ಕನ್ನಡ ಚಲನಚಿತ್ರ ರಂಗದಲ್ಲಿ ಒಂದು ದಶಕದಿಂದ ತೊಡಗಿಸಿಕೊಂಡು, ಸುಮಾರು ಮೂವತ್ತು ಸಿನಿಮಾಗಳಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ, ಕನ್ನಡ ಜನತೆಯ ಮನ ಗೆದ್ದಿರುವವರಲ್ಲಿ ಮುದ್ದಿನ ಕೊಡವ ಬೆಡಗಿ ಹರ್ಷಿಕಾ ಪೂಣಚ್ಚ ಕೂಡ ಒಬ್ಬರು.

2008ರಲ್ಲಿ ತಮ್ಮ ಮೊದಲನೇ ಚಿತ್ರ ‘ಪಿಯುಸಿ’ಯಿಂದ ಪ್ರಾರಂಭವಾದ ಹರ್ಷಿಕಾ ಅವರ ಸಿನಿ ಪಯಣ ಇಂದಿನವರೆಗೂ ಮೊಗ್ಗರಳಿದಂತೆ ಅರಳುತ್ತಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಕೊಡವ ಅಲ್ಲದೇ ಬಾಲಿವುಡ್ ಅಂಗಳದಲ್ಲೂ ಕೆಲ ಕಾಲ ಓಡಾಡಿದ್ದ ನಟಿ ಹರ್ಷಿಕಾ ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ

* ಕನ್ನಡದ ಜೊತೆಗೆ ನೀವು ಪ್ರಾದೇಶಿಕ ಭಾಷೆ ಸಿನಿಮಾಗಳಲ್ಲಿ ನಟಿಸಲು ಕಾರಣ...
ಭಾಷೆ ಪ್ರಾದೇಶಿಕವಾಗಿರಲಿ ಅಥವಾ ಆಗದಿರಲಿ, ನಟನೆಗೆ ಯಾವುದೇ ಭಾಷೆಯಿಲ್ಲ. ನಟಿಸುವುದು ಮತ್ತು ನಟನೆಯ ಮೂಲಕ ಜನರನ್ನು ತಲುಪುವುದೇ ಒಂದು ಭಾಷೆಯಿದ್ದಂತೆ. ನನಗೆ ಚಿತ್ರದ ಕಥೆ ಮತ್ತು ನನಗೊಪ್ಪುವ ಪಾತ್ರ ಸಿಕ್ಕರೆ ನಾನು ಯಾವುದೇ ಭಾಷೆಯಲ್ಲಿ ಭಿನ್ನಾಭಿಪ್ರಾಯವಿಲ್ಲದೆ ನಟಸುತ್ತೇನೆ.

* ಬಾಲಿವುಡ್ ಅಂಗಳದಲ್ಲಿ ನಟನೆಗೆ ಅವಕಾಶ ಸಿಕ್ಕಾಗ ಅಲ್ಲಿಂದ ಹೊರನಡೆದಿದ್ದ್ಯಾಕೆ?
ಬಾಲಿವುಡ್ ಆಗಿರಲಿ, ಸ್ಯಾಂಡಲ್‌ವುಡ್ ಆಗಿರಲಿ, ನನಗೆ ಎಲ್ಲಿ ಕಂಫರ್ಟ್ ಅನಿಸಲ್ವೋ ನಾನು ಅಲ್ಲಿರಲ್ಲ. ನಾನು ಕ್ಯಾಸ್ಟಿಂಗ್ ಕೌಚ್ ಬಗ್ಗೆ ಮೊದಲಿನಿಂದಲೂ ಮಾತನಾಡಿರುವೆ. ನನಗೂ ಕ್ಯಾಸ್ಟಿಂಗ್ ಕೌಚ್ ಅನುಭವ ಆಗಿದೆ. ಬಾಲಿವುಡ್ ಸಿನಿಮಾವೊಂದಕ್ಕೆ ನಟಿಸುತ್ತಿರುವಾಗ ನನಗೆ ಆ ಅನುಭವ ಆದಮೇಲೆ ನಾನು ಸೀದಾ ಹೊರನಡೆದೆ ಅಷ್ಟೇ.

* ನಿಮ್ಮ ಮುಂದಿನ ಪ್ರಾಜೆಕ್ಟ್...
‘ಚಿಟ್ಟೆ’ ಸಿನಿಮಾದ ನಂತರ ‘ಉದ್ಘರ್ಷ’ ಸಿನಿಮಾ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಜೊತೆಗೆ ಇನ್ನೂ ಒಂದು ಪ್ರೊಜೆಕ್ಟ್ ಅನ್ನು ಕೈಗೆತ್ತಿಕೊಂಡಿದ್ದೇನೆ. ಅದರ ಬಗ್ಗೆ ಸದ್ಯ ಪ್ರಸ್ತಾಪ ಬೇಡ. ಇನ್ನೂ ಕೆಲದಿನಗಳಲ್ಲಿ ನಾನೇ ನನ್ನ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ನೀಡುವೆ.

