ವನ್ಯಜೀವಿ ಯುವ ಛಾಯಾಗ್ರಾಹಕಿ ಸಾನ್ವಿ ವಿದ್ಯಾಶಂಕರ್ಗೆ ಇತ್ತೀಚೆಗಷ್ಟೇ ಕರ್ನಾಟಕ ಆಸ್ಕರಿ ಪ್ರಶಸ್ತಿ 2023 ಲಭಿಸಿದೆ. ಕರ್ನಾಟಕದಲ್ಲಿ ಛಾಯಾಚಿತ್ರ ಪ್ರತಿಭೆಯನ್ನು ಪ್ರೋತ್ಸಾಹಿಸಲು ಶಾರುಖ್ ಆಸ್ಕರಿ ಹಮೀದ್ ಅವರ ನೆನಪಿಗಾಗಿ ನೀಡುವ ಪ್ರಶಸ್ತಿ ಇದಾಗಿದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಛಾಯಾಗ್ರಾಹಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಸಲ 17 ವರ್ಷ ವಯಸ್ಸಿನ ಸಾನ್ವಿ ಅವರಿಗೆ ಲಭಿಸಿದೆ.

ತಮ್ಮ 10ನೇ ವಯಸ್ಸಿನಿಂದಲೇ ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿ ಬೆಳೆಸಿಕೊಂಡ ಸಾನ್ವಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಿಂದ ಹವ್ಯಾಸಿ ಛಾಯಾಗ್ರಹಣ ಪ್ರಾರಂಭಿಸಿದರು. ಬಂಡಿಪುರ ಮತ್ತು ಕಬಿನಿ ಸುತ್ತಲಿನ ವನ್ಯಜೀವಿಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದು ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಪಿಯುಸಿ ಓದುತ್ತಿರುವ ಸಾನ್ವಿ ಸೆರೆ ಹಿಡಿದ ಚಿತ್ರಗಳಿಗೆ ಯುವ ವಿಭಾಗದಡಿ ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ತಮ್ಮ 12ನೇ ವಯಸ್ಸಿನಲ್ಲಿಯೇ ಕೀನ್ಯಾದ ಮಸಾಯ್ ಮಾರಗೆ ಭೇಟಿ ನೀಡಿ, ವನ್ಯಜೀವಿಗಳ ಚಿತ್ರ ಸೆರೆ ಹಿಡಿದು ಕೆಲ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೂ ನಾಮ ನಿರ್ದೇಶನಗೊಂಡರು.

ಸದ್ಯ ಆಫ್ರಿಕದ ವನ್ಯ ಜೀವಿ ಜಗತ್ತನ್ನು ಬೆನ್ನತ್ತಿರುವ ಸಾನ್ವಿ, ಅಲ್ಲಿನ ನಕುರು, ಅಂಬೊಸೊಲಿ ಮತ್ತು ಮಸಾಯ್ ಮಾರಗಳಲ್ಲಿ ಸೆರೆ ಹಿಡಿದ ಒಂದಷ್ಟು ವನ್ಯಜೀವಿಗಳ ಚಿತ್ರಗಳು ಇಲ್ಲಿವೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.