ಕೊರೊನಾ ಮಹಾಮಾರಿಯ ದೆಸೆಯಿಂದ ಇಪ್ಪತ್ನಾಲ್ಕು ಗಂಟೆ ಮನೆಯಲ್ಲೇ ಉಳಿಯುವುದು ಅನಿವಾರ್ಯವಾಗಿ ಮುದುಡಿದ ಮನಸ್ಸಿಗೊಂದಿಷ್ಟು ಸಮಾಧಾನ ತರಲು ಅಪಾರ್ಟ್‌ಮೆಂಟ್‌ನ ತಾರಸಿಯ ಮೇಲೆ ದಿನಕ್ಕೆ ಮೂರ್ನಾಲ್ಕು ಬಾರಿ ಹೋಗಿ ಬರುವ ಅಭ್ಯಾಸ ತನ್ನಿಂದ ತಾನಾಗಿಯೇ ಶುರುವಾಗಿತ್ತು.

ತಾರಸಿಯ ನೆಲದ ಮೇಲೆ ಓಡಾಡುವುದು, ಮೈ ಕೈ ಆಡಿಸುವುದು, ಓದುವುದು ... ಇವುಗಳ ಜೊತೆ ಚಲಿಸುವ ಮೋಡಗಳ, ಚಿಲಿಪಿಲಿ ಹಕ್ಕಿಗಳ, ಗೋಡೆ, ಪ್ಯಾರಪೆಟ್, ಮೆಟ್ಟಿಲ ಮೇಲಿನ ನೆರಳು ಬೆಳಕಿನಾಟವನ್ನು ನೋಡುವುದು ಸಾಮಾನ್ಯವಾಗಿ ಹೋಯಿತು.

ಆಗಲೇ ಈ ಪಾರಿವಾಳಗಳ ಪರಿಚಯವಾಗಿದ್ದು. ಅವುಗಳ ಬಿರುಗಣ್ಣ ನೋಟ, ಹಾರಿಳಿಯುವ ವೈಖರಿ, ಹತ್ತು ಹಲವು ಹಾವಭಾವಗಳು, ಚಲನವಲನಗಳು, ಸಣ್ಣ ಕದನಗಳು, ಕೀಟಲೆ, ಕುಚೇಷ್ಟೆಗಳು - ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಸಾಮಾನ್ಯ ಹಕ್ಕಿಗಳಲ್ಲಡಗಿದ ಅಸಾಧಾರಣ ಬೆಡಗು, ಲವಲವಿಕೆ ಹಾಗೂ ನಾಟಕೀಯತೆ ಚಕಿತಗೊಳಿಸಿತು.

ನನ್ನ ಉತ್ಸಾಹವನ್ನು ಕ್ಯಾಮೆರಾ ಕಣ್ಣಿಗೆ ವರ್ಗಾಯಿಸುವುದು ಸವಾಲಾದರೂ, ಬರಬರುತ್ತಾ ಅದು ದೈನಂದಿನ ದಿನಚರಿಯ ಅಂಗವಾಗಿ ಹೋಯಿತು. ಹಾಗೆ ಸೆರೆಹಿಡಿದ ಅನೇಕ ಚಿತ್ರಗಳಲ್ಲಿ ಕೆಲವನ್ನು ಆರಿಸಿ ಹಂಚಿಕೊಳ್ಳಬೇಕ್ಕೆನ್ನುವಾಗ ದ.ರಾ. ಬೇಂದ್ರೆಯವರ ಚಿರಪರಿಚಿತ ಹಾಡು ‘ಹಕ್ಕಿಹಾರುತಿದೆನೋಡಿದಿರಾ...’ ತಾನಾಗಿ ತುಟಿಯ ಮೇಲೆ ನಲಿದು ಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.