ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕು ಮೋರಟಗಿಯ ಶತಮಾನ ಕಂಡ ಶಾಲೆಯಲ್ಲಿ ಶೂನ್ಯ ದಾಖಲಾತಿ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಲಾಗಿದೆ
ಪಾಳುಬಿದ್ದ ಬೈಲಹೊಂಗಲ ಪಟ್ಟಣದ ಕನ್ನಡ ಗಂಡು ಮಕ್ಕಳ ಶಾಲೆ
ಸರ್ಕಾರಿ ಶಾಲೆಗಳಿಂದ ಹೊರಗುಳಿಯುವ ಮಕ್ಕಳು ಹಾಗೂ ಶೂನ್ಯ ದಾಖಲಾತಿ ಶಾಲೆಗಳಿರುವ ಪ್ರದೇಶದ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಲ್ಲ ಕಡೆಯೂ ಅಂತಹ ಸಮಸ್ಯೆ ಇಲ್ಲ. ಮಲೆನಾಡು ಸೇರಿದಂತೆ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಭಾಗಗಳಲ್ಲಿ ಇರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕ್ರಮ ಕೈಗೊಳ್ಳಲಾಗುವುದು. ಕೆಪಿಎಸ್ ಶಾಲೆಗಳ ಆರಂಭದ ನಂತರ ಆ ಭಾಗಗಳಲ್ಲಿ ಮಕ್ಕಳ ದಾಖಲಾತಿಯಲ್ಲಿ ಏರಿಕೆಯಾಗಿದೆ. ಹಾಗಾಗಿ, ಕೆಪಿಎಸ್ ಸಂಖ್ಯೆಇನ್ನಷ್ಟು ಹೆಚ್ಚಿಸಲಾಗುವುದು. ಶಾಲಾ ಸೌಕರ್ಯಗಳ ಹೆಚ್ಚಳ ಮಾಡಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ.
-ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ
ನಾವು ಕಲಿಯುತ್ತಿದ್ದಾಗ ಮಕ್ಕಳಿದ್ದರು. ಈಗ ಸ್ವಂತ ಕಟ್ಟಡವಿದ್ದರೂ ಪಾಳು ಬಿದ್ದಿದೆ. ಪಾಲಕರ ವಿಶ್ವಾಸ ಗಳಿಸುವಲ್ಲಿ ಶಿಕ್ಷಣ ಇಲಾಖೆ ವಿಫಲವಾಗಿದೆ.
-ಈರಪ್ಪ ಕಾಡೇಶನವರ, ಹಳೆಯ ವಿದ್ಯಾರ್ಥಿ, ಸರ್ಕಾರಿ ಪ್ರಾಥಮಿಕ ಶಾಲೆ ನಂ–2, ಬೈಲಹೊಂಗಲ
ನಾವು ಇದೇ ಸರ್ಕಾರಿ ಶಾಲೆಯಲ್ಲಿ ಕಲಿತೆವು. ಈಗ ಮಕ್ಕಳಿಗೆ ಶ್ರದ್ದೆಯಿಂದ ಕಲಿಸುವ ಪ್ರಯತ್ನ ಕಡಿಮೆಯಾಗಿದೆ. ಶಾಲೆ ಬಿಕೋ ಎನ್ನುತ್ತಿದೆ.
-ರಮೇಶ್, ಕಿರಿಸೊಡ್ಲು, ಹುಣಸೂರು ತಾಲ್ಲೂಕು
ಶಾಲೆಗಳನ್ನು ಮುಚ್ಚಬಾರದೆಂಬ ಉದ್ದೇಶದಿಂದ ಪಂಚಾಯಿತಿ ಮಟ್ಟದಲ್ಲಿ ಹೈಟೆಕ್ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇವೆ.