ತೆಲುಗು ಸಿನಿಮಾಗಳನ್ನು ನಿರ್ದೇಶಿರುವ ನಾಗೇಶ್ ನಾರದಾಸಿ ನಿರ್ದೇಶನದ ‘ವಿರಾಜ್’ ಕನ್ನಡ ಸಿನಿಮಾ ಹಾಡುಗಳು ಬಿಡುಗಡೆಯಾಗಿವೆ. ಇದಕ್ಕೆ ಹೊಸ ನಟ ವಿದ್ಯಾಭರಣ್ ನಾಯಕ.

‘ವಿರಾಜ್ ನನ್ನ ಮೊದಲ ಸಿನಿಮಾ. ಇದು ನನಗೆ ಕನಸಿನ ಯೋಜನೆಯೂ ಹೌದು. ಇದರಲ್ಲಿ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳೂ ಇವೆ. ಇದು ಇಡೀ ಕುಟುಂಬಕ್ಕೆ ಮನರಂಜನೆ ಒದಗಿಸುವ ಸಿನಿಮಾ’ ಎಂದು ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದರು ವಿದ್ಯಾಭರಣ್.

ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಸಿನಿಮಾವನ್ನು ಈ ತಿಂಗಳಲ್ಲೇ ತೆರೆಗೆ ತರುವ ಆಲೋಚನೆ ಚಿತ್ರತಂಡಕ್ಕೆ ಇದೆ.

ಹೊಸ ನಟನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ ನಾಗೇಶ್, ‘ವಿದ್ಯಾಭರಣ್ ಮುಂದೆ ಎತ್ತರಕ್ಕೆ ಬೆಳೆಯುತ್ತಾರೆ. ಅವರಲ್ಲಿ ಕೆಲಸದ ಬಗ್ಗೆ ಬದ್ಧತೆ ಇದೆ’ ಎಂದರು.

ಇದು ಕೌಟುಂಬಿಕ ಸಿನಿಮಾ. ಇದರಲ್ಲಿ ಹಾಸ್ಯ, ಆ್ಯಕ್ಷನ್, ಬ್ರೇಕಪ್ ಎಲ್ಲವೂ ಇವೆ. ಇದರಲ್ಲಿ ಎಲ್ಲರೂ ಹೀರೊಗಳು, ಎಲ್ಲರೂ ವಿಲನ್‌ಗಳು. ಇದು ವಿಭಿನ್ನ ಪರಿಕಲ್ಪನೆಯ ಸಿನಿಮಾ. ಎಲ್ಲಿಯೂ ಅಶ್ಲೀಲವೆನಿಸುವ ಅಂಶಗಳಿಲ್ಲ ಎಂದರು ಹೇಳಿಕೊಂಡರು.

ಹೊಸ ನಾಯಕ ನಟನಿಗೆ ಶುಭ ಹಾರೈಸಿದ, ‘ದಿ ವಿಲನ್’ ಚಿತ್ರದ ನಿರ್ಮಾಪಪ ಸಿ.ಆರ್. ಮನೋಹರ್, ‘ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಹೀರೊಗಳು ಬೇಕು’ ಎಂದರು. ಎನ್. ಮಂಜುನಾಥಸ್ವಾಮಿ ಅವರು ‘ವಿರಾಜ್’ ಚಿತ್ರಕ್ಕೆ ಹಣ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.