ನಟ ರಾಘವೇಂದ್ರ ರಾಜ್‌ಕುಮಾರ್ – ಮಂಗಳಾ ರಾಜ್‌ಕುಮಾರ್ ಅವರು ತಮ್ಮ ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ನಿರ್ಮಿಸಿದ ‘ವಿಜಯ ದಶಮಿ’ ಮತ್ತು ನ್ಯೂ ಡಿ2 ಮೀಡಿಯಾ ನಿರ್ಮಾಣದ ‘ಅಮ್ಮನ ಮದುವೆ’ ಧಾರಾವಾಹಿಗಳು ಆಗಸ್ಟ್ 1ರಿಂದ ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

‘ಅಮ್ಮನ ಮದುವೆ’ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ, ‘ವಿಜಯ ದಶಮಿ’ ಧಾರಾವಾಹಿ ಇದೇ ದಿನಗಳಂದು ರಾತ್ರಿ 8.30ಕ್ಕೆ ಪ್ರಸಾರವಾಗಲಿವೆ.

ಮದುವೆಯಾಗಿ ಜೀವನ ರೂಪಿಸಿಕೊಳ್ಳಲು ಹೊರಟ ಮಗಳು, ತಾಯಿಯ ಒಂಟಿತನಕ್ಕೆ ಉತ್ತರವಾಗಿ ಅವಳಿಗೊಂದು ಬದುಕು ಕಟ್ಟಿಕೊಡಲು ನಡೆಸುವ ಹೋರಾಟದ ಭಾವುಕ ಕಥೆ ‘ಅಮ್ಮನ ಮದುವೆ’.

ವಿಜಯ, ದಶಮಿ ಎಂಬ ಇಬ್ಬರು ನಾಯಕಿಯರ ಬದುಕಿನಲ್ಲಿ ನಡೆಯುವ ಸನ್ನಿವೇಶಗಳು ‘ವಿಜಯದಶಮಿ’ಯ ಕಥೆ. ಈ ಧಾರಾವಾಹಿಯ ಚಿತ್ರೀಕರಣ ದೇಶದ ವಿವಿಧ ಪ್ರದೇಶಗಳಲ್ಲಿ ನಡೆದಿದೆ. ಪ್ರೋಮೋ ಕೂಡಾ ಮೆಚ್ಚುಗೆ ಪಡೆದಿದೆ ಎಂದರು ರಾಘವೇಂದ್ರ ರಾಜ್‌ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.