ಆಹ್ಲಾದಕರ ವಾತಾವರಣವೆಂದರೆ ಏನು? ಪರಿಸರಕ್ಕೆ ಧಕ್ಕೆ ಮಾಡದಿದ್ದರೆ ಅದರಿಂದಾಗುವ ಅನುಕೂಲವೇನು? ಐಷಾರಾಮಿ ವಸ್ತುಗಳನ್ನು ಬದಿಗಿರಿಸಿದರೆ ಎಂತಹ ಸಮೃದ್ಧ ಪರಿಸರ ನಮ್ಮದಾಗುತ್ತದೆ ಎಂಬ ಪಾಠವನ್ನು, ಉದಾಹರಣೆಯೊಂದಿಗೆ (ಲಾಕ್‌ಡೌನ್) ವಿಶ್ವಕ್ಕೇ ತಿಳಿಸಿದ್ದು ಕೋವಿಡ್–19. ಆ ಪಾಠ, ಜೀವನಪಾಠವಾದರೆ ಬದುಕು ಹಸನು. ಅಷ್ಟೇ ಅಲ್ಲ, ಓಝೋನ್ ಕೂಡ ಭದ್ರ...

ಮನುಷ್ಯ ಭೂಮಿ ಮೇಲೆ ನೆಮ್ಮದಿಯಾಗಿ ಬದುಕಲು, ಆರೋಗ್ಯಕರವಾಗಿ ಉಸಿರಾಡಲು, ದೇಹದ ತಾಪಮಾನ ಕಾಪಾಡಲು ಪ್ರಕೃತಿಯಲ್ಲಿ ಸಾಕಷ್ಟು ಸೌಲಭ್ಯಗಳಿವೆ. ಅಂತಹ ಸೌಲಭ್ಯಗಳ ದುರುಪಯೋಗವೇ ಹೆಚ್ಚಾಗುತ್ತಿದೆ. ತನ್ನ ಜೀವನವಶ್ಯವಾದ ಸೌಲಭ್ಯಗಳನ್ನು ಉಳಿಸಿಕೊಳ್ಳಲು ಮಾನವ ಈಗಲೂ ಪ್ರಯತ್ನಪಡದೆ ಹೋದರೆ, ಬದುಕು ಬರ್ಬರವಾಗುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ವಾತಾವರಣವನ್ನು ಹದಗೆಡಿಸುವ ಹೈಟೆಕ್ ವಸ್ತುಗಳ ಬಳಕೆ ಇನ್ನೂ ಹೆಚ್ಚಾದರೆ, ಕ್ಯಾನ್ಸರ್ ಅಧಿಕವಾಗಿ ಬಾಧಿಸಲಿದ್ದು, ಪರಿಸರ ವ್ಯವಸ್ಥೆಗೇ ಧಕ್ಕೆಯಾಗಲಿದೆ...

ಇಂತಹ ಸಾಕಷ್ಟು ಎಚ್ಚರಿಕೆಗಳನ್ನು ಕಾಲಕಾಲಕ್ಕೆ ವಿಜ್ಞಾನಿಗಳು, ಪರಿಸರತಜ್ಞರು ನೀಡುತ್ತಲೇ ಬರುತ್ತಿದ್ದಾರೆ. ಆದರೆ, ಪರಿಸರಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಆಚರಣೆ ಅಥವಾ ಜಾಗೃತಿಯ ದಿನ ಬಂದಾಗ, ಒಂದಷ್ಟು ಸಸಿ ನೆಟ್ಟು ಪರಿಸರದ ಬಗ್ಗೆ ಮಾತನಾಡಿ ಸುಮ್ಮನಾಗಿಬಿಡುತ್ತಾರೆ. ದಶಕಗಳಿಂದ ಪ್ರಕೃತಿ ಮೇಲೆ ಮಾನವ ಮಾಡಿದರುವ ದಾಳಿ ಕೇವಲ ಒಂದಷ್ಟು ಸಸಿ ನೆಡುವುದರಿಂದ ಸರಿಹೋಗುವುದಿಲ್ಲ. ಆಚರಣೆಗಾಗಿ ಒಂದಷ್ಟು ಕಾರ್ಯಕ್ರಮ ಮಾಡಿ, ಭಾಷಣ ಮಾಡಿದರೆ ಎಲ್ಲವೂ ಸುಸ್ಥಿತಿಗೆ ಬರುವುದಿಲ್ಲ ಎಂಬುದನ್ನು ‘ದಿನ’ ಆಚರಿಸುವ ಸಂಘ–ಸಂಸ್ಥೆಗಳು ಹಾಗೂ ಸರ್ಕಾರಗಳೂ ಅರಿತುಕೊಳ್ಳಬೇಕು.

