ಹಂಪಾಪುರ: ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಅಭಯಾ ರಣ್ಯದ ಕಾಕನಕೋಟೆಯ ಸಫಾರಿ ಕೇಂದ್ರದಲ್ಲಿ ಬುಧವಾರ ಸಫಾರಿಗೆ ತೆರಳಿದವರಿಗೆ ಹುಲಿ ಹಾಗೂ ಕರಡಿ ಪರಸ್ಪರ ಎದುರಾಗಿದ್ದ ದೃಶ್ಯ ಕಂಡಿದೆ.

ಅಂತರಸಂತೆ ವಲಯ ವ್ಯಾಪ್ತಿಯಲ್ಲಿರುವ ಕೆರೆಯಲ್ಲಿ ನೀರು ಕುಡಿದು ವಾಪಸ್ ತೆರಳುತ್ತಿದ್ದ ಹುಲಿಗೆ ಕರಡಿಯೊಂದು ಎದುರಾಗಿದೆ. ಕರಡಿ ಬರುವುದನ್ನು ಕಂಡ ಹುಲಿಯು ಕೆಲಕಾಲ ಗಮನಿಸಿದೆ. ಹುಲಿ ಬಳಿಗೆ ಬಂದ ಕರಡಿ ತನ್ನ ಕೈಗಳನ್ನು ಎತ್ತಿ ದಾಳಿ ನಡೆಸಲು ಮುಂದಾಗಿದೆ. ಇದರಿಂದ ಭಯಗೊಂಡ ಹುಲಿ ತಾನಿದ್ದ ಸ್ಥಳದಿಂದ ಕಾಲ್ಕಿತ್ತಿದೆ. ಈ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅರಣ್ಯ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಹಸಿರು ಆವರಿಸಿದೆ. ಸಫಾರಿಗೆ ತೆರಳಿದವರಿಗೆ ಹೆಚ್ಚಿನ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ.

ಕಾಡಿನಲ್ಲಿ ಹುಲಿಗಿಂತ ಕರಡಿ ಬಲಶಾಲಿ. ಹುಲಿ ಮತ್ತು ಕರಡಿ ಕಾದಾಟಕ್ಕೆ ನಿಂತರೆ ಕರಡಿಯೇ ಗೆಲ್ಲುತ್ತದೆ. ಕರಡಿ ಕಂಡಲ್ಲಿ ಹುಲಿಯು ತಾನಾಗಿಯೇ ಓಡಿ ಹೋಗುತ್ತದೆ ಎಂದು ವನ್ಯಜೀವಿ ಪ್ರೇಮಿ ಸಮೀರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.