ಮುಂಬೈ: ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶ ಮಾಥೆರಾನ್ ಗಿರಿಧಾಮದಲ್ಲಿ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (ಬಿಎನ್ಎಚ್ಎಸ್) ವಿಜ್ಞಾನಿಗಳು ಎಂಟು ವರ್ಷಗಳಿಂದ ನಡೆಸಿರುವ ಚಿಟ್ಟೆ ವೈವಿಧ್ಯದ ಅಧ್ಯಯನದಲ್ಲಿ 77 ವಿಧಧ ಹೊಸ ಚಿಟ್ಟೆ ಪ್ರಬೇಧಗಳು ಪತ್ತೆಯಾಗಿವೆ.

ಆ ಮೂಲಕ ಈ ಪ್ರದೇಶದಲ್ಲಿ ಪತ್ತೆಯಾಗಿರುವ ಚಿಟ್ಟೆ ಪ್ರಬೇಧಗಳ ಸಂಖ್ಯೆ 140ಕ್ಕೆ ಏರಿದೆ.

ಮುಂಬೈ ಮಹಾನಗರದಿಂದ 80 ಕಿ.ಮೀ ದೂರದಲ್ಲಿರುವ ಮಾಥೆರಾನ್ ಅರಣ್ಯ ಪ್ರದೇಶ 214.73 ಚದುರ ಕಿ.ಮೀನಷ್ಟು ವಿಸ್ತೀರ್ಣ ಹೊಂದಿದೆ. ಬಿಎನ್ಎಚ್ಎಸ್ ವಿಜ್ಞಾನಿಗಳು 2011 ರಿಂದ 2019ರವರೆಗೆ ಈ ಅರಣ್ಯದಲ್ಲಿ ಚಿಟ್ಟೆಗಳ ಮೇಲೆ ಅಧ್ಯಯನ ನಡಸಿದ್ದು, 77 ಹೊಸ ಚಿಟ್ಟೆ ಪ್ರಬೇಧಗಳು ಪತ್ತೆಯಾಗಿವೆ’ ಎಂದು ಸೊಸೈಟಿ ವಿಜ್ಞಾನಿ ಮಂದಾರ್ ಸಾವಂತ್ ತಿಳಿಸಿದ್ದಾರೆ.

1894ರಲ್ಲಿ ಬ್ರಿಟಿಷ್ ಸಂಶೋಧಕ ಜೆ.ಎ.ಬೆಥಮ್ ಅವರು ಇದೇ ಮಾಥೆರಾನ್ ಬೆಟ್ಟಗಳಲ್ಲಿ ಚಿಟ್ಟೆ ವೈವಿಧ್ಯ ಕುರಿತು ಅಧ್ಯಯನ ಮಾಡಿದ್ದರು. ಆಗ ಅವರು 78 ಚಿಟ್ಟೆ ಪ್ರಬೇಧಗಳನ್ನು ಗುರುತಿಸಿದ್ದರು. ಭವಿಷ್ಯದಲ್ಲಿ ಇದೇ ರೀತಿ ಯಾರಾದರೂ ಚಿಟ್ಟೆಗಳ ಅಧ್ಯಯನ ನಡೆಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾಗಿ ಬಿಎನ್ಎಚ್ಎಸ್ ಅಧಿಕಾರಿ ಹೇಳಿದ್ದಾರೆ. ಬೆಥಮ್ ಅವರು ಯೋಚನೆಯಂತೆ,125 ವರ್ಷಗಳ ನಂತರ ಮೊದಲ ಬಾರಿಗೆ ಮ್ಯಾಥೆರಾನ್ ಅರಣ್ಯದಲ್ಲಿ ಚಿಟ್ಟೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

ಬಿಎನ್ಹೆಚ್ಎಸ್ ಮತ್ತು ಸೋಮಯ್ಯ ವಿದ್ಯಾವಿಹಾರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ’ಚಿಟ್ಟೆ ಅಧ್ಯಯನ ಕುರಿತು ’ಫೈಂಡಿಂಗ್ ದಿ ಫರ್ಗಾಟನ್ ಜೆಮ್ಸ್ : ರಿವಿಸಿಟಿಂಗ್ ದಿ ಬಟರ್ಫ್ಲೈಸ್ ಆಫ್ ಮ್ಯಾಥೆರಾನ್ ಆಫ್ಟರ್ 125 ಇಯರ್ಸ್ ವಿತ್ ದಿ ಇಂಟ್ರೊಡಕ್ಷನ್ ಟು ದಿ ನಾವೆಲ್ ಕಲರ್ ಬಾರ್ಕೋಡ್ ಫಾರ್ ಡಿಪಿಕ್ಟಿಂಗ್ ಸೀಸನ್ಸ್ ಅಂಡ್ ಆಕ್ಟಿವಿಟಿ ಆಫ್ ದಿ ಇಂಡಿಯನ್ ಬಟರ್ಫ್ಲೈಸ್’ – ಈ ಶೀರ್ಷಿಕೆಯಡಿಸಂಶೋಧನಾ ಪರಬಂಧವನ್ನು ’ಪೀರ್ – ರಿವ್ಯೂಡ್ ಬಯೋಡೈವರ್ಸಿಟಿ ಡೇಟಾ ಜರ್ನಲ್ನಲ್ಲಿ ಪ್ರಕಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.