ಪ್ರಕೃತಿ / ಪರಿಸರವನ್ನು ಉಳಿಸಲು ಜಾಗೃತಿ ಮೂಡಿಸುವ ದಿನಗಳ ಸಾಲಲ್ಲಿ ‘ಓಝೋನ್ ದಿನ’ಕ್ಕೆ ಅಗ್ರಸ್ಥಾನ. ಓಝೋನ್ ದಿನವನ್ನು ಸೆಪ್ಟೆಂಬರ್ 16ರಂದು ಜಾಗತಿಕವಾಗಿ ಆಚರಿಸಲಾಗುತ್ತದೆ. ಓಝೋನ್ ದಿನ ಎಂದರೆ ಸಾಕಷ್ಟು ವಯಸ್ಕರಿಗೇ ಅರ್ಥವಾಗುವುದಿಲ್ಲ. ಅದೇ 3–4ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಕೇಳಿ, ಕೂಡಲೇ ಅದರ ಬಗ್ಗೆ ಒಂದಷ್ಟು ವಿವರಣೆ ಕೊಡುತ್ತಾರೆ. ಸೂರ್ಯನ ಅತ್ಯಂತ ಪ್ರಕಾಶಮಾನ ಹಾಗೂ ಮಾನವನಿಗೆ ಹಾನಿಕಾರಕವಾದ ಕಿರಣಗಳನ್ನು (ಅಲ್ಟ್ರಾವೈಯಲೆಟ್) ತಡೆಯುವುದೇ ಈ ಓಝೋನ್ ಪದರ. ಓಝೋನ್ ಪದರ ಇಲ್ಲದೇ ಹೋದರೆ ಭೂಮಿಯಲ್ಲಿ ಜೀವಿಸುವುದು ಅಸಾಧ್ಯ. ಅತ್ಯಂತ ಅಪಾಯಕಾರಿ ಅನಿಲಗಳು ಈ ಪದರದ ಮೇಲಿವೆ. ಅಲ್ಟ್ರಾವೈಯಲೆಟ್ ಕಿರಣಗಳನ್ನು (ಅತಿನೇರಳೆ ಕಿರಣಗಳು) ನೇರವಾಗಿ ಮನುಷ್ಯನಿಗೆ ತಾಕಿದರೆ, ದುಷ್ಪರಿಣಾಮ ಬೀರುವ ಚರ್ಮರೋಗಗಳು ಬರುತ್ತವೆ. ಸೂರ್ಯನ ಅಲ್ಟ್ರಾವೈಯಲೆಟ್ ಕಿರಣಗಳ ಪ್ರಕಾಶಮಾನವನ್ನು ಶೇ 97ರಿಂದ 99ರಷ್ಟನ್ನು ಓಝೋನ್ ಪದರವೇ ಹೀರಿಕೊಳ್ಳುತ್ತದೆ. ಸೂರ್ಯನ ಕಿರಣಗಳು ಜೀವ ನೀಡುತ್ತವೆ, ಆದರೆ, ಓಝೋನ್ ಪದರ ಜೀವದಿಂದಿರಲು ನೆರವಾಗುತ್ತದೆ.

