ಮೈಸೂರು: ಇಲ್ಲಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಒಂದೇ ವಾರದ ಅಂತರದಲ್ಲಿ 2 ಪೆಲಿಕಾನ್ ಪಕ್ಷಿಗಳು ಮೃತಪಟ್ಟಿವೆ.

ಅ.26ರಂದು ಮೃತಪಟ್ಟ ಪೆಲಿಕಾನ್ ದೇಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಳುಗಳು ಪತ್ತೆಯಾಗಿವೆ. ಇದೇ ಇದರ ಸಾವಿಗೆ ಕಾರಣ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ಸೋಮವಾರ ಮತ್ತೊಂದು ಪೆಲಿಕಾನ್ ಪಕ್ಷಿ ಮೃತಪಟ್ಟಿರುವುದರಿಂದ ಎರಡೂ ಪಕ್ಷಿಗಳ ದೇಹದ ಅಂಗಾಂಗಳ ಮಾದರಿಗಳನ್ನು ಬೆಂಗಳೂರಿನ ಪಶುವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಡಿಸಿಎಫ್ (ವನ್ಯಜೀವಿ) ಅಲೆಕ್ಸಾಂಡರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕುಕ್ಕರಹಳ್ಳಿ ಕೆರೆಗೆ ಪೆಲಿಕಾನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತವೆ. 2017ರ ನವೆಂಬರ್, ಡಿಸೆಂಬರ್ ಅವಧಿಯಲ್ಲಿ ಆರು ಪೆಲಿಕಾನ್‌ಗಳು ಹಾಗೂ 2018ರಲ್ಲಿ ಇದೇ ಅವಧಿಯಲ್ಲಿ ಮೂರು ಪೆಲಿಕಾನ್‌ಗಳು ಸತ್ತಿದ್ದವು. ಆದರೆ, ಸಾವು ಹಕ್ಕಿಜ್ವರದಿಂದ ಅಲ್ಲ ಎಂಬುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.