ಭಾರತೀಯ ವಾಯುಪಡೆಯಲ್ಲಿ (ಐಎಎಫ್) ಅತ್ಯಾಧುನಿಕ ಎಂಐ–17ವಿ5 ಹೆಲಿಕಾಪ್ಟರ್ಗಳನ್ನು 2012ರಿಂದ ಬಳಸಲಾಗುತ್ತಿದೆ. ರಾತ್ರಿ ಸಂಚಾರಕ್ಕೆ ಸಹಕಾರಿಯಾಗಬಹುದಾದ 'ನೈಟ್ ವಿಷನ್' ವ್ಯವಸ್ಥೆ ಹಾಗೂ ವಾತಾವರಣದ ಕುರಿತು ಮಾಹಿತಿ ಪಡೆಯುವ ವೆದರ್ ರೇಡಾರ್ ಅನ್ನು ಈ ಹೆಲಿಕಾಪ್ಟರ್ ಒಳಗೊಂಡಿದೆ. ಈ ಹೆಲಿಕಾಪ್ಟರ್ ತನ್ನ ವರ್ಗದಲ್ಲೇ ಅತ್ಯಾಧುನಿಕವಾದ ಸುರಕ್ಷತಾ ಸವಲತ್ತುಗಳನ್ನು ಹೊಂದಿದೆ.

ರಷ್ಯನ್ ಹೆಲಿಕಾಪ್ಟರ್ ಕಂಪನಿಯ ಸಹಕಂಪನಿ ಕಜಾನ್ ಹೆಲಿಕಾಪ್ಟರ್ ಎಂಐ–17ವಿ5 ಹೆಲಿಕಾಪ್ಟರ್ ಅನ್ನು ಅಭಿವೃದ್ಧಿಪಡಿಸಿ, ತಯಾರಿಸುತ್ತಿದೆ. ಎಂಐ–17ವಿ5 ಹೆಲಿಕಾಪ್ಟರ್, 1970ರಲ್ಲಿ ಮಾರುಕಟ್ಟೆಗೆ ಬಂದ ಎಂಐ–/17 ಹೆಲಿಕಾಪ್ಟರ್ನ ಸುಧಾರಿತ ರೂಪ. ಈ ಸರಣಿಯ ಅತ್ಯಾಧುನಿಕ ಎಂಐ–17ವಿ5 ಹೆಲಿಕಾಪ್ಟರ್ ಅನ್ನು ಖರೀದಿಸಲು ಭಾರತವು 2008ರಲ್ಲಿ ರಷ್ಯಾ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಆರಂಭದಲ್ಲಿ 80 ಹೆಲಿಕಾಪ್ಟರ್ಗಳನ್ನಷ್ಟೇ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ನಂತರದ ದಿನಗಳಲ್ಲಿ ಅವುಗಳ ಸಂಖ್ಯೆಯನ್ನು 151ಕ್ಕೆ ಏರಿಸಲಾಗಿತ್ತು.2011ರ ಸೆಪ್ಟೆಂಬರ್ನಲ್ಲಿ ಮೊದಲ ಬ್ಯಾಚ್ನ ಹೆಲಿಕಾಪ್ಟರ್ಗಳು ದೇಶಕ್ಕೆ ಬಂದಿಳಿದವು. 2012ರಲ್ಲಿ ಇವನ್ನು ವಾಯುಪಡೆಯ ಬಳಕೆಗೆ ನಿಯೋಜನೆ ಮಾಡಲಾಯಿತು.

ಕಜಾನ್ ತಯಾರಿಕೆಯ ಎಂಐ–17ವಿ5 ಹೆಲಿಕಾಪ್ಟರ್ನಲ್ಲಿ ಇರುವ ಎಲ್ಲಾ ಸವಲತ್ತು ಮತ್ತು ಸಲಕರಣೆಗಳನ್ನು ಭಾರತಕ್ಕೆ ಪೂರೈಕೆಯಾದ ಹೆಲಿಕಾಪ್ಟರ್ಗಳಲ್ಲೂ ಉಳಿಸಿಕೊಳ್ಳಲಾಗಿತ್ತು.ಇವನ್ನು ಸಿಬ್ಬಂದಿ, ಸರಕು ಮತ್ತು ಸಾಮಗ್ರಿಗಳನ್ನು ರವಾನಿಸಲು ಉಪಯೋಗಿಸಲಾಗುತ್ತಿದೆ. ಇದರೊಂದಿಗೆ ನೆಲದ ಮೇಲಿನ ಗುರಿಯನ್ನು ಧ್ವಂಸ ಮಾಡಲು, ಗಾಯಾಳುಗಳನ್ನು ಸಾಗಿಸಲು, ಆಕಾಶ ಮಾರ್ಗದಿಂದಲೇ ಸೇನಾ ಸಿಬ್ಬಂದಿಯನ್ನು ಕೆಳಗಿಳಿಸಲು ಸೇರಿದಂತೆ ವಿಶೇಷ ಕಾರ್ಯಾಚರಣೆಗಳಲ್ಲಿ ಈ ಹೆಲಿಕಾಪ್ಟರ್ಗಳನ್ನು ಬಳಸಬಹುದಾಗಿದೆ.ತಾಂತ್ರಿಕ ವಿವರ

