1. ನಮ್ಮ ಭೂಮಿಯ ಉಪಗ್ರಹ ಚಿತ್ರವೊಂದು ಇಲ್ಲಿದೆ (ಚಿತ್ರ-1):
ಅ. ಈ ಚಿತ್ರದಲ್ಲಿ ಕಾಣುತ್ತಿರುವ ಭೂಖಂಡ ಯಾವುದು?
ಬ. ಇಲ್ಲಿ ಗೋಚರಿಸುತ್ತಿರುವ ಬೆಳ್ಳನೆಯ ನಿರ್ಮಿತಿಗಳು ಏನು?
ಕ. ಭೂ ಗ್ರಹದ ನೀಲ ವರ್ಣಕ್ಕೆ ಅದರ ಮೇಲ್ಮೈನ ಯಾವ ಲಕ್ಷಣ ಕಾರಣ?

2. ಪಕ್ಷಿಧಾಮವೊಂದರ ಒಂದು ದೃಶ್ಯ ಚಿತ್ರ-2ರಲ್ಲಿದೆ. ನಮ್ಮ ದೇಶದಲ್ಲಿರುವ ಕೆಲವು ಅತ್ಯಂತ ಪ್ರಸಿದ್ಧ ಪಕ್ಷಿಧಾಮಗಳನ್ನೂ, ಅವು ಇರುವ ರಾಜ್ಯಗಳನ್ನೂ ಇಲ್ಲಿ ಪಟ್ಟಿ ಮಾಡಿದೆ. ಯಾವ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ, ಸರಿಹೊಂದಿಸಿ:
1. ರಂಗನತಿಟ್ಟು ಪಕ್ಷಿಧಾಮ ಅ. ಆಂಧ್ರಪ್ರದೇಶ
2. ಭರತಪುರ ಪಕ್ಷಿಧಾಮ  ಬ. ಗುಜರಾತ್
3. ವೇದಾಂತಂಗಳ್ ಪಕ್ಷಿಧಾಮ  ಕ. ಕೇರಳ
4. ಸಲೀಂ ಆಲಿ ಪಕ್ಷಿಧಾಮ  ಡ. ಕರ್ನಾಟಕ
5. ಕೌಂಡಿಣ್ಯ ಪಕ್ಷಿಧಾಮ  ಇ. ತಮಿಳುನಾಡು
6. ವೆಂಬನಾಡ್ ಪಕ್ಷಿಧಾಮ  ಈ. ಗೋವಾ
7. ನಳ್ ಸರೋವರ್ ಪಕ್ಷಿಧಾಮ ಉ. ರಾಜಸ್ಥಾನ

3. ಧರೆಯ ಯಾವುದೇ ಸಸ್ಯವನ್ನು ಯಾವುದೇ ಋತುಮಾನದಲ್ಲೂ ಬೆಳೆಸಬಹುದಾದ ಪರಿಸರವನ್ನು ಒದಗಿಸಬಲ್ಲ ಬೃಹದಾಕಾರದ ಕೃತಕ ನಿರ್ಮಿತಿ ಚಿತ್ರ-3ರಲ್ಲಿದೆ. ಇಂಥ ‘ಕಟ್ಟಡ’ಗಳ ವಿಶಿಷ್ಟ ಹೆಸರೇನು ಗೊತ್ತೇ?
ಅ. ಗಾಜಿನ ಮನೆ→ಬ. ಸಸ್ಯಧಾಮ
ಕ. ಹಸಿರು ಮನೆ→ಡ. ಸಸ್ಯೋದ್ಯಾನ

4. ಯುನೆಸ್ಕೋದ ‘ವಿಶ್ವ ಪಾರಂಪರಿಕ ತಾಣ’ಗಳ ಪಟ್ಟಿಯಲ್ಲಿರುವ ಶಿಲ್ಪಕಲಾಮಯ ಅದ್ಭುತ ಪುರಾತನ ದೇವಾಲಯವೊಂದು ಚಿತ್ರ-4ರಲ್ಲಿದೆ. ಇದನ್ನು ಗುರುತಿಸಬಲ್ಲಿರಾ?
ಅ. ಬೇಲೂರಿನ ಚೆನ್ನಕೇಶವ ದೇವಾಲಯ
ಬ. ಖುಜುರಾಹೋ ದೇವಾಲಯ
ಕ. ಕೋನಾರ್ಕ್ನ ಸೂರ್ಯ ದೇವಾಲಯ
ಡ. ಹಂಪಿಯ ವಿರೂಪಾಕ್ಷ ದೇವಾಲಯ
ಇ. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ

