ಮುಂಬೈ: ಬಾಲಿವುಡ್ ನಟ ಫರ್ಹಾನ್ ಅಖ್ತರ್ ಅವರು ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

‘ಮುಸ್ಲಿಂ ಧರ್ಮದವರಾದ ಫರ್ಹಾನ್ ಅಖ್ತರ್ ಅವರು ಹಿಂದುಗಳ ದೀಪಾವಳಿ ಹಬ್ಬವನ್ನು ಆಚರಿಸಿದ್ದು ಸರಿಯಲ್ಲ’ ಎಂಬುದು ಕೆಲವರು ವಾದಿಸಿದ್ದಾರೆ. ಇದೇ ಕಾರಣಕ್ಕೆ ಫರ್ಹಾನ್ ಅವರನ್ನು ಟ್ರೋಲ್ ಮಾಡಲಾಗಿದೆ.

ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಫರ್ಹಾನ್ ಅಖ್ತರ್ ಕೂಡ ತಮ್ಮ ಕಚೇರಿಯಲ್ಲಿ ಪ್ರೇಯಸಿ ಶಿಬಾನಿ ದಂಡೇಕರ್ ಸೇರಿದಂತೆ ಸ್ನೇಹಿತರೊಂದಿಗೆ ದೀಪಾವಳಿವನ್ನು ಆಚರಿಸಿದ್ದಾರೆ. ಹಿಂದುಗಳ ಹಬ್ಬವನ್ನು ಫರ್ಹಾನ್ ಅಖ್ತರ್ ಆಚರಿಸಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಫರ್ಹಾನ್ ಅಖ್ತರ್ ಅವರ ಅಪ್ಪ ಜಾವೇದ್ ಅಖ್ತರ್ ಯಾವ ಧರ್ಮವನ್ನೂ ನಂಬುವುದಿಲ್ಲ. ಆದರೆ, ಇವನು ಡ್ರಾಮಾ ಮಾಡುತ್ತಿದ್ದಾನೆ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಒಬ್ಬ ಮುಸಲ್ಮಾನನಾಗಿ ನೀನು ಮಾಡುತ್ತಿರುವುದೇನು?, ‘ಈತ ಹೆಸರಿಗೆ ಮಾತ್ರ ಮುಸಲ್ಮಾನ’ ಎಂದು ಅನೇಕರು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.