- ಈ ಹೆಲಿಕಾಪ್ಟರ್ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಹಾರಾಟ ನಡೆಸುತ್ತದೆ. ಇದರಲ್ಲಿ ಅತ್ಯಾಧುನಿಕ ಟಿವಿ3–117ವಿಎಂ ಅವಳಿ ಎಂಜಿನ್ ಅಳವಡಿಸಲಾಗಿದೆ

- 13,000 ಕೆ.ಜಿ. ನಿವ್ವಳ ತೂಕವನ್ನು ಹೊತ್ತು ಸಂಚರಿಸಬಲ್ಲ ಸಾಮರ್ಥ್ಯದ್ದಾಗಿದೆ

- ಶಸ್ತ್ರಸಜ್ಜಿತರಾದ 36 ಯೋಧರನ್ನು ಅಥವಾ 4,000 ಕೆ.ಜಿ.ಯಷ್ಟು ಭಾರವನ್ನು ಹೆಲಿಕಾಪ್ಟರ್ ಹೊತ್ತು ಒಯ್ಯುತ್ತದೆ

– ಪಿಕೆವಿ–8 ಆಟೊಪೈಲಟ್ ವ್ಯವಸ್ಥೆ, ಮಾರ್ಗಸೂಚಿ ವ್ಯವಸ್ಥೆ ಮತ್ತು ಎಲೆಕ್ಟ್ರಾನಿಕ್ ಡಿಸ್ಪ್ಲೇಗಾಗಿ ಕೆಎನ್ಇಐ–8 ಏವಿಯಾನಿಕ್ಸ್ ಸ್ಯೂಟ್ ಅಳವಡಿಸಲಾಗಿದೆ

- ಹೆಲಿಕಾಪ್ಟರ್ನ ಕ್ಯಾಬಿನ್ ಒಳಗೆ ಮತ್ತು ಕೆಳಗೆ ತೂಗಾಡುವ ರೀತಿಯಲ್ಲಿ ಸರಕು–ಸಾಮಗ್ರಿಗಳನ್ನು ಹೊತ್ತೊಯ್ಯುತ್ತದೆ. ಇದು, ಜಗತ್ತಿನ ಅತ್ಯಾಧುನಿಕ ಸರಕು ಸಾಗಣೆಯ ಹೆಲಿಕಾಪ್ಟರ್ ಆಗಿದೆ

- ಸೇನಾ ಪಡೆಗಳ ಸಿಬ್ಬಂದಿ ರವಾನೆಗೆ, ಶಸ್ತ್ರಾಸ್ತ್ರಗಳನ್ನು ಸಾಗಿಸಲು, ಅಗ್ನಿ ಅವಘಡಗಳ ತುರ್ತು ಸಂದರ್ಭಗಳಲ್ಲಿ ರಕ್ಷಣೆಗಾಗಿ, ಭದ್ರತೆ ಮತ್ತು ಗಸ್ತು ತಿರುಗಲು ಹಾಗೂ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಗಳಿಗಾಗಿ ಈ ಹೆಲಿಕಾಪ್ಟರ್ ಬಳಕೆ ಮಾಡಬಹುದಾಗಿದೆ

- ಹೆಲಿಕಾಪ್ಟರ್ನ ಕಾಕ್ಪಿಟ್ ಮತ್ತು ಪ್ರಮುಖ ಸಾಧನಗಳಿಗೆ ಶಸ್ತ್ರಾಸ್ತ್ರಗಳಿಂದ ರಕ್ಷಣೆಗೆ ಕವಚದ ಸುರಕ್ಷತೆ ಇದೆ. ಹೆಲಿಕಾಪ್ಟರ್ಗೆ ಮೆಷಿನ್ ಗನ್ ಅಳವಡಿಸಲೂ ಅವಕಾಶವಿದೆ

