ಮುಂಬೈ: ಮಹಾಭಾರತದ ಧಾರವಾಹಿಯಲ್ಲಿ ಕೃಷ್ಣನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಿತೀಶ್ ಭಾರದ್ವಾಜ್ ಅವರು 12 ವರ್ಷಗಳ ದಾಂಪತ್ಯದ ನಂತರ ತಮ್ಮ ಪತ್ನಿಯಿಂದ ಬೇರ್ಪಟ್ಟಿರುವುದಾಗಿ ಘೋಷಿಸಿದ್ದಾರೆ.

ನಟ ಧನುಷ್ ಮತ್ತು ರಜನಿಕಾಂತ್ ಅವರ ಮಗಳು ಐಶ್ವರ್ಯಾ ತಮ್ಮ 18 ವರ್ಷಗಳ ದಾಂಪತ್ಯಕ್ಕೆ ತೆರೆ ಎಳೆಯುವ ಘೋಷಣೆ ಮಾಡಿದ ಕೆಲವೇ ಗಂಟೆಗಳ ನಂತರ ಈ ಸುದ್ದಿ ಬಂದಿದೆ.

ನಿತೀಶ್ ಭಾರದ್ವಾಜ್ ಅವರು 2019ರಲ್ಲಿ ಪತ್ನಿ, ಐಎಎಸ್ ಅಧಿಕಾರಿಯಾಗಿರುವ ಸ್ಮಿತಾ ಗೇಟ್ ಅವರೊಂದಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನದ ಕಾರಣಗಳನ್ನು ಮೆಲುಕು ಹಾಕಲು ಬಯಸುವುದಿಲ್ಲ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ‘ಕೆಲವೊಮ್ಮೆ ವಿಚ್ಛೇದನವು ಮರಣಕ್ಕಿಂತ ಹೆಚ್ಚು ನೋವಿನಿಂದ ಕೂಡಿರುತ್ತದೆ’ಎಂದು ಬಾಂಬೆ ಟೈಮ್ಸ್ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

ನಿತೀಶ್ ಅವರ ವಿಚ್ಛೇದಿತ ಪತ್ನಿ ತಮ್ಮ ಅವಳಿ ಹೆಣ್ಣುಮಕ್ಕಳೊಂದಿಗೆ ಇಂದೋರ್ನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಅವಳಿ ಹೆಣ್ಣು ಮಕ್ಕಳನ್ನು ಭೇಟಿಯಾಗಲು ಅವಕಾಶವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಟ ಬಹಿರಂಗಪಡಿಸಿಲ್ಲ.

‘ನಾನು ಕಾನೂನಿನ ಬಗ್ಗೆ ದೃಢ ನಂಬಿಕೆ ಹೊಂದಿದ್ದೇನೆ. ಆದರೆ, ನಾನು ದುರಾದೃಷ್ಟವಂತನಾಗಿದ್ದೇನೆ. ದಾಂಪತ್ಯದ ವಿಘಟನೆಗೆ ಕಾರಣಗಳು ಅನಂತವಾಗಿರಬಹುದು, ಕೆಲವೊಮ್ಮೆ ಇದು ರಾಜಿಯಾಗದ ವರ್ತನೆ ಅಥವಾ ಸಹಾನುಭೂತಿಯ ಕೊರತೆ, ಅಹಂಕಾರದ ಪರಿಣಾಮವಾಗಿರಬಹುದು. ಆದರೆ, ಕುಟುಂಬ ಒಡೆದು ಹೋದಾಗ ಹೆಚ್ಚು ತೊಂದರೆ ಅನುಭವಿಸುವುದು ಮಕ್ಕಳು. ಆದ್ದರಿಂದ, ಮಕ್ಕಳಿಗೆ ಆಗುವ ಹಾನಿಯನ್ನು ತಗ್ಗಿಸಲು ಪೋಷಕರು ಪ್ರಯತ್ನಪಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.