ಆಸ್ಕರ್ ವಿಜೇತಸೌಂಡ್ ಎಂಜಿನಿಯರ್ ರಸೂಲ್ ಪೂಕುಟ್ಟಿ ಅವರ ಟ್ವೀಟ್‌ಗೆ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಕೌಂಟರ್ ಕೊಟ್ಟಿದ್ದಾರೆ.

ರಸೂಲ್ ಪೂಕುಟ್ಟಿ ಅವರು ‘ಆರ್‌ಆರ್‌ಆರ್’ ಚಿತ್ರ ಕುರಿತು ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ಟಾಲಿವುಡ್ ಸೇರಿದಂತೆ ಚಿತ್ರರಂಗದ ಬಹುತೇಕ ಗಣ್ಯರುಪೂಕುಟ್ಟಿ ಟ್ವೀಟ್ ಅನ್ನು ಖಂಡಿಸಿದ್ದರು. ಇದೀಗ ಸಂಗೀತ ನಿರ್ದೇಶಕ ಎಂ.ಎಂ.ಕಿರವಾಣಿ ಕೂಡ ಪೂಕುಟ್ಟಿ ಟ್ವೀಟ್‌ಗೆ ಟಕ್ಕರ್ ಕೊಟ್ಟಿದ್ದಾರೆ.

ಇದನ್ನೂ ಓದಿ:ತರಗತಿಗೆ ಬಾರದ ವಿದ್ಯಾರ್ಥಿಗಳು; ₹ 24 ಲಕ್ಷ ಸಂಬಳ ಹಿಂದಿರುಗಿಸಿದ ಪ್ರಾಧ್ಯಾಪಕ

‘ಆರ್‌ಆರ್‌ಆರ್‘ ಸಿನಿಮಾದ ಬಗ್ಗೆ ವಿದೇಶಿಗರು ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಕಾಮೆಂಟ್ ಮಾಡಿದ್ದರು. ಇದು ‘ಗೇ ಲವ್ ಸ್ಟೋರಿ‘ಎಂದು ಹೇಳಿದ್ದರು. ಇದನ್ನು ಭಾರತೀಯ ಸಿನಿಮಾ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಖಂಡಿಸಿ, ಅವರಿಗೆ ಸರಿಯಾಗಿಯೇ ಟಾಂಗ್‌ಕೊಟ್ಟಿದ್ದರು.

ಮೂರು ದಿನಗಳ ಹಿಂದೆ ನಿರ್ಮಾಪಕಮುನೀಶ್ ಭಾರದ್ವಾಜ್, ‘ರಾತ್ರಿ 30 ನಿಮಿಷಗಳ ಕಾಲ ‘ಆರ್‌ಆರ್‌ಆರ್‘ ಎಂಬ ರಬ್ಬಿಶ್ ಸಿನಿಮಾ ನೋಡಿದೆ‘ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ರಸೂಲ್ ಪೂಕುಟ್ಟಿ ಇದೊಂದು ‘ಗೇ ಲವ್ ಸ್ಟೋರಿ‘ ಎಂದು ಟ್ವೀಟ್ ಮಾಡಿದ್ದರು.

ರಸೂಲ್ ಅವರ ಈ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ಇದನ್ನು ಟಾಲಿವುಡ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಖಂಡಿಸಿದ್ದರು. ಬಾಹುಬಲಿ ನಿರ್ಮಾಪಕಶೋಬು ರ‍್ಯಾಲಗಡ್ಡ ಹಾಗೂ ‘ಆರ್‌ಆರ್‌ಆರ್‘ ಸಿನಿಮಾದ ಸಂಗೀತ ನಿರ್ದೇಶಕ ಕೀರವಾಣಿ ಸಹ ಪೂಕುಟ್ಟಿ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ನಾನು ಇಂಗ್ಲಿಷ್‌ನಲ್ಲಿಅಪ್ಪರ್ ಕೇಸ್ ಮತ್ತು ಲೋವರ್‌ಕೇಸ್ ಅಕ್ಷರಗಳನ್ನು ಟೈಪ್ ಮಾಡುವಾಗತಪ್ಪು ಮಾಡಬಹುದು. ಆದರೆ ರಸೂಲ್ ಪೂಕುಟ್ಟಿ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ ಎಂದು ಕೀರವಾಣಿ ಟ್ವೀಟ್ ಮಾಡಿದ್ದರು.

ರಸೂಲ್ ಪೂಕುಟ್ಟಿ ಹೆಸರಿನಲ್ಲಿ ‘ಪೂಕುಟ್ಟಿ‘ಯ ಅಕ್ಷರಗಳನ್ನು ದೊಡ್ಡದಾಗಿ ಟೈಪ್ ಮಾಡಿ ಹೈಲೈಟ್ ಮಾಡಿದ್ದರು. ಇದು ಅಶ್ಲೀಲ ಪದ ಎಂಬುದು ನೆಟ್ಟಿಗರು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದರು. ನಂತರದಲ್ಲಿ ಕೀರವಾಣಿ ಆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ:’ಕಾಳಿ’ ಮಾತೆ ಕೈಯಲ್ಲಿ ಸಿಗರೇಟು; ವಿವಾದಕ್ಕೀಡಾದ ನಿರ್ದೇಶಕಿ ಲೀನಾ ವಿರುದ್ಧ ದೂರು

ಶೋಬುರ‍್ಯಾಲಗಡ್ಡ ಕೂಡ ರೆಸುಲ್ ಪೂಕುಟ್ಟಿಗೆ ಟಾಂಗ್ ಕೊಟ್ಟಿದ್ದು, ನೀವು ಮಾಡಿದ ಕಾಮೆಂಟ್ ನಿಮ್ಮ ಗುಣಮಟ್ಟಕ್ಕೆ ತಕ್ಕಂತೆ ಇಲ್ಲ,ಸ್ವಲ್ಪ ಗಂಭೀರವಾಗಿ ಟ್ಡೀಟ್ ಮಾಡಿ ಎಂದಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ.

ಓದಿ...

ಸಿಗರೇಟ್ ಸೇದುತ್ತಿರುವ ’ಕಾಳಿ’ ಮಾತೆ: ನಿರ್ದೇಶಕಿ ಲೀನಾ ವಿರುದ್ಧ ಭಾರೀ ಆಕ್ರೋಶ

ಕಾಳಿ ಮಾತೆ ಕೈಯಲ್ಲಿ ಸಿಗರೇಟು: ವಿವಾದದ ಬಗ್ಗೆ ಭಯವಿಲ್ಲ ಎಂದ ನಿರ್ದೇಶಕಿ ಲೀನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.