ಬೆಂಗಳೂರು: ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಅವರು ಐಪಿಎಲ್ ಟೂರ್ನಿಯ ಮೂಲಕ ಭಾರತದೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ.

ಐಪಿಎಲ್ನಲ್ಲಿ ಹೈದರಾಬಾದ್ ತಂಡದ ಪರ ಆಡುತ್ತಿದ್ದ ಅವರು, ಇಲ್ಲಿನ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ವಾರ್ನರ್, ಕನ್ನಡ, ತೆಲುಗು, ಹಿಂದಿ ಹಾಡುಗಳಿಗೆ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ‘ಪುಷ್ಪ’ ಸಿನಿಮಾದ ‘ಶ್ರೀವಲ್ಲಿ..’ ಕನ್ನಡ ಹಾಡಿಗೆ ಹೆಜ್ಜೆ ಹಾಕಿದ್ದು, ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ಹೊಸ ರೀಲ್ಸ್ ಸಖತ್ ವೈರಲ್ ಆಗುತ್ತಿದ್ದು, ಇದುವರೆಗೆ 14.28 ಲಕ್ಷ ಮಂದಿ ವಿಡಿಯೊವನ್ನು ಇಷ್ಟಪಟ್ಟಿದ್ದಾರೆ.

‘ಪುಷ್ಪ’ ಸಿನಿಮಾದ ‘ಶ್ರೀವಲ್ಲಿ..’ ಹಾಡು ಹೆಚ್ಚು ಖಾತ್ಯಿ ಗಳಿಸಿದೆ. ಅನೇಕರು ನಟ ಅಲ್ಲು ಅರ್ಜುನ್ ಅವರು ಮಾಡಿದ ಡ್ಯಾನ್ಸ್ ಅನ್ನು ಅನುಕರಿಸಿ ರೀಲ್ಸ್ ಮಾಡುತ್ತಿದ್ದಾರೆ.

‘ನಿಮ್ಮ ಕನ್ನಡಾಭಿಮಾನಕ್ಕೆ ಧನ್ಯವಾದ’ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.