ಒಂದು ಹತ್ಯೆ ಪ್ರಕರಣ ಭಾರತ– ಕೆನಡಾ ನಡುವಿನ ಕಲಹಕ್ಕೆ ಕಾರಣವಾಗಿದೆ. ಯಾವ ಮಟ್ಟಿಗೆ ಎಂದರೆ, ಎರಡೂ ದೇಶಗಳು ಪರಸ್ಪರ ರಾಜತಾಂತ್ರಿಕರಿಗೆ ದೇಶ ತೊರೆಯುವಂತೆ ಸೂಚನೆ ನೀಡಿವೆ. ಹತ್ಯೆಗೊಳಗಾದ ಹರ್ದೀಪ್ ಸಿಂಗ್ ನಿಜ್ಜರ್ ಭಾರತದ ಪ್ರಕಾರ ಭಯೋತ್ಪಾದಕ; ಆದರೆ, ಅದನ್ನು ಒಪ್ಪಲು ಕೆನಡಾ ಸಿದ್ಧವಿಲ್ಲ. ಅದಕ್ಕೆ ಕಾರಣಗಳು ಹಲವು. ಮುಖ್ಯವಾದುದು, ಕೆನಡಾದಲ್ಲಿ ಸಿಖ್ಖರು ನಿರ್ಣಾಯಕ ರಾಜಕೀಯ ಶಕ್ತಿ ಎನ್ನುವುದು. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಗೆ ಮುಂದಿನ ಚುನಾವಣೆಯಲ್ಲಿ ಸಿಖ್ಖರ ಬೆಂಬಲ ಬೇಕು. ಭಾರತ–ಕೆನಡಾದ ಸಂಬಂಧ ಹಿಂದೆಂದೂ ಇಲ್ಲದ ರೀತಿಯಲ್ಲಿ ಬಿಗಡಾಯಿಸಲು ಇದೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