ಕೈಯಲ್ಲಿ ‘ಮದುವೆಯ ಮಮತೆಯ ಕರೆಯೋಲೆ’ ಹಿಡಿದುಕೊಂಡು ಬೆಳ್ಳಿ ತೆರೆಗೆ ಬಂದವರು ನಟ ಸೂರಜ್ ಗೌಡ. ‘ಕಹಿ’ ಮತ್ತು ‘ಸಿಲಿಕಾನ್ ಸಿಟಿ’ ಚಿತ್ರಗಳಲ್ಲಿನ ಭಿನ್ನವಾದ ಪಾತ್ರದ ಮೂಲಕ ಪ್ರೇಕ್ಷಕರ ಹೃದಯ ಗೆದ್ದರು.

ತೆಲುಗಿನಲ್ಲಿ ಅವಕಾಶಗಳು ಹುಡುಕಿಕೊಂಡು ಬಂದರೂ ಕನ್ನಡದ ಮೇಲಿನ ಅಭಿಮಾನದಿಂದ ಅವುಗಳನ್ನು ಸೂರಜ್ ತಿರಸ್ಕರಿದ್ದು ಉಂಟು. ಸಿನಿಮಾ ಒಪ್ಪಿಕೊಳ್ಳುವಲ್ಲಿಯೂ ಅವರು ಸಾಕಷ್ಟು ಚ್ಯೂಸಿ. ಕನ್ನಡದಲ್ಲಿಯೇ ಅವಕಾಶಗಳು ಇರುವಾಗ ನಾನೇಕೆ ಪರಭಾಷೆಗೆ ಹೋಗಲಿ ಎಂದು ಕೂಲ್ ಆಗಿಯೇ ಪ್ರಶ್ನಿಸುತ್ತಾರೆ.

ಅಂದಹಾಗೆ ಸೂರಜ್ ಈಗ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ನವಿರು ಪ್ರೇಮದ ಸುತ್ತ ಅವರೇ ಕಥೆ ಹೊಸೆದಿದ್ದಾರಂತೆ. ಈ ಚಿತ್ರಕ್ಕೆ ವರನಟ ರಾಜ್ಕುಮಾರ್ ಅವರ ಮೊಮ್ಮಗಳಾದ ಧನ್ಯಾ ರಾಮ್ಕುಮಾರ್ ನಾಯಕಿ. ಧನ್ಯಾ ಅವರು ಪೂರ್ಣಿಮಾ ಮತ್ತು ರಾಮ್ ಕುಮಾರ್ ದಂಪತಿಯ ಪುತ್ರಿ. ಈ ಚಿತ್ರದ ಮೂಲಕ ಅವರು ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ.

ಇದು ಫ್ಯಾಂಟಸಿ ಕಥೆಯಲ್ಲ. ರಿಯಾಲಿಟಿ, ಕಾಮಿಡಿ, ಪ್ರೀತಿ ಮೇಳೈಸಿರುವ ಚಿತ್ರ. ‘ಸಿಲಿಕಾನ್ ಸಿಟಿ’ ಚಿತ್ರದ ಕೋ ಡೈರೆಕ್ಟರ್ ಆಗಿದ್ದ ಸುಮನ್ ಜಾದುಗಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ಕಮಲ ಹಾಸನ್ ಅವರ ‘ಉತ್ತಮ ವಿಲನ್’ ಚಿತ್ರಕ್ಕೂ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಅವರಿಗಿದೆ.

‘ನಮ್ಮ ಸುತ್ತಮುತ್ತವೇ ನಡೆಯುವ ಕಥೆ ಇದು. ಕಥೆಯಲ್ಲಿ ಹೊಸತನ ಇದೆ. ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರಕಥೆ ಹೊಸೆಯಲಾಗಿದೆ’ ಎನ್ನುತ್ತಾರೆ ಸೂರಜ್ ಗೌಡ.

‘ಇದು ನನ್ನ ಮೊದಲ ಚಿತ್ರ. ಚಿತ್ರಕ್ಕಾಗಿ ಕಾರ್ಯಾಗಾರ ನಡೆಯುತ್ತಿದೆ. ನಾನು ಕೂಡ ಸಾಕಷ್ಟು ತಯಾರಿ ನಡೆಸಿದ್ದೇನೆ’ ಎಂದು ಖುಷಿ ಹಂಚಿಕೊಂಡರು ಧನ್ಯಾ ರಾಮ್ಕುಮಾರ್.

ಚಿತ್ರದಲ್ಲಿ ನಾಲ್ಕು ಹಾಡುಗಳು ಇರಲಿದ್ದು, ರಘು ದೀಕ್ಷಿತ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಟೈಟಲ್ ಇನ್ನೂ ಅಂತಿಮಗೊಂಡಿಲ್ಲ. ವೈಟ್ ಅಂಡ್ ಗ್ರೇ ಮೀಡಿಯಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಜುಲೈನಿಂದ ಶೂಟಿಂಗ್ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.