ಬೆಂಗಳೂರು:ಗ್ರಾಮೀಣ ಮತ್ತು ನಗರೇತರ ಪ್ರದೇಶಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಸಂಘಟಿಸಲು ಆಸಕ್ತಿ ಇರುವವರಿಗಾಗಿ ಹೆಗ್ಗೋಡಿನ ನಿನಾಸಂ ಸಂಸ್ಥೆ ಅ. 4ರಿಂದ 8ರ ವರೆಗೆ ನಿನಾಸಂ ಸಂಸ್ಕೃತಿ ಶಿಬಿರ ಹಮ್ಮಿಕೊಂಡಿದೆ.

ಕಳೆದ ಎರಡೂವರೆ ದಶಕಗಳಿಂದ ಚಲನಚಿತ್ರ– ಸಂಸ್ಕೃತಿ ಶಿಬಿರಗಳನ್ನು ಪ್ರತಿ ಅಕ್ಟೋಬರ್ನಲ್ಲಿ ನಡೆಸುತ್ತಾ ಬಂದಿದೆ. ಈ ವರ್ಷವೂ ಐದು ದಿನಗಳ ಶಿಬಿರವನ್ನು ಸಂಘಟಿಸುತ್ತಿದೆ.

ಸಾಂಸ್ಕೃತಿಕ ಸಂಘಟನೆಗಳ ಕಾರ್ಯಕರ್ತರು, ಸಂಸ್ಕೃತಿ ಕುರಿತು ಆಸಕ್ತಿ ಇರುವ ಉಪಾಧ್ಯಾಯರು, ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸ್ವ–ವಿವರನ್ನು ಸೆ. 5ರೊಳಗೆ ಕಳುಹಿಸಬಹುದು. ಊಟ– ವಸತಿ ಮತ್ತು ಸಂಜೆ ಕಾರ್ಯಕ್ರಮಗಳ ಪ್ರವೇಶ ಸೇರಿ ಒಟ್ಟು ₹5 ಸಾವಿರ ಶುಲ್ಕವಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ. ವಿವರಗಳಿಗೆ www.ninasam.org ನೋಡಬಹುದು. ಸಂಪರ್ಕ: 08183–265646.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.