‘ಗ್ರೀನ್ ಇಂಡಿಯಾ’ ಅಭಿಯಾನದ ಸವಾಲು ಸ್ವೀಕರಿಸಿರುವ ನಟಿ ಸಮಂತಾ, ತನ್ನ ಮಾವ ನಾಗಾರ್ಜುನ ಜೊತೆಗೂಡಿ ಮನೆಯ ಅಂಗಳದಲ್ಲಿ ಗಿಡ ನೆಟ್ಟಿದ್ದಾರೆ.

ಹರಹಾಯ್ ಎಂಬವರಿಂದ ಈ ಸವಾಲು ಸ್ವೀಕರಿಸಿದ ಸಮಂತಾ ಹಾಗೂ ನಾಗಾರ್ಜುನ ತಲಾ ಮೂರು ಸಸಿಗಳನ್ನು ನೆಟ್ಟಿದ್ದಾರೆ.ಆ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಸಮಂತಾ ಈ ಸವಾಲನ್ನು ನಟಿಯರಾದ ಕೀರ್ತಿ ಸುರೇಶ್, ರಶ್ಮಿಕಾ ಮಂದಣ್ಣ ಹಾಗೂ ತಮ್ಮ ಸೆಲಬ್ರೆಟಿ ಡಿಸೈನರ್ ಶಿಲ್ಪಾ ರೆಡ್ಡಿ ಅವರಿಗೆ ದಾಟಿಸಿದ್ದಾರೆ.

ತೆಲಂಗಾಣದ ಸಂಸದ ಸಂತೋಷ್ಕುಮಾರ್ ‘ಗ್ರೀನ್ಇಂಡಿಯಾ3.0’ ಅಭಿಯಾನ ಆರಂಭಿಸಿದ್ದಾರೆ. ಈಚಾಲೆಂಜ್ ಸ್ವೀಕರಿಸಿದವರು ತಮ್ಮ ಮನೆ ಸುತ್ತ ಯಾವುದಾದರೂ ಪ್ರದೇಶದಲ್ಲಿ ಕನಿಷ್ಠ ಮೂರು ಗಿಡಗಳನ್ನು ನೆಟ್ಟು, ಪೋಷಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಅದರ ಫೋಟೊ ಹಂಚಿಕೊಂಡು, ಕನಿಷ್ಟ ಮೂವರಿಗೆ ಚಾಲೆಂಜ್ ಹಸ್ತಾಂತರಿಸಬೇಕು.ಈ ಹಿಂದೆ ಪ್ರಭಾಸ್, ಸಾಯಿ ಪಲ್ಲವಿ ಮತ್ತು ಕಾರ್ತಿಕೇಯ ಚಾಲೆಂಜ್ ಸ್ವೀಕರಿಸಿ, ಗಿಡ ನೆಡುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ.

ಲಾಕ್ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವಸಮಂತಾ, ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಡುಗೆ ಕಲಿಯುವುದು, ಟೆರೇಸ್ ಗಾರ್ಡನಿಂಗ್, ಏರಿಯಲ್ ಯೋಗ ಮಾಡುತ್ತಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.