ಮುಂಬೈ: ಹಿಂದಿ ಟಿವಿ ಜನಪ್ರಿಯ ಕಾರ್ಯಕ್ರಮ ‘ಕಾಫಿ ವಿತ್ ಕರಣ್‘ ಇನ್ನು ಮುಂದೆ ಪ್ರಸಾರವಾಗುವುದಿಲ್ಲ ಎಂದು ಶೋ ನಡೆಸಿಕೊಡುತ್ತಿದ್ದ ಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಹೇಳಿದ್ದಾರೆ.

2004ರಲ್ಲಿ ಸ್ಟಾರ್ ವರ್ಲ್ಡ್ ಟಿವಿ ಚಾನಲ್ನಲ್ಲಿ ‘ಕಾಫಿ ವಿತ್ ಕರಣ್‘ ಮೊದಲ ಶೋ ಪ್ರಸಾರವಾಗಿತ್ತು. ಅಲ್ಲಿಂದೀಚೆಗೆ, 2019ರವರೆಗೆ ಆರು ಸೀಸನ್ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿದೆ.

ಬುಧವಾರ ಈ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಕರಣ್, ಕಾಫಿ ವಿತ್ ಕರಣ್ ಕಾರ್ಯಕ್ರಮ ನನ್ನ ಮತ್ತು ನಿಮ್ಮ ಜೀವನದ ಭಾಗವೇ ಆಗಿತ್ತು. ಈ ಕಾರ್ಯಕ್ರಮ ಇನ್ನು ಮರಳಿ ಬರುವುದಿಲ್ಲ ಎನ್ನುವುದನ್ನು ಭಾರವಾದ ಹೃದಯದೊಂದಿಗೆ ಹೇಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಶಾರುಖ್ ಖಾನ್ ಮತ್ತು ಕಾಜಲ್ ಮೊದಲ ಎಪಿಸೋಡ್ನಲ್ಲಿ ಕರಣ್ ಜತೆ ಭಾಗವಹಿಸಿದ್ದರು. ಅದಾದ ಬಳಿಕ, ಬಾಲಿವುಡ್ ಮತ್ತು ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ‘ಕಾಫಿ ವಿತ್ ಕರಣ್‘ ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು.

2 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಕಳೆದುಕೊಂಡ ನೆಟ್ಫ್ಲಿಕ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.