ಮುಂಬೈ (ಮಹಾರಾಷ್ಟ್ರ): ಹಿಂದಿ ಕಿರುತೆರೆ ನಟಿ, ಮಾಡೆಲ್ ತುನಿಷಾ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿ ಸಹನಟ ಶೀಜನ್ ಖಾನ್ ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಪಾಲ್ಘರ್ ಜಿಲ್ಲೆಯ ವಸಾಯಿ ಕೋರ್ಟ್ ಆದೇಶಿಸಿದೆ.

ಡಿಸೆಂಬರ್ 24ರಂದು ತುನಿಷಾ ಶರ್ಮಾ ಅವರು ತಮ್ಮ ಧಾರಾವಾಹಿಯೊಂದರ ಶೂಟಿಂಗ್ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಶರ್ಮಾ ಅವರ ಸಹ ನಟ ಶೀಜನ್ ಮೊಹಮ್ಮದ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು.

ತುನಿಷಾ ಅವರ ತಾಯಿ ನೀಡಿರುವ ದೂರಿನ ಆಧಾರ ಮೇಲೆಶೀಜನ್ ಖಾನ್ ಅವರ ಮೇಲೆ ಐಪಿಸಿ ಸೆಕ್ಷನ್ 306ರಡಿ (ಆತ್ಮಹತ್ಯೆಗೆ ಕುಮ್ಮಕ್ಕು) ಪ್ರಕರಣ ದಾಖಲು ಮಾಡಲಾಗಿದ್ದು, ಶೀಜನ್ ಖಾನ್ ಅವರನ್ನು ವಸಾಯಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಖಾನ್ ಅವರನ್ನು ಡಿ. 28ರ ವರೆಗೆ ಪೊಲೀಸ್ ವಶಕ್ಕೆ ನೀಡಿತ್ತು.

ವರದಿಗಳ ಪ್ರಕಾರ, ತುನಿಷಾ (21) ಮತ್ತು ಶೀಜನ್ ಖಾನ್ (27) ಅವರ ಮಧ್ಯೆ ಪ್ರೇಮ ಸಂಬಂಧ ಇತ್ತು. ಆದರೆ, 15 ದಿನಗಳ ಹಿಂದಷ್ಟೇ ಇಬ್ಬರು ತಮ್ಮ ಪ್ರೇಮ ಸಂಬಂಧವನ್ನು ಕಡಿದುಕೊಂಡಿದ್ದರು ಎನ್ನಲಾಗಿದೆ.

ತುನಿಷಾ ಮತಾಂತರಕ್ಕೆ ಒತ್ತಡ ಹೇರಲಾಗಿತ್ತು: ವನಿತಾ ಆರೋಪ
‘ನನ್ನ ಮಗಳು ಇಸ್ಲಾಂಗೆ ಮತಾಂತರವಾಗಬೇಕು ಎಂದುಸಹ ನಟ ಶೀಜನ್ ಖಾನ್ ಹಾಗೂ ಆತನ ಕುಟುಂಬದ ಸದಸ್ಯರು ಒತ್ತಾಯಿಸುತ್ತಿದ್ದರು’ ಎಂದು ಶೂಟಿಂಗ್ ಸೆಟ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ ನಟಿ ತುನಿಷಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಶುಕ್ರವಾರ ಆರೋಪ ಮಾಡಿದ್ದರು

‘ತುನಿಷಾ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ. ಇದೊಂದು ಕೊಲೆ. ಈ ಎಲ್ಲದಕ್ಕೂ ಶೀಜನ್ ಖಾನ್ ಅವರ ತಾಯಿ ಕಾರಣರಾಗಿದ್ದಾರೆ. ಆದ್ದರಿಂದ ಅವರ ಕುಟುಂಬದವರನ್ನೂ ಈ ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದ್ದರು.

‘ಆಕೆ ಬಹಳ ಸೂಕ್ಷ್ಮ ಸ್ವಭಾವದವಳು. ಕೆಲವು ತಿಂಗಳ ಹಿಂದಿನಿಂದ ಆಕೆಯ ಸ್ವಭಾವದಲ್ಲಿ ಬದಲಾವಣೆಗಳಾಗಿದ್ದವು. ಶೀಜನ್ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದ ತುನಿಷಾ, ಅವರ ಸಂಪ್ರದಾಯಗಳನ್ನು ಅನುಸರಿಸಲು ಪ್ರಾರಂಭಿಸಿದ್ದಳು. ಇದು, ಆಕೆ ನಿಧಾನವಾಗಿ ಮತಾಂತರವಾಗುತ್ತಿದ್ದಳು ಎನ್ನುವುದರ ಸಂಕೇತವಾಗಿತ್ತು’ ಎಂದರು. ಶೀಜನ್ ಕುಟುಂಬವು ಮತಾಂತರಕ್ಕೆ ಒತ್ತಾಯಪಡಿಸಿತ್ತೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ವನಿತಾ ಅವರು ‘ಹೌದು’ ಎಂದು ಉತ್ತರಿಸಿದರು.

ಇವನ್ನೂ ಓದಿ...

ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹನಟ ಶಿಜಾನ್ ಖಾನ್ ಬಂಧನ

ತುನಿಷಾ ಮತಾಂತರಕ್ಕೆ ಒತ್ತಡ ಹೇರಲಾಗಿತ್ತು: ತುನಿಷಾ ತಾಯಿ ವನಿತಾ ಶರ್ಮಾ ಆರೋಪ

ನಟಿ ತುನಿಷಾ ಶರ್ಮಾ ಉಸಿರುಗಟ್ಟಿ ಸಾವು: ಮರಣೋತ್ತರ ಪರೀಕ್ಷೆ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.