5. ವಿಶ್ವ ಪ್ರಸಿದ್ಧ ನಿಸರ್ಗ ರಮ್ಯ ತಾಣಗಳಲ್ಲೊಂದಾದ ‘ಗೈಲಿನ್ ಬೆಟ್ಟಗಳು’ ಚಿತ್ರ-5ರಲ್ಲಿವೆ. ಸುಣ್ಣ ಶಿಲೆಗಳ ಗುಹೆ-ಬೆಟ್ಟ-ಗುಡ್ಡಗಳ ಈ ಸುಂದರ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
ಅ. ಚೀನಾ→ಬ. ಥಾಯ್ಲೆಂಡ್
ಕ. ಮ್ಯಾನ್ಮಾರ್→ಡ. ಶ್ರೀಲಂಕಾ

6. ಆಫ್ರಿಕಾ ಖಂಡದ ಜಾಂಬಿಯಾ ಮತ್ತು ಜಿಂಬಾಬ್ವೆ ರಾಷ್ಟ್ರಗಳ ಗಡಿಯಲ್ಲಿ ಜಾಂಬೇಜಿ ನದಿ ರೂಪಿಸಿರುವ ಜಗತ್ಪ್ರಸಿದ್ಧ ಜಲಪಾತ ಚಿತ್ರ-6ರಲ್ಲಿದೆ. ಧರೆಯ ‘ಅತ್ಯಧಿಕ ವಿಸ್ತೀರ್ಣದ ನೀರ ಹಾಳೆಯ ಜಲಪಾತ’ ಎಂಬ ವಿಶ್ವ ದಾಖಲೆಯ, ನಿಸರ್ಗದ ಸಪ್ತ ವಿಸ್ಮಯಗಳ ಪಟ್ಟಿಯಲ್ಲಿರುವ ಈ ಜಲಪಾತ ಯಾವುದು ಗೊತ್ತೇ?
ಅ. ಇಗುವಾಜು ಜಲಪಾತ
ಬ. ಏಂಜಲ್ ಜಲಪಾತ
ಕ. ವಿಕ್ಟೋರಿಯಾ ಜಲಪಾತ
ಡ. ನಯಾಗರಾ ಜಲಪಾತ

7. ವಿಶ್ವದ ಅತ್ಯಂತ ವಿಸ್ತಾರ ಬಿಸಿ ಮರುಭೂಮಿಯಾಗಿರುವ ಸಹರಾದ ಒಂದು ದೃಶ್ಯ ಚಿತ್ರ-7ರಲ್ಲಿದೆ. ಸಹರಾ ಮರುಭೂಮಿಯ ಒಟ್ಟು ವಿಸ್ತೀರ್ಣ ಇವುಗಳಲ್ಲಿ ಯಾವುದಕ್ಕೆ ಸಮ?
ಅ. 9.2 ಕೋಟಿ ಚದರ ಕಿ.ಮೀ.
ಬ. 9.2 ದಶಲಕ್ಷ ಚದರ ಕಿ.ಮೀ.
ಕ. 9.2 ಲಕ್ಷ ಚದರ ಕಿ.ಮೀ.
ಡ. 92 ಸಾವಿರ ಚದರ ಕಿ.ಮೀ.

8. ಆಸ್ಟ್ರೇಲಿಯಾದ ಸುಪ್ರಸಿದ್ಧ ನೀಲಿ ಪರ್ವತಗಳಲ್ಲಿ ನೈಸರ್ಗಿಕವಾಗಿ ಮೈದಳೆದು ನಿಂತಿರುವ ವಿಸ್ಮಯಕರ ತ್ರಿವಳಿ ಬಂಡೆ ಶಿಲ್ಪ ಚಿತ್ರ-8ರಲ್ಲಿದೆ. ಈ ಅದ್ಭುತ ಪ್ರಕೃತಿ ನಿರ್ಮಿತಿಯ ಹೆಸರೇನು?
ಅ. ಮೂರು ಸ್ತಂಭಗಳು
ಬ. ತ್ರಿವಳಿ ಗೋಪುರಗಳು
ಕ. ತ್ರಿವಳಿ ಸೋದರರು
ಡ. ಮೂವರು ಸೋದರಿಯರು

