ಬಲಿಷ್ಠವಾದ ಉದ್ದಕಾಲುಗಳು ಗಿಡ್ಡವಾದ ಬಾಲ ಗಟ್ಟಿಯಾದ ಕೊಕ್ಕು ಕೊಕ್ಕಿನ ಬುಡದಿಂದ ತಲೆಯ ಹಿಂಭಾಗದವರೆಗೆ ತಿಳಿಕಪ್ಪು ಪಟ್ಟಿ ಬಿಳಿಬಣ್ಣದ ಗಂಟಲು ಹಾಗೂ ಕತ್ತು ರೆಕ್ಕೆಯ ಮೇಲ್ಬಾಗದಲ್ಲಿ ಗಾಢ ಹಸುರು ಬಣ್ಣ ನೀಲಿ ಬಣ್ಣದ ಬಾಲ ಕೆಳಭಾಗವು ಕಂದು ಹಾಗೂ ಹೊಟ್ಟೆಯಿಂದ ಬಾಲದವರೆಗೆ ಕಡುಗೆಂಪು ಬಣ್ಣ. ಜೂನ್ ತಿಂಗಳಿಂದ ಆಗಸ್ಟ್‌ವರೆಗೆ ಅವು ಮೊಟ್ಟೆಯಿಟ್ಟು ಮರಿ ಮಾಡುವ ಕಾಲವಾಗಿದ್ದು ನೆಲದ ಮೇಲೆ ಅಥವಾ ಕೆಲವು ಬಾರಿ ನೆಲಮಟ್ಟದ ಗಿಡಗಳ ಮೇಲೆ ಒಣಗಿದ ಎಲೆ ಮತ್ತು ಹುಲ್ಲನ್ನು ಬಳಸಿಕೊಂಡು ಗೋಳಾಕಾರದ ಗೂಡನ್ನು ರಚಿಸುತ್ತದೆ. ನಾಲ್ಕರಿಂದ ಐದು ನೇರಳೆ ಚುಕ್ಕಿಯಿರುವ ಬಿಳಿಮೊಟ್ಟೆಗಳನ್ನು ಇಡುತ್ತದೆ. ದಟ್ಟಪೊದೆಗಳು ಎಲೆಯುದುರುವ ಕಾಡು ಹಾಗೂ ನಿತ್ಯಹರಿದ್ವರಣ ಕಾಡುಗಳಲ್ಲಿ ವಾಸಿಸುವ ‘ನವರಂಗಿ’ಗೆ ಉದುರಿದ ಎಲೆಗಳಡಿಯಲ್ಲಿ ಸಿಗುವ ಕೀಟಗಳೇ ಆಹಾರ.