ಕ್ರಿಕೆಟಿಗ ಎಂ. ಎಸ್. ಧೋನಿ ಕಳೆದ ವರ್ಷ ಡಾಕ್ಯುಮೆಂಟರಿ ನಿರ್ಮಾಣ ಮಾಡುವ ಮೂಲಕ ಮನೋರಂಜನಾ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಈಗ ಪೌರಾಣಿಕ ಹಿನ್ನೆಲೆಯುಳ್ಳ ವೈಜ್ಞಾನಿಕ ವೆಬ್ಸರಣಿ ನಿರ್ಮಾಣ ಮಾಡಲು ಮನಸ್ಸು ಮಾಡಿದ್ದಾರೆ ಧೋನಿ.

ಆಗಸ್ಟ್ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ, 2 ಬಾರಿ ವಿಶ್ವಕಪ್ ವಿಜೇತರಾಗಿದ್ದ ಎಂಎಸ್ಡಿ ‘ಧೋನಿ ಎಂಟರ್ಟೈನ್ಮೆಂಟ್’ ಎಂಬ ಹೆಸರಿನಲ್ಲಿ ಮೀಡಿಯಾ ಕಂಪನಿಯೊಂದನ್ನು ತೆರೆದಿದ್ದರು. 2019ರಲ್ಲಿ ‘ರೋರ್ ಆಫ್ ದಿ ಲಯನ್’ ಎಂಬ ಹೆಸರಿನ ಡಾಕ್ಯುಮೆಂಟರಿ ನಿರ್ಮಾಣ ಮಾಡುವ ಮೂಲಕ ಮೊದಲ ಬಾರಿ ನಿರ್ಮಾಪಕರೆನ್ನಿಸಿಕೊಂಡಿದ್ದರು.

ಈಗ ಯುವ ಲೇಖಕರೊಬ್ಬರ ಇನ್ನೂ ಪ್ರಕಟವಾದ ಕೃತಿಯನ್ನು ವೆಬ್ಸರಣಿ ಮಾಡಲು ಮುಂದಾಗಿದೆ ಧೋನಿ ಎಂಟರ್ಟೈನ್ಮೆಂಟ್ ಸಂಸ್ಥೆ.

ಈ ವೆಬ್ಸರಣಿಯ ಬಗ್ಗೆ ಮಾತನಾಡಿರುವ ಧೋನಿ ಎಂಟರ್ಟೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸಾಕ್ಷಿ ಧೋನಿ ‘ಪೌರಾಣಿಕ ಹಿನ್ನೆಲೆಯುಳ್ಳ ಈ ವೈಜ್ಞಾನಿಕ ವೆಬ್ಸರಣಿಯು ಅಘೋರಿಯೊಬ್ಬರ ಕತೆಯನ್ನು ಹೊಂದಿದೆ’ ಎಂದಿದ್ದಾರೆ.

ಸದ್ಯ ಪಾತ್ರವರ್ಗ ಹಾಗೂ ಲೊಕೇಷನ್ ಹುಡುಕಾಟದಲ್ಲಿದೆ ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.