ನ್ಯೂಯಾರ್ಕ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ನ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 'ಹೋಪರ್ಎಚ್ಕ್ಯೂ' ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಸುಮಾರು 29 ಕೋಟಿ ಫಾಲೋವರ್ಸ್ ಹೊಂದಿರುವ ಪೋರ್ಚುಗಿಸ್ನ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.

ಅಮೆರಿಕದ 'ದಿ ರಾಕ್' ಖ್ಯಾತಿಯ ಡಬ್ಳ್ಯುಡಬ್ಳ್ಯುಇ ಸ್ಟಾರ್, ಹಾಲಿವುಡ್ ನಟ ಡ್ವಾಯ್ನ್ ಜಾನ್ಸನ್ ದ್ವಿತೀಯ ಹಾಗೂ ಅಮೆರಿಕದ ಪಾಪ್ ಗಾಯಕಿ ಅರಿನಾ ಗ್ರಾಂಡೆ ತೃತೀಯ ಸ್ಥಾನದಲ್ಲಿದ್ದಾರೆ. ಅಮೆರಿಕದ ಮಾಡೆಲ್ ಕೈಲೈ ಜೆನ್ನರ್, ಪಾಪ್ ತಾರೆ ಸಲೀನಾ ಗೋಮೆಜ್ ನಂತರದ ಸ್ಥಾನಗಳಲ್ಲಿದ್ದಾರೆ. ಇವರೆಲ್ಲರು ಪ್ರತಿಯೊಂದು ಪ್ರಾಯೋಜಿತ ಪೋಸ್ಟ್ಗೆ 1,450,000 ಡಾಲರ್ಗಿಂತ ಹೆಚ್ಚು ಸಂಪಾದಿಸುತ್ತಾರೆ. ಅಂದರೆ ಸುಮಾರು 10 ಕೋಟಿ ರೂಪಾಯಿಗಳಿಂತಲೂ ಹೆಚ್ಚು ಗಳಿಸುತ್ತಾರೆ.

ಟಾಪ್ 20ರಲ್ಲಿ ಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಮಾಡುವ ಪ್ರಚಾರದ ಪೋಸ್ಟ್ ಒಂದಕ್ಕೆ ಸುಮಾರು 5 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸುತ್ತಾರೆ. 12.5 ಕೋಟಿ ಫಾಲೋವರ್ಸ್ ಹೊಂದಿರುವ ಕೊಹ್ಲಿ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ 23ನೇ ಸ್ಥಾನದಲ್ಲಿದ್ದರು.

ವಿಡಿಯೊ: ಸ್ಟಾರ್ಟಪ್ ಬಾತುಕೋಳಿಯಂತಿದ್ದರೆ ಹುಲಿ ಬಾಯಿಂದ ನುಣುಚಿಕೊಳ್ಳಬಹುದು!

ಹಾಲಿವುಡ್ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ 27ನೇ ಸ್ಥಾನದಲ್ಲಿದ್ದು, ಪ್ರತಿ ಜಾಹೀರಾತಿನ ಪೋಸ್ಟ್ಗೆ ಸುಮಾರು 3 ಕೋಟಿ ರೂಪಾಯಿ ಗಳಿಸುತ್ತಾರೆ. ಪ್ರಿಯಾಂಕಾ ಇನ್ಸ್ಟಾಗ್ರಾಮ್ನಲ್ಲಿ 6.4 ಕೋಟಿಗಿಂತ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಅಮೆರಿಕದ ಸೆಲೆಬ್ರಿಟಿ ಕಿಮ್ ಕರ್ದಿಷನ್, ಫುಟ್ಬಾಲ್ ತಾರೆ ಲಿಯೋನಲ್ ಮೆಸ್ಸಿ, ಬಿಯೊನ್ಸ್ ನೋಲ್ಸ್, ಜಸ್ಟಿನ್ ಬೈಬರ್, ಕೆಂಡಲ್ ಜೆನ್ನರ್ ಟಾಪ್ 10ರೊಳಗೆ ಕಾಣಿಸಿಕೊಂಡಿದ್ದಾರೆ.

ವಿಶ್ವ ಭೂಪಟ: ಚರ್ಚೆಗೆ ಗ್ರಾಸವಾದ ಮಹಾಭಾರತದ ಮೊಲ ಮತ್ತು ಆಲದಮರದ ಎಲೆಗಳ ಕಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.