ನಟ ಜಗ್ಗೇಶ್ ಅವರ ಪುತ್ರ ಗುರುರಾಜ್ ಜಗ್ಗೇಶ್ ನಾಯಕ ನಟನಾಗಿರುವ ‘ವಿಷ್ಣು ಸರ್ಕಲ್’ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಲಕ್ಷ್ಮಿ ದಿನೇಶ್.

‘ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ’ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಜೀವನ ಸಂದೇಶ ಸಾರುವುದೇ ಈ ಚಿತ್ರದ ಉದ್ದೇಶವಂತೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

‘ಐವರು ಹುಡುಗರ ತಂಡವೊಂದು ವಿಷ್ಣು ಸರ್ಕಲ್ ಕಟ್ಟಿರುತ್ತಾರೆ. ಯಾವುದೇ ಘಟನೆ ಸಂಭವಿಸಿದರೂ ಈ ವೃತ್ತವೇ ಸಾಕ್ಷಿಯಾಗುತ್ತದೆ. ಹುಡುಗರು ವಿಷ್ಣುವರ್ಧನ್ ಅವರ ಆದರ್ಶಗಳನ್ನು ಪಾಲಿಸುತ್ತಿರುತ್ತಾರೆ. ಪ್ರತಿಯೊಂದು ಪಾತ್ರಗಳ ಆಗಮನ ಮತ್ತು ನಿರ್ಗಮನ ಅರ್ಥಪೂರ್ಣವಾಗಿದೆ’ ಎಂದರು ಲಕ್ಷ್ಮಿ ದಿನೇಶ್.

ಸಾಲ ಮರುಪಾವತಿ ಮಾಡುವ ಹುಡುಗನ ಪಾತ್ರಕ್ಕೆ ಗುರುರಾಜ್ ಜಗ್ಗೇಶ್ ಬಣ್ಣ ಹಚ್ಚಿದ್ದಾರೆ. ಆಕೃತಿ, ಪ್ರಕೃತಿ, ಸಂಸ್ಕೃತಿ ಹೆಸರಿನಲ್ಲಿ ಸಂಹಿತಾ ವಿನ್ಯಾ, ಡಾ.ಜಾನವಿ ಮತ್ತು ದಿವ್ಯಾಗೌಡ ನಟಿಸಿದ್ದಾರೆ. ಮಡಿಕೇರಿ ಮತ್ತು ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ.

ಚಿತ್ರದ ಐದು ಹಾಡುಗಳಿಗೆ ಶ್ರೀವತ್ಸ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ.ಎಲ್. ರವಿ ಅವರದು. ಉದ್ಯಮಿ ಆರ್. ಭಾಸ್ಕರ್ ಅವರು ಪುತ್ರ ರುತ್ವಿಕ್ ಬಿ. (ಆರ್ಬಿ) ಹೆಸರಿನಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.