ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದ 14ನೇ ಆವೃತ್ತಿಯು ಆರಂಭಗೊಂಡಿದ್ದು, ಚಿತ್ರೋತ್ಸವಕ್ಕೆ ಆಯ್ಕೆಯಾದ ಕಿರುಚಿತ್ರಗಳ ಪ್ರದರ್ಶನ ಆಗಸ್ಟ್ 16ರಿಂದ 18ರವರೆಗೆ ನಗರದ ವಿವಿಧೆಡೆ ನಡೆಯಲಿದೆ.

ಈ ಬಾರಿಯ ಚಿತ್ರೋತ್ಸವವನ್ನು ಒಟಿಟಿ ಮತ್ತು ವಿವಿಧ ತಾಣಗಳಲ್ಲಿ ಪ್ರದರ್ಶನ ಹೀಗೆ ಎರಡು ವಿಭಿನ್ನ ಮಾದರಿಯಲ್ಲಿ ಆಯೋಜಿಸಲಾಗಿದೆ. ಸುಚಿತ್ರಾ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಪ್ರೆಸ್ಟಿಜ್ ಶ್ರೀಹರಿ ಖೋಡೆ ಸೆಂಟರ್ ಮತ್ತು ಗೋಥೆ ಇನ್ ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನದಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ.

ಚಿತ್ರೋತ್ಸವಕ್ಕೆ ಆಯ್ಕೆ ಮಾಡಿರುವ ಕಿರುಚಿತ್ರಗಳನ್ನು ಚಿತ್ರ ಪ್ರೇಮಿಗಳು ಅಂತರ್ಜಾಲ ತಾಣ https://www.bisff.in ನಲ್ಲಿ ವೀಕ್ಷಿಸಬಹುದು. ಚಿತ್ರೋತ್ಸವಕ್ಕೆ ಹೆಸರು ನೋಂದಾಯಿಸಿದ ವೀಕ್ಷಕರು ಆಗಸ್ಟ್ 18ರವರೆಗೆ ಚಿತ್ರಗಳನ್ನು ವೀಕ್ಷಿಸಬಹುದು.

ಯುವ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಿಗೆ ಪ್ರತಿಷ್ಠಿತ ವೇದಿಕೆ ಒದಗಿಸಲು, ಉದ್ಯಮದ ಪ್ರಮುಖರಿಂದ ಮಾರ್ಗದರ್ಶನ ನೀಡಲು ಮತ್ತು ಚಿತ್ರ ನಿರ್ಮಾಪಕರನ್ನು ಪೋಷಿಸಲು ‘ಬಿಐಎಸ್ಎಫ್ಎಫ್’ ಬದ್ಧವಾಗಿದೆ. 2020ರಲ್ಲಿ ಆಸ್ಕರ್ ಅಕಾಡೆಮಿ ಅರ್ಹತಾ ಸ್ಥಾನಮಾನ ಪಡೆದ ನಂತರ, ಅಕಾಡೆಮಿ ಅವಾರ್ಡ್ಸ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಕಿರುಚಿತ್ರಗಳನ್ನು ಗುರುತಿಸುವ ಮಹಾದ್ವಾರವಾಗಿ `ಬಿಐಎಸ್ಎಫ್ಎಫ್’ ಕಾರ್ಯನಿರ್ವಹಿಸುತ್ತಿದೆ.

ಈ ಬಾರಿಯ ಚಿತ್ರೋತ್ಸವದ ಆಶಯವು ಒಳಗೊಳ್ಳುವಿಕೆ ಮತ್ತು ಹೊರತುಪಡಿಸುವಿಕೆ (ಇನ್ಕ್ಲೂಷನ್ ಆ್ಯಂಡ್ ಎಕ್ಸ್ಕ್ಲೂಷನ್) ಆಗಿದೆ. ಅಂಗವಿಕಲ ಚಿತ್ರ ನಿರ್ಮಾಪಕರು ಮತ್ತು ಲೈಂಗಿಕ ಅಲ್ಪಸಂಖ್ಯಾತ ಚಿತ್ರ ನಿರ್ಮಾಪಕರಿಗೂ ಚಿತ್ರೋತ್ಸವದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಕಲೆ ಮತ್ತು ಪ್ರೀತಿಯ ಎಲ್ಲ ವಿಧಾನಗಳಿಗೂ ನಮ್ಮಲ್ಲಿ ಅವಕಾಶವಿದೆ ಎಂದು ಚಿತ್ರೋತ್ಸವದ ನಿರ್ದೇಶಕ ಆನಂದ್ ವರದರಾಜ್ ಅವರು ಹೇಳಿದ್ದಾರೆ.

ಚಿತ್ರೋತ್ಸವದಲ್ಲಿ ಭಾಗವಹಿಸಲು 96 ದೇಶಗಳಿಂದ 3,212 ಪ್ರವೇಶಗಳು ಬಂದಿವೆ. ಇವುಗಳಲ್ಲಿ ಶೇ 23ರಷ್ಟು ಮಹಿಳಾ ಚಿತ್ರನಿರ್ಮಾಪಕರು ಇದ್ದಾರೆ. 284ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.