ವಿಭಿನ್ನ ಕಥೆಗಳುಳ್ಳ ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳ ಮೂಲಕ ಜನರ ಮನ ರಂಜಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿ ಈಗ ‘ಮಜಾಭಾರತ’ ಕಾರ್ಯಕ್ರಮದ ಮೂಲಕ ಜನರನ್ನು ಇನ್ನಷ್ಟು ರಂಜಿಸಲು ರೆಡಿಯಾಗಿದೆ. ಕೊರೊನಾ ಕಾರಣದಿಂದ ಕಳೆದ ಕೆಲ ತಿಂಗಳಿನಿಂದ ಮನೆಯಲ್ಲಿಯೇ ಇರುವ ಮಂದಿಗೆ ಈ ಮಜಾಭಾರತ ವಾರಾಂತ್ಯದಲ್ಲಿ ಖುಷಿ ಕೊಡುವುದರಲ್ಲಿ ಸಂಶಯವಿಲ್ಲ.

ಈ ಹಿಂದೆ ಜನ ಮೆಚ್ಚಿದ ಕಾರ್ಯಕ್ರಮವಾಗಿದ್ದ ಮಜಾಭಾರತ ಮತ್ತೆ ಆರಂಭವಾಗುತ್ತಿದೆ. ಇಂದಿನಿಂದ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಗುಳಿಕೆನ್ನೆ ಚೆಲುವೆ ನಟಿ ರಚಿತಾರಾಮ್ ಹಾಗೂ ಸಂಗೀತ ಸರದಾರ ಗುರುಕಿರಣ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಈ ಬಾರಿಯ ಮಜಾಭಾರತಕ್ಕೆ ಹೊಸ ಸೇಪರ್ಡೆ ಎಂದರೆ ನಟ, ಬಿಗ್‌ಬಾಸ್ ಖ್ಯಾತಿಯ ಹರೀಶ್ ರಾಜ್. ಅವರು ಪ್ರತಿ ಸೀಸನ್‌ನಲ್ಲೂ ಹೊಸ ಪಾತ್ರವಾಗಿ ಜನರ ಮುಂದೆ ಬಂದು ರಂಜಿಸಲಿದ್ದಾರೆ. ಕಿನ್ನರಿ ಧಾರಾವಾಹಿಯಿಂದ ಖ್ಯಾತಿ ಪಡೆದ ನಟಿ ಭೂಮಿ ಶೆಟ್ಟಿ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ಕಷ್ಟಕಾಲದಲ್ಲಿ ನಮಗೆ ಬೇಕಾದದ್ದು ನಗುವೇ. ನೋವನ್ನು ಕಡಿಮೆ ಮಾಡೋದು ಅಳುವಿನಿಂದ ಆಗದು. ನಮ್ಮೆಲ್ಲ ನೋವುಗಳಿಗೂ ನಗುವೇ ದಿವ್ಯ ಔಷಧಿ. ಅಂಥ ನಗುವನ್ನು ಯಾವ ಮಾಸ್ಕ್ ಕೂಡ ಮರೆ ಮಾಡಲಾಗದು. ಇದೇ ನಂಬಿಕೆಯೊಂದಿಗೆ ಮಜಾಭಾರತ ತಂಡ ಸಜ್ಜಾಗಿದೆ. ಮಜಾಭಾರತ ನೋಡಿ ಆನಂದಿಸಿ’ ಎನ್ನುತ್ತಿದೆ ಮಜಾಭಾರತ ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.