ಅಮ್ಮ ಟಾಕೀಸ್ ಬ್ಯಾನರಿನಡಿ ನಿರ್ಮಾಣಗೊಂಡ ನಟ ಬಿರಾದರ್ ಅಭಿನಯದ ಐನೂರನೇ ಚಿತ್ರ ‘90 ಹೊಡಿ ಮನೀಗ್ ನಡಿ’ ಸಿನಿಮಾಗೆ ಇದೀಗ ಸೆನ್ಸಾರ್ ಸಮಸ್ಯೆ ಎದುರಾಗಿದೆ. ಚಿತ್ರದ ಶೀರ್ಷಿಕೆ ಬಗ್ಗೆಯೇ ಸೆನ್ಸಾರ್ ಮಂಡಳಿ ಆಕ್ಷೇಪವೆತ್ತಿದ ಕಾರಣ, ಇದೀಗ ಚಿತ್ರದ ಶೀರ್ಷಿಕೆಯನ್ನೇ ಬದಲಾಯಿಸಲಾಗಿದೆ.

‘90 ಹೊಡಿ ಮನೀಗ್ ನಡಿ’ ಎಂದರೆ, ಜನರನ್ನು ನೇರವಾಗಿ ಕುಡಿತಕ್ಕೆ ಪ್ರಚೋದಿಸಿದಂತಾಗುತ್ತದೆ ಎಂದು ಮಂಡಳಿಯು ಅಭಿಪ್ರಾಯವ್ಯಕ್ತಪಡಿಸಿದ ಕಾರಣ, ಇದೀಗ ಚಿತ್ರದ ಶೀರ್ಷಿಕೆಯನ್ನು ‘90 ಬಿಡಿ ಮನೀಗ್ ನಡಿ’ ಎಂದು ಬದಲಾಯಿಸಲಾಗಿದೆ. ಕಾಮಿಡಿ, ಕ್ರೈಮ್ ಥ್ರಿಲ್ಲರ್ ಕಥಾಹಂದರದ ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಮೇ ಹೊತ್ತಿಗೆ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.

ಚಿತ್ರದ ಬಹುಭಾಗದ ಚಿತ್ರೀಕರಣ ಉತ್ತರ ಕರ್ನಾಟದ ಭಾಗಗಳಲ್ಲೇ ನಡೆದಿದ್ದು, ಆ ಭಾಷಾ ಶೈಲಿಯಲ್ಲೇ ಚಿತ್ರ ಮೂಡಿಬಂದಿದೆ. ತಾರಾಗಣದಲ್ಲಿ ಬಿರಾದಾರ್ ಜೊತೆ ನೀತಾ ಮೈಂದರ್ಗಿ, ಪ್ರೀತು ಪೂಜಾ, ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ಆರ್.ಡಿ. ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಮುರುಳಿ ಹೊಸಕೋಟೆ, ರಾಜೇಂದ್ರ ಗುಗ್ವಾಡ, ರವಿದೀಪ್, ಸಂತು ಸೊಕನಾದಗಿ, ಎಲ್ಐಸಿ ಲೋಕೇಶ್ ತೆರೆ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.