* ಇತ್ತೀಚಿಗೆ ನೀವು ಮೀಟೂ ಅಭಿಯಾನದಲ್ಲಿ ಅರ್ಜುನ್ ಸರ್ಜಾ ಪರ ಮಾತನಾಡಿದ್ದೀರಿ...?
ನೋಡಿ. ನಾನು ಅರ್ಜುನ್ ಸರ್ಜಾ ಪರನೂ ಅಲ್ಲ, ಶ್ರುತಿ ಹರಿಹರನ್ ಪರನೂ ಅಲ್ಲ. ಅಥವಾ ಇನ್ನ್ಯಾರದ್ದೋ ಪರನೂ ಅಲ್ಲ. ನಾನು ಬೆಂಬಲ ನೀಡುವುದು ಸತ್ಯಕ್ಕೆ. ನಾನು ಸತ್ಯದ ಪರವಾಗಿ ಮಾತನಾಡುತ್ತೇನೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಅಷ್ಟೇ.

* ದಕ್ಷಿಣದ ಖ್ಯಾತ ನಟ ಸಿಂಬು ಜೊತೆಗಿನ ನಿಮ್ಮ ಲಿಪ್‌ಲಾಕ್ ಗಾಸಿಪ್ ಬಗ್ಗೆ ಏನು ಹೇಳ್ತೀರಾ?
ನಾನು ಇದರ ಬಗ್ಗೆ ಆಗಲೇ ಮಾತನಾಡಿದೀನಿ. ಈಗಲೂ ಹೇಳ್ತಿದೀನಿ. ಸಿಂಬು ಜೊತೆ ಲಿಪ್‌ಲಾಕ್ ಮಾಡಿರೋ ನಟಿ ನಾನಲ್ಲ. ಅವರು ಯಾರು ಅಂತ ನನಗೆ ಗೊತ್ತು ಆದರೆ ಅವರ ಬಗ್ಗೆ ಹೇಳೊದು ಬೇಡ.

* ಸಿನಿಮಾ ಜಗತ್ತಿಗೆ ಕಾಲಿಟ್ಟು ಒಂದು ದಶಕವಾಯಿತು. ಕನ್ನಡದ ಜನರ ಮನದಲ್ಲಿ ಹರ್ಷಿಕಾ ಅನ್ನುವ ಒಂದು ಸ್ಪಷ್ಟ ಕಲ್ಪನೆಯನ್ನು ನಿಮ್ಮ ನಟನೆಯ ಮೂಲಕ ತೋರಿಸಿರುವಿರಿ. ಮದುವೆ ಯಾವಾಗ ಅಂತ ಹೇಳ್ತಿರಾ?

(ನಗುತ್ತಾ)...ನಾನು ತುಂಬಾ ಸ್ಟ್ರೈಟ್ ಫಾರ್ವರ್ಡ್ ಆಗಿ ಮಾತಾಡ್ತೀನಿ. ಮದುವೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಆದರೆ ಒಂದು ಮಾತಂತೂ ನಿಜ...ನಾನೆಲ್ಲೋ ಒಂದು ಕಡೆ ಹೋಗಿ ರಿಜಿಸ್ಟರ್ಡ್ ಮ್ಯಾರೇಜ್ ಮಾಡ್ಕೊಂಡ್ ಬಂದು ಜನರ ಮುಂದೆ ನಿಲ್ಲಲ್ಲ. ನನ್ನ ಎಂಗೇಜ್‌ಮೆಂಟ್ ಮತ್ತು ಮದುವೆಯನ್ನು ಕನ್ನಡದ ಜನತೆ ತಮ್ಮ ಮನೆ ಸಂಭ್ರಮವೆಂಬಂತೆ ಕಾಣಬೇಕು. ಎಲ್ಲರಿಗೂ ಹೇಳಿಯೇ ಮದುವೆ ಆಗ್ತೀನಿ.

* ನಟ ಭುವನ್ ಅವರ ಜೊತೆ ನಿಮ್ಮ ಮದುವೆ ಗಾಸಿಪ್ ಬಗ್ಗೆ...
ಭುವನ್ ನನ್ನ ಸಂಬಂಧಿ. ಅವನು ಮಾಡೆಲಿಂಗ್ ಮಾಡುತ್ತಾ ಮಾಡುತ್ತಾ ನಟನಾಗಿದ್ದಾನೆ. ನಾನು ನನ್ನ ಸಿನಿಪಯಣದಲ್ಲಿ ಬ್ಯುಸಿಯಾಗಿದ್ದೇನೆ. ನಾವಿಬ್ಬರೂ ಮದುವೆ ಆಗುತ್ತೇವೆ ಅಂತ ನಾನು ಎಲ್ಲಿಯೂ ಹೇಳಿಲ್ಲ.

* ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್...
ನೀವು ಏನು ಧರಿಸ್ತೀರೋ ಅದು ನಿಮಗೆ ಖುಷಿ ಕೊಡುವಂತಿರಬೇಕು. ಸುಮ್ ಸುಮ್ನೇ ಯಾವುದೋ ಟ್ರೆಂಡ್ ಫಾಲೋ ಮಾಡೋಕ್ಕಿಂತ ನನಗೆ ಒಪ್ಪುವಂತಹ ಡ್ರೆಸಿಂಗ್ ಮಾಡಿಕೊಂಡು ಕಂಫರ್ಟ್ ಆಗಿರೋದು ನನಗೆ ಇಷ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.