ಮುಂಬೈ: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾಪ್ ಗಾಯಕಿ ರಿಹಾನ್ನಾ ಮಾಡಿದ್ದ ಟ್ವೀಟ್ನ ವಿಚಾರವೀಗ ಬಾಲಿವುಡ್ ತಾರೆಗಳಾದ ತಾಪ್ಸಿ ಪನ್ನು ಮತ್ತು ಕಂಗನಾ ರನೌತ್ ನಡುವಿನ ಜಗಳಕ್ಕೆ ಕಾರಣವಾಗಿದೆ.

ಈ ಬಗ್ಗೆ ಗುರುವಾರ ಟ್ವೀಟ್ ಮಾಡಿದ್ದ ತಾಪ್ಸಿ ಪನ್ನು, 'ಕೇವಲ ಒಂದು ಟ್ವೀಟ್, ಒಂದು ಜೋಕ್ ಅಥವಾ ಒಂದು ಕಾರ್ಯಕ್ರಮದಿಂದ ನಿಮ್ಮ ಒಗ್ಗಟ್ಟು, ನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ಅಲುಗಾಡುತ್ತದೆ ಎಂದಾದರೆ, ಮೊದಲು ನಿಮ್ಮ ಮೌಲ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಿ. ಬೇರೆಯವರಿಗೆ ಪ್ರೊಪಗಾಂಡದ ಬಗ್ಗೆ ಕಲಿಸಲು ಬರಬೇಡಿ' ಎಂದು ಹೇಳಿದ್ದಾರೆ.

ತಾಪ್ಸಿ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕಂಗನಾ ರನೌತ್, 'ಇದು ಬಿ ಗ್ರೇಡ್ ಜನರ ಬಿ ಗ್ರೇಡ್ ಯೋಚನೆ. ವ್ಯಕ್ತಿಯೊಬ್ಬ ತನ್ನ ತಾಯ್ನೆಲ ಹಾಗೂ ಕುಟುಂಬದ ಪರವಾಗಿ ನಿಲ್ಲಬೇಕು. ಅದೇ ಕರ್ಮ ಮತ್ತು ಅದೇ ಧರ್ಮವಾಗಿದೆ. ಈ ದೇಶಕ್ಕೆ ಹೊರೆಯಾಗಿರುವ ನೀವು ಉಚಿತ ಆಹಾರವನ್ನು ತಿನ್ನುವವಳಂತೆ ಯೋಚಿಸಬೇಡಿ. ಈ ಕಾರಣಕ್ಕಾಗಿಯೇ ಇಂತವರಿಗೆ ಬಿ ಗ್ರೇಡ್ ಎಂಬುದಾಗಿ ನಾನು ಕರೆಯುತ್ತೇನೆ' ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತರ ರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಬೆಂಬಲ ಸೂಚಿಸಿದ್ದರು.

ಈ ಕುರಿತು ಸಿಎನ್ಎನ್ ಲೇಖನ ಸಮೇತ ಟ್ವೀಟ್ ಮಾಡಿರುವ ರಿಹಾನ್ನಾ, ನಾವ್ಯಾಕೆ ಈ ವಿಷಯದಚರ್ಚಿಸುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು.

ರಿಹಾನ್ನಾ ಟ್ವೀಟ್ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.

ಇದನ್ನೂ ಓದಿ...

ಪ್ರಲಾಪ ಸಾಕು ಮಾಡಿ: ಕೇಂದ್ರ ಸರ್ಕಾರಕ್ಕೆ ವಿಪಕ್ಷಗಳ ತರಾಟೆ

ರೈತರ ಪ್ರತಿಭಟನೆ: ಟ್ವೀಟ್ ಬೆಂಬಲಕ್ಕೆ ಕೇಂದ್ರ ಕಿಡಿ

ಭಾರತದ ಚಿತ್ರಣಕ್ಕೆ ಆಗಿರುವ ಹಾನಿಯನ್ನು ಕ್ರಿಕೆಟಿಗರಿಂದ ಪರಿಹರಿಸಲಾಗದು: ತರೂರ್

ರೈತರು, ಕ್ರಿಕೆಟಿಗರ ಬಗ್ಗೆ ಅವಹೇಳನ: ನಟಿ ಕಂಗನಾ ಟ್ವೀಟ್ ಅಳಿಸಿಹಾಕಿದ ಟ್ವಿಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.