ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ನಟ, ನಾಟಕಕಾರ ಹಾಗೂ ನಿರ್ದೇಶಕ ಎಸ್.ಎನ್. ಸೇತುರಾಂ ಅವರು ‘ಜೀವಮಾನದ ರಂಗಗೌರವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಆರ್. ಭೀಮಸೇನ ನೇತೃತ್ವದ ಕಾರ್ಯಕಾರಿ ಸಮಿತಿಯು ಈ ಆಯ್ಕೆಯನ್ನು ಮಾಡಿ, ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ‘ಜೀವಮಾನದ ರಂಗಗೌರವ ಪ್ರಶಸ್ತಿ’ಯು ₹ 50 ಸಾವಿರ ನಗದು ಹಾಗೂ ನಟರಾಜ ವಿಗ್ರಹ, ಫಲಕವನ್ನು ಒಳಗೊಂಡಿದೆ. ಬಾಬು ಹಿರಣ್ಣಯ್ಯ, ಸಂತೋಷ್ ಕುಮಾರ್ ಕುಸನೂರು, ಎಂ. ಇಸ್ಮಾಯಿಲ್ ಸಾಬ್ ಸೇರಿದಂತೆ 25 ರಂಗ ಸಾಧಕರು ವಾರ್ಷಿಕ ‘ರಂಗಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ತಲಾ ₹ 25 ಸಾವಿರ ನಗದು ಬಹುಮಾನ ಹಾಗೂ ನಟರಾಜ ವಿಗ್ರಹ, ಫಲಕವನ್ನು ಒಳಗೊಂಡಿದೆ. ‘ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ’ಕ್ಕೆ ಬೆಂಗಳೂರಿನ ಮಾ. ಭಾಸ್ಕರ, ‘ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ’ಕ್ಕೆ ಕೊಪ್ಪಳದ ವೆಂಕಣ್ಣ ಕಾಮನೂರು, ‘ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ’ಗೆ ಧಾರವಾಡದ ಅನ್ನಪೂರ್ಣ ಹೊಸಮನಿ, ‘ಕೆ. ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ’ಕ್ಕೆ ಬೆಳಗಾವಿಯ ರಂಗಸಂಪದ ಹಾಗೂ ‘ಮಾಲತಿಶ್ರೀ ಮೈಸೂರು ದತ್ತಿನಿಧಿ ಪುರಸ್ಕಾರ’ಕ್ಕೆ ಧಾರವಾಡದ ಸುನಂದಾ ಹೊಸಪೇಟೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ ₹ 5 ಸಾವಿರ ನಗದು ಬಹುಮಾನ ಹಾಗೂ ನಟರಾಜ ವಿಗ್ರಹ ಫಲಕಗಳನ್ನು ಹೊಂದಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

ಜೀವಮಾನದ ರಂಗಗೌರವ ಪ್ರಶಸ್ತಿ

1. ಶ್ರೀ ಎಸ್.ಎನ್.ಸೇತೂರಾಂ, ಬೆಂಗಳೂರು

ವಾರ್ಷಿಕ ರಂಗಪ್ರಶಸ್ತಿ
1. ಸಂತೋಷ ಕುಮಾರ ಕುಸನೂರು, ಕಲಬುರ್ಗಿ
2. ಎಂ.ಇಸ್ಮಾಯಿಲ್ ಸಾಬ್, ರಾಯಚೂರು
3. ಭರಮಪ್ಪ ಜುಟ್ಲದ, ಕೊಪ್ಪಳ
4. ಮಾ.ಭ.ಸೋಮಣ್ಣ, ಹೊಸಪೇಟೆ, ಬಳ್ಳಾರಿ
5. ಗೆಣಿಕೆಹಾಳು ತಿಮ್ಮನಗೌಡ ಮೇಲುಸೀಮೆ, ಬಳ್ಳಾರಿ
6. ಗುರುಬಸಪ್ಪ ಕಲ್ಲಪ್ಪ ಸಜ್ಜನ, ವಿಜಯಪುರ
7. ಹಣಮವ್ವ ಗಾಜರ ಕುಳಲಿ, ಬಾಗಲಕೋಟೆ
8. ಪಿ ಢಗಳಚಂದ್ರ ಪವಾರ, ಬಾಗಲಕೋಟೆ
9. ಉಮಾದೇವಿ ಹಿರೇಮಠ, ಗದಗ
10. ಬಸವರಾಜ ಬ ಕಡ್ಲೆಣ್ಣನವರ, ಧಾರವಾಡ
11. ಐರಣಿ ಬಸವರಾಜ, ದಾವಣಗೆರೆ
12. ನೂರಜಹಾನ ಗೊರಜಿನಾಳ್, ಚಿತ್ರದುರ್ಗ
13. ಮಹಾವೀರ ಜೈನ್, ಚಿಕ್ಕಮಗಳೂರು
14. ಅಶ್ವತ್ಥ ಕದಂಬ, ಮೈಸೂರು
15. ಚಂದ್ರಶೇಖರಯ್ಯ ಎಂ.ಆರ್., ಕೊಡಗು
16. ಧನ್ಯಕುಮಾರ, ಮಂಡ್ಯ
17. ವೆಂಕಟರಮಣಸ್ವಾಮಿ, ಚಾಮರಾಜನಗರ
18. ಶ್ರೀನಿವಾಸ ಪ್ರಭು ಉಪ್ಪುಂದ, ಉಡುಪಿ
19. ರೋಹಿಣಿ ಜಗರಾಂ, ಮಂಗಳೂರು
20. ಕೆ.ಎನ್.ವಾಸುದೇವ ಮೂರ್ತಿ, ಬೆಂಗಳೂರು ಗ್ರಾಮಾಂತರ
21. ವಿ.ಲಕ್ಷ್ಮೀಪತಿ, ಬೆಂಗಳೂರು ನಗರ
22. ಎಂ.ಎಸ್.ವಿದ್ಯಾ, ಬೆಂಗಳೂರು ನಗರ
23. ಮಂಜುಳಾ ಬಿ.ಎನ್. ಬೆಂಗಳೂರು ನಗರ
24. ಗೀತಾ ಸುರತ್ಕಲ್, ಬೆಂಗಳೂರು ನಗರ
25. ಬಾಬು ಹಿರಣ್ಣಯ್ಯ, ಬೆಂಗಳೂರು ನಗರ

ಕಲ್ಚರ್ಡ್ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ: ಮಾ.ಭಾಸ್ಕರ, ಬೆಂಗಳೂರು
ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ : ವೆಂಕಣ್ಣ ಕಾಮನೂರು, ಕೊಪ್ಪಳ
ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಪ್ರಶಸ್ತಿ : ಅನ್ನಪೂರ್ಣ ಹೊಸಮನಿ, ಧಾರವಾಡ
ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರ: ರಂಗಸಂಪದ, ಬೆಳಗಾವಿ
ಶ್ರೀಮತಿ ಮಾಲತಿಶ್ರೀ,ಮೈಸೂರು ದತ್ತಿನಿಧಿ ಪುರಸ್ಕಾರ: ಸುನಂದಾ ಹೊಸಪೇಟೆ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.