9. ಪ್ರಪಂಚದ ಮೂರು ವಿಭಿನ್ನ ದೇಶಗಳಲ್ಲಿ, ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗಿನ ಬೇರೆ ಬೇರೆ ಕಾಲ ಘಟ್ಟಗಳಲ್ಲಿ, ಆಯಾ ಕಾಲದ ಮನುಷ್ಯರಿಂದ ನಿರ್ಮಾಣಗೊಂಡ ತ್ರಿವಿಧ ಅದ್ಭುತ ಪ್ರಸಿದ್ಧ ನಿರ್ಮಿತಿಗಳು ಚಿತ್ರ-9, 10 ಮತ್ತು 11ರಲ್ಲಿವೆ:
ಅ. ಈ ನಿರ್ಮಿತಿಗಳನ್ನು ಗುರುತಿಸಿ
ಬ. ಇವು ಜಗತ್ತಿನ ಯಾವ ಯಾವ ರಾಷ್ಟ್ರಗಳಲ್ಲಿವೆ?

10. ಸುಪರಿಚಿತ ವಾನರ ಒರಾಂಗುಟಾನ್ ಚಿತ್ರ-12ರಲ್ಲಿವೆ. ಒರಾಂಗೊಟಾನ್ ಕುರಿತ ಈ ಹೇಳಿಕೆಗಳಲ್ಲಿ ಯಾವುದು ಸರಿ ಇಲ್ಲ?
ಅ. ಒರಾಂಗೊಟಾನ್ಗಳಲ್ಲಿ ಮೂರು ಪ್ರಭೇದಗಳಿವೆ
ಬ. ಈ ವಾನರರು ದಕ್ಷಿಣ ಅಮೆರಿಕದಲ್ಲಿವೆ
|ಕ. ಇವು ಸಂಘ ಜೀವನ ನಡೆಸುವುದಿಲ್ಲ
ಡ. ಹಣ್ಣುಗಳೇ ಈ ವಾನರರ ಪ್ರಧಾನ ಆಹಾರ
ಇ. ಈ ವಾನರರು ನೆಲಕ್ಕೆ ಇಳಿಯುವುದು ಅತ್ಯಪರೂಪ

11. ಎತ್ತರದಲ್ಲಿ ಜಿರಾಫ್ಅನ್ನೂ, ಚರ್ಮದ ಚಿತ್ತಾರದಲ್ಲಿ ಜೀಬ್ರಾವನ್ನೂ ಹೋಲುವ ಸ್ತನಿ ವರ್ಗ ಪ್ರಾಣಿಯೊಂದು ಚಿತ್ರ-13ರಲ್ಲಿದೆ. ಈ ಪ್ರಾಣಿ ಯಾವುದು ಗೊತ್ತೇ?
ಅ. ಆರಿಕ್ಸ್→ಬ. ಅಡಾಕ್ಸ್
ಕ. ಒಕಾಪಿ→ಡ. ಟೇಪರ್
ಇ. ಗೆಜೆಲ್

12. ಧರೆಯ ಅತ್ಯಂತ ವಿಶಾಲ ಸಾಗರವಾದ ‘ಶಾಂತ ಸಾಗರ’ವನ್ನು ಪರಿವರಿಸಿದಂತೆ ಹರಡಿರುವ ವಿಶಿಷ್ಟ ಪ್ರದೇಶ ‘ಬೆಂಕಿಯ ಉಂಗುರ’ವನ್ನು (ರಿಂಗ್ ಆಫ್ ಫೈರ್) ಚಿತ್ರ-14 ತೋರಿಸುತ್ತಿದೆ. ಈ ಪ್ರದೇಶದ ವೈಶಿಷ್ಟ್ಯ ಏನು?
ಅ. ಅಲ್ಲಿ ಅತಿ ಹೆಚ್ಚು ಬಿಸಿ ನೀರಿನ ಬುಗ್ಗೆಗಳಿವೆ
ಬ. ಈ ಪ್ರದೇಶದಲ್ಲಿ ಸದಾ ಭಾರೀ ಅಲೆಗಳು ಏಳುತ್ತವೆ
ಕ. ಅದು ಕಡಲಿನ ‘ಉಷ್ಣೋದಕ ಪ್ರವಾಹ’ಗಳ ಪ್ರದೇಶವಾಗಿದೆ
ಡ. ಅದು ಅತ್ಯಧಿಕ ಸಂಖ್ಯೆಯ ಜ್ವಾಲಾಮುಖಿಗಳಿರುವ ಪ್ರದೇಶವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.