ನಟ ಅಕ್ಷಯ್ ಕುಮಾರ್ ಅವರು ಪತ್ನಿ ಟ್ವಿಂಕಲ್ ಖನ್ನಾ ಅವರಿಗೆ ಅಪರೂಪದ ಕಿವಿಯೋಲೆಯನ್ನು ಉಡುಗೊರೆ ನೀಡಿದ್ದಾರೆ. ಅದರಲ್ಲಿ ಏನು ವಿಶೇಷ ಅಂತಿರಾ? ಈ ಕಿವಿಯೋಲೆ ಚಿನ್ನ ಅಥವಾ ವಜ್ರದ್ದಲ್ಲ. ಬದಲಾಗಿ ಈರುಳ್ಳಿ ಕಿವಿಯೋಲೆ!

ಸಾಮಾನ್ಯವಾಗಿ ನಟರು ತಮ್ಮ ಪತ್ನಿಯರಿಗೆ ಬೆಲೆಬಾಳುವ ದುಬಾರಿ ವಜ್ರದ ಉಡುಗೊರೆ ನೀಡಿದಾಗ ಸುದ್ದಿಯಾಗುವುದು ಸಹಜ. ಆದರೆ, ಅಕ್ಷಯ್ ಪತ್ನಿಗೆ ವಿಶೇಷ ಕಾಣಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಗಂಡ ನೀಡಿದ ಉಡುಗೊರೆಯನ್ನು ನಸುನಗುತ್ತಲೇ ಸ್ವೀಕರಿಸಿದ ಟ್ವಿಂಕಲ್ ಈರುಳ್ಳಿ ಕಿವಿಯೋಲೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮುಂಬರುವ ‘ಗುಡ್ ನ್ಯೂಸ್’ ಚಿತ್ರದ ಪ್ರಮೋಷನ್‌ಗಾಗಿ ಕಪಿಲ್ ಶರ್ಮಾ ಷೋದಲ್ಲಿ ಅಕ್ಷಯ್ ಮತ್ತು ಕರೀನಾ ಕಪೂರ್‌ಭಾಗವಹಿಸಿದ್ದರು. ಷೋದಲ್ಲಿ ಕರೀನಾಗೆ ಈ ಉಡುಗೊರೆ ನೀಡಲಾಗಿತ್ತು. ಕರೀನಾ ಈರುಳ್ಳಿ ಕಿವಿಯೋಲೆ ಬಗ್ಗೆ ಆಸಕ್ತಿ ತೋರದ ಕಾರಣ ಅಕ್ಷಯ್ ಅವನ್ನು ಮನೆಗೆ ತಂದರು. ಈರುಳ್ಳಿ ಕಿವಿಯೋಲೆ ಕಂಡು ಮುನಿಸಿಕೊಳ್ಳದ ಟ್ವಿಂಕಲ್ ಗಂಡನ ಈ ಹಾಸ್ಯ ಪ್ರವೃತ್ತಿ ಕಂಡು ತಾವು ಮನಸಾರೆ ನಕ್ಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.