ಉಜ್ಜೈನಿ: ಬಾಲಿವುಡ್ನ ತಾರಾ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ಗೆ ಮಧ್ಯ ಪ್ರದೇಶದಲ್ಲಿ ದೇಗುಲ ಪ್ರವೇಶ ನಿರಾಕರಿಸಲಾಗಿದೆ.

ಮಧ್ಯ ಪ್ರದೇಶದ ಉಜ್ಜೈನಿಯಲ್ಲಿರುವ ಪ್ರಸಿದ್ಧ ಮಹಾಕಾಲ್ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಲು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಿರ್ಧರಿಸಿದ್ದರು.

ಆದರೆ, ಬಜರಂಗ ದಳ ಕಾರ್ಯಕರ್ತರು ಈ ಜೋಡಿಗೆ ದೇಗುಲ ಪ್ರವೇಶ ನಿರಾಕರಿಸಿದ್ದಾರೆ. ಅಲ್ಲದೆ, ರಣಬೀರ್ ಮತ್ತು ಆಲಿಯಾ ಸ್ಥಳಕ್ಕೆ ಬರುತ್ತಿದ್ದಂತೆ ‘ಜೈ ಶ್ರೀರಾಮ್‘ ಘೋಷಣೆ ಕೂಗಿದ್ದಾರೆ.

ರಣಬೀರ್ ಅವರು ಕೆಲಸಮಯದ ಹಿಂದೆ, ಸಂದರ್ಶನವೊಂದರಲ್ಲಿ ಗೋಮಾಂಸ ತಿನ್ನಲು ಇಷ್ಟ ಎಂದು ಹೇಳಿಕೊಂಡಿದ್ದರು. ಹಿಂದುಗಳ ಭಾವನೆಗೆ ಅವರು ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ದೇಗುಲ ಪ್ರವೇಶ ನಿರಾಕರಿಸಿದ್ದಾರೆ.

#BoycottBrahmastra | ರಣಬೀರ್–ಆಲಿಯಾ ಸಿನಿಮಾಗೆ ಬಹಿಷ್ಕಾರದ ಬಿಸಿ

ಬಜರಂಗದಳದವರ ವಿರುದ್ಧ ಲಾಠಿ ಚಾರ್ಜ್ ಮಾಡಿದರೂ, ಕಾರ್ಯಕರ್ತರು ಸ್ಥಳದಿಂದ ತೆರಳದೇ ಪ್ರತಿಭಟಿಸಿದ್ದಾರೆ. ಹೀಗಾಗಿ ರಣಬೀರ್ ಮತ್ತು ಆಲಿಯಾಗೆ ದೇಗುಲ ಪ್ರವೇಶ ಸಾಧ್ಯವಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲಿಯಾ ‘ಬೇಬಿ ಬಂಪ್’ ಹಾಸ್ಯಮಾಡಿ ಕ್ಷಮೆಯಾಚಿಸಿದ ರಣಬೀರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.