ಮುಂಬೈ: ನಟಿ ಜಾಹ್ನವಿ ಕಪೂರ್ ಅಭಿನಯದ ‘ಉಲಜ್‘ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಐಎಫ್ಎಸ್ ಅಧಿಕಾರಿಯಾಗಿ ಜಾಹ್ನವಿ ಕಪೂರ್ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ‘ಉಲಜ್’ ಚಿತ್ರದ ಟ್ರೇಲರ್ ಅನ್ನು ಜಾಹ್ನವಿ ಕಪೂರ್ ಹಂಚಿಕೊಂಡಿದ್ದಾರೆ.
.PHOTOS | ಅಪ್ಸರೆಯಂತೆ ಕಣ್ಮನ ಸೆಳೆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ .ಕರಾವಳಿಯಲ್ಲಿ ಪ್ರಜ್ವಲ್ ಭಿನ್ನ ಪಾತ್ರ .
ದೇಶಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳ ಮಾಹಿತಿ ಸೋರಿಕೆಯಾಗಿದೆ ಎಂಬ ಧ್ವನಿಯ ಮೂಲಕ ಆರಂಭವಾಗುವ ಟ್ರೇಲರ್ನಲ್ಲಿ ಚಿತ್ರದುದ್ದಕ್ಕೂ ಜಾಹ್ನವಿ ಎದುರಿಸುವ ಸವಾಲುಗಳ ಸಣ್ಣ ತುಣುಕುಗಳನ್ನು ಕಾಣಬಹುದು.

ದೇಶಭಕ್ತಿ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿ ಜಾಹ್ನವಿ ಕಪೂರ್ ಐಎಫ್ಎಸ್ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ದೇಶಭಕ್ತ ಕುಟುಂಬದಲ್ಲಿ ಜನಿಸಿದ ಮಹಿಳೆಯು ಐಎಫ್ಎಸ್ ಅಧಿಕಾರಿಯಾಗಿ ವಿದೇಶದಲ್ಲಿ ಕೆಲಸ ನಿರ್ವಹಿಸುವ ವೇಳೆ ಎದುರಾಗುವ ಸಮಸ್ಯೆಗಳು ಹಾಗೂ ಅದನ್ನು ಮೆಟ್ಟಿ ನಿಲ್ಲುವ ಆಕೆಯ ಧೈರ್ಯ ಈ ಎಲ್ಲಾ ಅಂಶಗಳನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
.ಅನಂತ್–ರಾಧಿಕಾ ಮದುವೆ: ಬಚ್ಚನ್ ಕುಟುಂಬದಿಂದ ಅಂತರ ಕಾಯ್ದುಕೊಂಡರೇ ಐಶ್ವರ್ಯಾ ರೈ?.₹1000 ಕೋಟಿ ಗಳಿಸಿದ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಚಿತ್ರ.
‘ನಾನು ಮೊದಲ ಬಾರಿಗೆ ಐಎಫ್ಎಸ್ ಅಧಿಕಾರಿಯಂತಹ ಸವಾಲಿನ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರವು ನನಗೆ ವಿಶೇಷವಾಗಿದೆ. ವಿನೂತನ ಅನುಭವದ ಜತೆಗೆ ನಾನು ಸಾಕಷ್ಟು ಕಲಿತಿದ್ದೇನೆ. ಸುಧಾಂಶು ಸರಿಯಾ ನಿರ್ದೇಶನದಲ್ಲಿ ಕೆಲಸ ಮಾಡಿರುವುದು ಖುಷಿಯ ವಿಚಾರ’ ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸುಧಾಂಶು ಸರಿಯಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
.VIDEO | ಬಳ್ಳಾರಿ ಅಗಸನೂರು ಮೊಹರಂನಲ್ಲಿ ಕನ್ನಡ ರಿವಾಯತ್ಗಳ ಸಾಂತ್ವನ.ಶಿವರಾಜ್ಕುಮಾರ್ಗೆ ಕಾರ್ತಿಕ್ ಆ್ಯಕ್ಷನ್ ಕಟ್ .
ಗುಲ್ಶನ್ ದೇವಯ್ಯ ಹಾಗೂ ರೋಷನ್ ಮ್ಯಾಥ್ಯೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆದಿಲ್ ಹುಸೇನ್, ರಾಜೇಶ್ ತೈಲಂಗ್, ಮೇಯಾಂಗ್ ಚಾಂಗ್, ರಾಜೇಂದ್ರ ಗುಪ್ತಾ ಹಾಗೂ ಜಿತೇಂದ್ರ ಜೋಶಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿಂದಿ ಭಾಷೆಯಲ್ಲಿ ಆಗಸ್ಟ್ 2ರಂದು ಚಿತ್ರ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.