ಬೆಂಗಳೂರು: ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ ಬಳಿಕ ಮನೆಯ ವಾತಾವರಣ ಬದಲಾಗಿದೆ. ಶೋಭಾ ಶೆಟ್ಟಿ ಅವರ ಗಟ್ಟಿ ಧ್ವನಿಗೆ ಕೆಲವರು ಬೆಚ್ಚಿದ್ದರೆ, ರಜತ್ ಕಿಶನ್ ಅವರ ಮಾತಿನ ವರಸೆಗೆ ಮನೆಯ ಸದಸ್ಯರು ಕೆಂಡಾಮಂಡಲರಾಗಿದ್ದಾರೆ.

ಚೆಂಡಿನ್ ಟಾಸ್ಕ್ ವೇಳೆ ಗೋಲ್ಡ್ ಸುರೇಶ್ ಮತ್ತು ರಜತ್ ನಡುವೆ ನಡೆದ ಮಾತಿನ ಸಮರ ತಾರಕಕ್ಕೇರಿ, ರಜತ್ ಕೆಟ್ಟ ಪದಗಳಿಂದ ಬೈದಿದ್ದಾರೆ. ಇದರಿಂದ ಕುಪಿತಗೊಂಡ ಸುರೇಶ್ ಮನೆಯಿಂದ ಹೊರಹೋಗುವುದಾಗಿ ಕಿರುಚಾಡಿದ್ದಾರೆ.

ಇವೆಲ್ಲದರ ಪರಿಣಾಮ ವೈಲ್ಡ್ ಕಾರ್ಡ್ ಎಂಟ್ರಿಯಾದ ಮೊದಲ ವಾರವೇ ರಜತ್ ಕಳಪೆ ಪಟ್ಟ ಪಡೆದಿದ್ದಾರೆ. ಆದರೂ ನಾನಿರುವುದೇ ಹೀಗೆ ಎಂದು ಸಿಟ್ಟಿನಿಂದ ಕೂಗಾಡಿ ಜೈಲು ಸೇರಿದ್ದಾರೆ.

ಈ ವಾರ ನಾಮಿನೇಷನ್ನಲ್ಲಿ ಚೈತ್ರಾ, ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ, ಧರ್ಮ ಮತ್ತು ಹನುಮಂತ ಇದ್ದಾರೆ. ಕಳೆದ ವಾರ ಅನುಷಾ ಅವರು ಎಲಿಮಿನೇಟ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.