಸರ್ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಈ ಕುರಿತು ಅವರ ತಂದೆ ರವಿಚಂದ್ರನ್ ಟ್ವಿಟರ್‌ನಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದಕ್ಕೆ ಗೌರಿ ಎಂಟರ್‌ಟೈನರ್ಸ್ ಲಾಂಛನದಡಿ ಸೋಮಣ್ಣ ಮತ್ತು ಸುರೇಶ್ ಬಂಡವಾಳ ಹೂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ರಾಜು ಸುಂದರಂ, ಪ್ರಭುದೇವ, ಕಲೈ ನೃತ್ಯ ನಿರ್ದೇಶಿಸಿದ್ದಾರೆ. ನಾಗು ಅವರ ಕಲಾ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.