ಮೈಸೂರು -ಬೆಂಗಳೂರು ಹೆದ್ದಾರಿ ಪಕ್ಕದ ಪ್ರಶಾಂತನಗರದಲ್ಲಿ ಈಗ ಹಕ್ಕಿಗಳ ಕಲರವ ಕೇಳಿ ಬರುತ್ತಿದೆ. ಹಚ್ಚಹಸಿರಿನ ಗಿಡಗಳ ಮೇಲೆ ಮಲ್ಲಿಗೆ ಹೂವನ್ನು ಚೆಲ್ಲಿದಂತೆ ಕಾಣುವ ಬಾನಾಡಿಗಳು ದಾರಿ ಹೋಕರನ್ನು ಒಂದರೆಕ್ಷಣ ನಿಂತು ನೋಡುವಂತ್ತಿವೆ.
ಸಂತಾನೋತ್ಪತ್ತಿಗಾಗಿ ನವೆಂಬರ್ ತಿಂಗಳಿನಿಂದಲೇ ಹೊರ ರಾಜ್ಯ, ದೇಶಗಳಿಂದ ವಿವಿಧ ಜಾತಿಯ ಹಕ್ಕಿಗಳು ವಲಸೆ ಬರಲು ಶುರುವಾಗಿವೆ.

ಮೈಸೂರು ನಗರದ ಬನ್ನಿಮಂಟ್ಟಪ, ಹನುಮಂತನಗರ, ಅಂಬೇಡ್ಕರ್ ಕಾಲೊನಿಯಿಂದ ರಾಜಕಾಲುವೆಯಲ್ಲಿ ಹರಿಯುವ ಕೊಳಚೆ ನೀರು ಪ್ರಶಾಂತ ನಗರದ ನಿವೇಶನದಲ್ಲಿ ನಿಂತಿದೆ. ಈ ನೀರು ದಾರಿಹೋಕರಿಗೆ ಗಬ್ಬುವಾಸನೆ ಬೀರಿದರೆ, ಪಕ್ಷಿಗಳಿಗೆ ಮಾತ್ರ ಇದ್ಯಾವುದೂ ಲೆಕ್ಕಕ್ಕಿಲ್ಲ.

ಬಣ್ಣದ ಕೊಕ್ಕರೆ, ಕಂದು ಬಾತು, ಬಾಯ್ಕಳಕ ಕಾರ್ಮೊರಾಂಟ್, ಲಿಟಲ್ ಎಗ್ರೇಟ್, ಗ್ರೇ ಹೆರಾನ್, ಕರಿ ಕೆಂಬರಲು, ಕರಿ ಕೆಂಬರಲು, ಮೂನ್ಹೆರಾನ್, ಕ್ಯಾಟಲ್ ಎಗ್ರೇಟ್ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಬೀಡುಬಿಟ್ಟವೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ದಕ್ಷಿಣ ಭಾರತದ ಕಡೆಗೆ ಪಕ್ಷಿಗಳು ವಲಸೆ ಬರುತ್ತವೆ. ಕೊರೆಯುವ ಚಲಿಯಿಂದ ರಕ್ಷಣೆ ಬಯಸಿ ಹಾಗೂ ಆಹಾರ, ಸಂತಾನೋತ್ಪತ್ತಿಗಾಗಿ ಸಾವಿರಾರು ಕಿಲೋ ಮೀಟರ್ ದೂರ ಕ್ರಮಿಸುತ್ತವೆ. ರಂಗನತಿಟ್ಟಿನಲ್ಲಿ ಹೆಚ್ಚಿನ ಪಕ್ಷಿಗಳನ್ನು ಕಾಣಬಹುದು. ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಮೂಲ ವಾಸಸ್ಥಳಕ್ಕೆ ವಾಪಸ್ ಹೋಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.