ಓಝೋನ್ ಪದರವನ್ನು ಹಾಳು ಮಾಡುತ್ತಿರುವುದು ಮನುಷ್ಯ ‘ಹೈಟೆಕ್’ ಆಗಿ ಬದುಕಲು ಮನೆ, ದೇಹ, ವಾಹನಗಳಲ್ಲಿ ತುಂಬಿಕೊಂಡಿರುವ ಅತ್ಯಾಧುನಿಕ ಸೌಲಭ್ಯಗಳು. ಹವಾನಿಯಂತ್ರಿತ ಯಂತ್ರಗಳು, ರೆಫ್ರಿಜರೇಟರ್ ಇತ್ಯಾದಿಗಳು ಹೊರಸೂಸುವ ಓಝೋನ್–ಡಿಪ್ಲೀಟಿಂಗ್ ಗ್ಯಾಸೆಸ್ (ಒಡಿಎಸ್) ಓಝೋನ್ ಪದರಲ್ಲಿ ರಂಧ್ರ ಸೃಷ್ಟಿಸುತ್ತಿವೆ. ಇದು ಹೀಗೇ ಮುಂದುವರಿದು ಓಝೋನ್ ಪದರ ಮತ್ತಷ್ಟು ಹಾಳಾದರೆ, ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ; ಕಣ್ಣಿನ ಪೊರೆ ಹಾಳಾಗುತ್ತದೆ; ಸಸ್ಯಗಳು, ಬೆಳೆ ಹಾಗೂ ಪರಿಸರ ವ್ಯವಸ್ಥೆಗೇ ಧಕ್ಕೆಯಾಗಲಿದೆ.

ಓಝೋನ್ ಫಾರ್ ಲೈಫ್: ಓಝೋನ್ ಪದರ ಸಂರಕ್ಷಣೆಯಲ್ಲಿ 35 ವರ್ಷ!

ಜಾಗತಿಕವಾಗಿ ಓಝೋನ್ ಪದರ ಸಂರಕ್ಷಣೆಗೆ ಪಣತೊಟ್ಟು 35 ವರ್ಷವಾಗುತ್ತಿದೆ. ಆದ್ದರಿಂದಲೇ ಈ ವರ್ಷದ (2020) ಥೀಮ್ ‘ಓಝೋನ್ ಫಾರ್ ಲೈಫ್: ಓಝೋನ್ ಪದರ ಸಂರಕ್ಷಣೆಯಲ್ಲಿ 35 ವರ್ಷ!’. ಮಾನವರು ಅವರನ್ನು ಸಂರಕ್ಷಿಸುತ್ತಿರುವ ಕವಚಕ್ಕೇ ಹಾನಿ ಮಾಡುತ್ತಿದ್ದಾರೆ ಎಂಬುದನ್ನು 1970ರ ಸಂದರ್ಭದಲ್ಲಿ ವಿಜ್ಞಾನಿಗಳು ಕಂಡುಹಿಡಿದರು. ಓಝೋನ್ ಪದರದಲ್ಲಾಗುತ್ತಿರುವ ರಂಧ್ರಗಳ ಬಗ್ಗೆ ಎಚ್ಚರಿಸಿದರು. ಇದರಿಂದ ಎಚ್ಚೆತ್ತುಕೊಂಡು, ವಿಶ್ವಸಂಸ್ಥೆಯ ವಿಯೆನ್ನಾ ಸಮಾವೇಶದಲ್ಲಿ 1985ರಲ್ಲಿ ಓಝೋನ್ ಪದರ ಸಂರಕ್ಷಣೆಗೆ ನಿರ್ಣಯ ಕೈಗೊಳ್ಳಲಾಯಿತು. ಇದಾದನಂತರ, ಸರ್ಕಾರಗಳು, ವಿಜ್ಞಾನಿಗಳು ಮತ್ತು ಕೈಗಾರಿಕೆಗಳು ಒಟ್ಟಾಗಿ ಒಡಿಎಸ್‌ಗೆ ಕಾರಣವಾಗುವ ಎಲ್ಲ ಕಣಗಳನ್ನು ನಿಗ್ರಹಿಸಲು ಮುಂದಾದರು. 2019ರಲ್ಲಿ ಜಾರಿಗೆ ಬಂದ, ಕಿಗಾಲಿ ತಿದ್ದುಪಡಿಯ ನೆರವಿನಿಂದ ಹೈಡ್ರೊಫ್ಲೊರೊಕಾರ್ಬನ್ (ಎಚ್‌ಎಫ್‌ಸಿ), ಗ್ರೀನ್‌ಹೌಸ್ ಅನಿಲಗಳನ್ನು ಕಡಿಮೆ ಮಾಡಲು ನೆರವಾಯಿತು.