- ಸ್ಫೋಟದಿಂದ ರಕ್ಷಣೆ ಪಡೆಯಲು,ಇಂಧನ ಟ್ಯಾಂಕ್ಗಳಿಗೆ ಪಾಲಿಯುರೇಥಿನ್ ಫೋಮ್ನಿಂದ ಸೀಲ್ ಮಾಡಲಾಗಿದೆ

- ಹೆಲಿಕಾಪ್ಟರ್ನಲ್ಲಿ ಸ್ಟೋಮ್- ವಿ ಕ್ಷಿಪಣಿಗಳು, ಎಸ್–8 ರಾಕೆಟ್ಗಳು, ಒಂದು 23ಎಂಎಂ ಮೆಷಿನ್ ಗನ್, ಪಿಕೆಟಿ ಮೆಷಿನ್ ಗನ್ಗಳು, ಎಕೆಎಂ ಸಬ್–ಮೆಷಿನ್ ಗನ್ಗಳನ್ನು ಅಳವಡಿಸಬಹುದು. ಗನ್ಗಳನ್ನು ಗುರಿಯಿಡಲು ಎಂಟು ಕಡೆ ವ್ಯವಸ್ಥೆ ಇದೆ

ಹಲವು ಅಪಘಾತಗಳು

- 2012ರ ಆಗಸ್ಟ್ 30ರಂದು ಗುಜರಾತ್ನ ಜಾಮ್ನಗರ ವಾಯುನೆಲೆಯ ಸಮೀಪ ಎರಡು ಎಂಐ–17ವಿ5 ಹೆಲಿಕಾಪ್ಟರ್ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಕಾರಣ 9 ಸೈನಿಕರು ಮೃತಪಟ್ಟಿದ್ದರು

- 2013ರ ಜೂನ್ 15ರಂದು ಉತ್ತರಾಖಂಡದ ಕೇದಾರನಾಥ ಪ್ರದೇಶದಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದವರನ್ನು ಏರ್ಲಿಫ್ಟ್ ಮಾಡುತ್ತಿದ್ದಾಗ
ಎಂಐ–17ವಿ5 ಹೆಲಿಕಾಪ್ಟರ್ ಪತನವಾಗಿತ್ತು. 8 ಜನರು ಮೃತಪಟ್ಟಿದ್ದರು

- 2017ರ ಅಕ್ಟೋಬರ್ 7ರಂದು ಅರುಣಾಚಲ ಪ್ರದೇಶದ ತವಾಂಗ್ ಬಳಿ ಇದೇ ಮಾದರಿಯ ಹೆಲಿಕಾಪ್ಟರ್ ಪತನವಾಗಿತ್ತು. ಏಳು ಸೈನಿಕರು ಮೃತಪಟ್ಟಿದ್ದರು

- 2018ರ ಏಪ್ರಿಲ್ 3ರಂದು ಉತ್ತರಾಖಂಡದ ಕೇದಾರನಾಥದ ಬಳಿ ಇದೇ ಮಾದರಿಯ ಹೆಲಿಕಾಪ್ಟರ್ ಪತನವಾಗಿತ್ತು. ಆದರೆ ಅದರಲ್ಲಿದ್ದ ಆರೂ ಜನರಿಗೆ ಯಾವುದೇ ಗಾಯಗಳಾಗದೆ ಬಚಾವಾಗಿದ್ದರು

- 2021ರ ನವೆಂಬರ್ 8ರಂದು ಅರುಣಾಚಲ ಪ್ರದೇಶದಲ್ಲಿ ಎಂಐ–17ವಿ5 ಹೆಲಿಕಾಪ್ಟರ್ ಪತನವಾಗಿತ್ತು. ಅದರಲ್ಲಿದ್ದ ಐದು ಮಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದವು

- 2012 ರಿಂದ ಎಂಐ–17ವಿ5 ಹೆಲಿಕಾಪ್ಟರ್ ಭಾರತೀಯ ವಾಯುಪಡೆಯ ಸೇವೆಯಲ್ಲಿದೆ

- 4 ಹೆಚ್ಚುವರಿ ಆಂತರಿಕ ಇಂಧನ ಟ್ಯಾಂಕ್ಗಳ
ಅಳವಡಿಕೆಗೆ ಅವಕಾಶವಿದೆ

ಆಧಾರ: ಪಿಟಿಐ, ರಷ್ಯನ್ ಹೆಲಿಕಾಪ್ಟರ್ಸ್, ಕಜಾನ್ ಹೆಲಿಕಾಪ್ಟರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.