ಕೋಲ್ಕತ್ತ: ‘ಸಿನಿಮಾ ನಿರ್ದೇಶಕರೊಬ್ಬರ ಹೆಸರಿನಲ್ಲಿ ನನ್ನ ಫೇಸ್ಬುಕ್ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ‘ ಎಂದು ಬಂಗಾಳಿ ನಟಿ ಪಾಯಲ್ ಸರ್ಕಾರ್ ಕೋಲ್ಕತ್ತಾ ಸೈಬರ್ ಪೊಲೀಸರಿಗೆ ಭಾನುವಾರ ದೂರು ನೀಡಿದ್ದಾರೆ.

‘ಬಂಗಾಳಿಯ ಚಿರಪರಿಚಿತ ನಿರ್ದೇಶಕರೊಬ್ಬರ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ನನಗೆ ಗೆಳೆತನದ ಕೋರಿಕೆ ಬಂದಿತ್ತು. ಅದನ್ನು ಸ್ವೀಕರಿಸಿದಾಗ ಅವರು ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದರು. ಅವರು ಕಳಿಸಿದ ಸಂದೇಶಗಳು ಅಶ್ಲೀಲತನದ ಪರಮಾವಧಿಯಾಗಿತ್ತು. ಕೂಡಲೇ ಇವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ದೂರು ನೀಡಿರುವೆ‘ ಎಂದು ಪಾಯಲ್ ಹೇಳಿದ್ದಾರೆ.

ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ‘ಇದೊಂದು ನಕಲಿ ಖಾತೆಯಾಗಿದ್ದು, ಅದು ಮೂಲ ಹೆಸರಿನವರಿಗೆ ಸಂಬಂಧಿಸಿಲ್ಲ‘ ಎಂದು ಹೇಳಿದ್ದಾರೆ. ಆ ನಿರ್ದೇಶಕರು ಕೂಡ ಇದರ ಬಗ್ಗೆ ಪ್ರತಿಕ್ರಿಯಿಸಿದ್ದು ‘ನಕಲಿ ಖಾತೆಯ ಮೂಲಕ ಇಷ್ಟೆಲ್ಲ ಆಗಿದೆ‘ ಎಂದು ಪ್ರತಿ ದೂರು ದಾಖಲಿಸಿದ್ದಾರೆ.

ಇನ್ನು ಪಾಯಲ್ ಸರ್ಕಾರ್ ಅವರು ಬಂಗಾಳಿ ಕಿರುತೆರೆಯ ಜನಪ್ರಿಯ ನಟಿಯಾಗಿದ್ದು, ಥಾಪುರ್ ಥಾಪುರ್, ಅಂದರ್ ಮಹಲ್, ಬೆನೆ ಬೋವು, ತುಮಿ ರಾಬೆ ನಿರೊಬಿ ಎಂಬ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:ಇವರೇ ನನ್ನ ಮೊದಲ ಲವರ್ ಎಂದು ಫೋಟೊ ಹಂಚಿಕೊಂಡರಾಮ್ ಗೋಪಾಲ್ ವರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.