ಕೋವಿಡ್–19 ಸಂದರ್ಭದಲ್ಲಿ ತಣ್ಣನೆಯ ವಾತಾವರಣದಿಂದ ಸೋಂಕು ಹೆಚ್ಚು ಹರಡುತ್ತದೆ ಎಂಬುದು ಸಾಬೀತಾಯಿತು. ಆದ್ದರಿಂದಲೇ, ಹವಾನಿಯಂತ್ರಿತ ಅಥವಾ ತಣ್ಣನೆಯ ವಾತಾವರಣವನ್ನು ಕೃತಕವಾಗಿ ಸೃಷ್ಟಿಸುವ ಯಂತ್ರಗಳ ಬಳಕೆ ಕಡಿಮೆಯಾಯಿತು. ಇದರಿಂದಲೇ ಓಝೋನ್ ಪದರ ನೆಮ್ಮದಿಯ ಉಸಿರನ್ನೂ ಬಿಟ್ಟಿತು. ‘ಓಝೋನ್ ಫಾರ್ ಲೈಫ್’ ಎಂಬುದು ಇಂದಿನ ಘೋಷವಾಕ್ಯವಾಯಿತು. ಆದರೆ, ಇದು ಇಲ್ಲಿಗೇ ನಿಲ್ಲಬಾರದು. ಮುಂದಿನ ಜನಾಂಗಕ್ಕೆ ಸುರಕ್ಷಿತ ಓಝೋನ್ ಪದರವನ್ನು ನೀಡುವ ನಮ್ಮ ಪ್ರಯತ್ನ ಸತತವಾಗಿ ಮುಂದುವರಿಯುತ್ತಲೇ ಇರಬೇಕೆಂಬುದು ವಿಜ್ಞಾನಿಗಳು ಹಾಗೂ ಪರಿಸರತಜ್ಞರ ಅಭಿಮತ.

ಓಝೋನ್ ಪದರದ ಸಂರಕ್ಷಣೆ ಹೇಗೆ?

ಕ್ಲೋರೊಫ್ಲುರೊಕಾರ್ಬನ್ (ಸಿಎಫ್‌ಸಿ) ಹೊರಸೂಸುವ ಪ್ಲಾಸ್ಟಿಕ್ ಅಡಕಗಳಲ್ಲಿರುವ ಹೇರ್ ಸ್ಪ್ರೈಸ್, ಫ್ರೆಶ್ನೆರ್ಸ್; ಕಾಸ್ಮೆಟಿಕ್ ಹಾಗೂ ಏರೊಸೊಲ್‌ಗಳ ಬಳಕೆ ಕಡಿತಗೊಳಿಸುವುದು.

ಪರಿಸರ ಸ್ನೇಹಿತ ರಸಗೊಬ್ಬರಗಳನ್ನೇ ಬಳಸುವುದು.

ಅತಿಯಾದ ಮಾಲಿನ್ಯ ಹೊರಸೂಸಿ ವಾಯುಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ಬಳಸದಿರುವುದು.

ನಿಯಮಿತ ನಿರ್ವಹಣೆಯಿಂದ ಗ್ಯಾಸೊಲೈನ್ ಮತ್ತು ಕಚ್ಚಾತೈಲವನ್ನು ಉಳಿಸುವುದು.

ಪ್ಲಾಸ್ಟಿಕ್ ಮತ್ತು ರಬ್ಬರ್, ಟೈರ್‌ಗಳನ್ನು ಸುಡಬಾರದು.

ಎಂದಿನಿಂದ ಆಚರಣೆ?

1994ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಸೆಪ್ಟೆಂಬರ್ 16ರಂದು ಓಝೋನ್ ಪದರದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ದಿನ ಆಚರಿಸಲು ನಿರ್ಧರಿಸಲಾಯಿತು. ಓಝೋನ್ ಪದರದ ಹಾನಿಗೆ ಕಾರಣವಾಗಿರುವ ವಸ್ತುಗಳನ್ನು ಕಡಿತಗೊಳಿಸಲು, ಓಝೋನ್ ಸಂರಕ್ಷಿಸಲು 1987ರಲ್ಲಿ ಸಹಿ ಮಾಡಲಾದ ಮಾಂಟ್ರೀಯಲ್ ಪ್ರೊಟೊಕಾಲ್ ಆನ್ ಸಬ್‌ಸ್ಟೆನ್ಸಸ್ ಒಪ್ಪಂದದ ಸ್ಮರಣಾರ್ಥ ಈ ದಿನ ಆಚರಿಸಲು ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.