ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಜೈಲಿನಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಕಿರುತೆರೆಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಇದೇ ವೇಳೆ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ಸಿಂಗ್, ರಿಯಾ ಮೇಲೆ ಅಸಮಾಧಾನ ವ್ಯಕ್ತಪಡಿಸಿ ಪರೋಕ್ಷವಾಗಿ ಹೀಯಾಳಿಸಿದ್ದಾರೆ.

ಎಂಟಿವಿಯಲ್ಲಿ ಪ್ರಸಾರವಾಗುವ ‘ರೋಡಿಸ್‘ ಕಾರ್ಯಕ್ರಮದ ಗ್ಯಾಂಗ್ ಲೀಡರ್ ಎಂಬ ಅವರತರಿಣಿಕೆಯಲ್ಲಿ ರಿಯಾ ಚಕ್ರವರ್ತಿ ಕಾಣಿಸಿಕೊಳ್ಳಲಿದ್ದು, ಏಪ್ರಿಲ್ 10ರಂದು ಎಂಟಿವಿ ಇದರ ಪ್ರೋಮೋ ವಿಡಿಯೊವೊಂದನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ರಿಯಾ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ’ನಾನು ಹೆದರಿಕೊಂಡಿದ್ದೇನೆ ಎಂದು ನೀವು ಯೋಚಿಸಿದ್ದೀರಾ? ಈಗ ಹೆದಿರಿಕೊಳ್ಳುವ ಸರದಿ ಬೇರೆಯವರದ್ದು‘ ಎಂದು ಹೇಳಿದ್ದಾರೆ.

ಈ ಪ್ರೋಮೋ ಬಿಡುಗಡೆಯಾಗುತ್ತಲೇ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿ ಅವರನ್ನು ಸುಶಾಂತ್ ಸಿಂಗ್ ತಂಗಿ ಪ್ರಿಯಾಂಕಾ ಸಿಂಗ್ ಪರೋಕ್ಷವಾಗಿ ಟ್ವೀಟ್ ಮೂಲಕ ಹಿಯಾಳಿಸಿದ್ದಾರೆ. ‘ನೀವು ಯಾಕೆ ಹೆದರುತ್ತೀರಿ ಹೇಳಿ? ನೀವೊಬ್ಬ ವೇಶ್ಯೆಯಾಗಿದ್ದಿರಿ, ಈಗಲೂ ಇದ್ದೀರಾ. ಮುಂದೆಯೂ ಇರುತ್ತೀರಾ.. ಆದರೆ, ನಿಮ್ಮ ಗ್ರಾಹಕ ಯಾರು ಎಂಬುದು ಮಾತ್ರ ಪ್ರಶ್ನೆಯಾಗಿದೆ. ಈ ಪ್ರಶ್ನೆ ಮಾಡುವ ಧೈರ್ಯವನ್ನು ನನ್ನ ಅಣ್ಣ ಮಾತ್ರ ಕೊಡಬಲ್ಲ. ಸುಶಾಂತ್ ಸಾವಿನ ತನಿಖೆಗೆ ಕಾರಣಗಳು ಸ್ಪಷ್ಟವಾಗಿವೆ‘ ಎಂದು ಟ್ವೀಟ್ ಮಾಡಿದ್ದಾರೆ.

ದಿವಂಗತ ನಟ ಸುಶಾಂತ್ ಸಿಂಗ್ ಹಾಗೂ ರಿಯಾ ಚಕ್ರವರ್ತಿ ಪರಸ್ಪರ ಪ್ರೀತಿಸುತ್ತಿದ್ದರು. ಜೂನ್ 8, 2020ರಂದು ಸುಶಾಂತ್ ಸಿಂಗ್ ಸಾವನ್ನಪ್ಪಿದ್ದು, ಸುಶಾಂತ್ ಸಾವಿಗೆ ಗೆಳತಿ ರಿಯಾ ಚಕ್ರವರ್ತಿಯೇ ಕಾರಣ ಎಂದು ಸುಶಾಂತ್ ಕುಟುಂಬ ಆರೋಪಿಸಿತ್ತು. ರಿಯಾ ಚಕ್ರವರ್ತಿ ಮೇಲೆ ಆತ್ಮಹತ್ಯೆಗೆ ಕುಮ್ಮಕ್ಕು ಮತ್ತು ಅಕ್ರಮ ಹಣ ವರ್ಗಾವಣೆ, ಗಾಂಜಾ ಸೇವನೆ ಪ್ರಕರಣ ದಾಖಲಾಗಿತ್ತು. ಸಾಕಷ್ಟು ವಿರೋಧಗಳು ಬಂದ ನಂತರ ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಜಾರಿ ನಿರ್ದೇಶನಾಲಯ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ರಿಯಾ ಅವರನ್ನು ಬಂಧಿಸಿ ವಿಚಾರಣೆ ಒಳಪಡಿಸಿತ್ತು.ರಿಯಾ ಮೇಲಿನ ಯಾವ ಆರೋಪಗಳು ಇದುವರೆಗೂ ಸಾಬೀತಾಗಿರಲಿಲ್ಲ. ನಂತರ ಜಾಮೀನಿನ ಮೇಲೆ ರಿಯಾ ಬಿಡುಗಡೆಯಾಗಿದ್ದರು.

ರಿಯಾ ಕಮ್ ಬ್ಯಾಕ್‌ಅನ್ನು ಕೆಲವರು ಸ್ವಾಗತಿಸಿದರೆ, ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.