ಪಶ್ತೋ ಭಾಷೆಯಲ್ಲಿ ತಾಲಿಬಾನ್ ಅಂದರೆ ‘ವಿದ್ಯಾರ್ಥಿಗಳು’ ಎಂಬ ಅರ್ಥವಿದೆ. 1994ರಲ್ಲಿ ಕಂದಹಾರ್ ಬಳಿ ಈ ಸಂಘಟನೆ ಪ್ರವರ್ಧಮಾನಕ್ಕೆ ಬಂದಿತು.ಸೋವಿಯತ್ ಒಕ್ಕೂಟದ ವಾಪಸಾತಿ ಮತ್ತು ಆ ಬಳಿಕ ಸರ್ಕಾರದ ಪತನದ ನಂತರ, ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಅಂತರ್ಯುದ್ಧ ಶುರುಮಾಡಿತು.ಅಮೆರಿಕದ ಬೆಂಬಲದೊಂದಿಗೆ 1980ರಲ್ಲಿ ಸೋವಿಯತ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದ ‘ಮುಜಾಹಿದೀನ್’ ಹೋರಾಟಗಾರರನ್ನು ಈ ಸಂಘಟನೆ ಸೆಳೆಯಿತು.

ಇದನ್ನೂ ಓದಿ:ಆಳ-ಅಗಲ | ಅಫ್ಗಾನಿಸ್ತಾನ ಪತನ, ಭಯಭೀತ ಜನರು

ಎರಡು ವರ್ಷಗಳ ಅಂತರದಲ್ಲಿ, ದೇಶದ ಬಹುತೇಕ ಭಾಗಗಳ ಮೇಲೆ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸಿತು. ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನದೊಂದಿಗೆ 1996ರಲ್ಲಿ ‘ಇಸ್ಲಾಮಿಕ್ ಎಮಿರೇಟ್’ ಎಂಬುದಾಗಿ ಘೋಷಿಸಿಕೊಂಡಿತು. ತನ್ನದೇ ಕಾನೂನು ಜಾರಿಗೆ ತಂದಿತು.

ಇದನ್ನೂ ಓದಿ:ತಾಲಿಬಾನ್ ಬಿಗಿಹಿಡಿತ; ಅಧ್ಯಕ್ಷಅಶ್ರಫ್ ಘನಿ ಪಲಾಯನ

2001ರ ಸೆಪ್ಟೆಂಬರ್ 11ರಂದು ವರ್ಲ್ಡ್ ಟ್ರೇಡ್ ಸೆಂಟರ್‌ನ ಅವಳಿ ಕಟ್ಟಡಗಳನ್ನು ಅಲ್ ಖೈದಾ ಉಗ್ರರು ಧ್ವಂಸಗೊಳಿಸಿದ ಬಳಿಕ ಅಮೆರಿಕವು ಕಾಬೂಲ್‌ನಲ್ಲಿ ಭಾರಿ ವೈಮಾನಿಕ ದಾಳಿ ನಡೆಸಿತು. ಅಲ್ಲಿಂದ 20 ವರ್ಷಗಳ ಸೇನಾ ನಿಯೋಜನೆ ಶುರುವಾಯಿತು. ಈ ಅವಧಿ ಇದೇ ಆಗಸ್ಟ್ 31ರಂದು ಕೊನೆಯಾಗಲಿದ್ದು, ಅಮೆರಿಕವು ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ.

ಇದನ್ನೂ ಓದಿ:ತಾಲಿಬಾನ್ ಹೋರಾಟ ಯಾರಿಗಾಗಿ? ಅಫ್ಗಾನಿಸ್ತಾನ ಹಾಳಾದರೆ ಲಾಭ ಯಾರಿಗೆ?: ಅಶ್ರಫ್ ಘನಿ

ಸಂಘಟನೆಸಿದ್ದಾಂತ

ತಾಲಿಬಾನ್ ಷರಿಯಾ ಕಾನೂನಿನ ಕಠಿಣ ರೂಪವನ್ನು ಜಾರಿಗೊಳಿಸಿತ್ತು. ಮಹಿಳೆಯರು ಕೆಲಸ ಮಾಡುವುದನ್ನು ಅಥವಾ ಅಧ್ಯಯನ ಮಾಡುವುದನ್ನು ನಿರ್ಬಂಧಿಸಿತ್ತು. ಅವರು ಒಬ್ಬಂಟಿಯಾಗಿ ಮನೆಬಿಟ್ಟು ಹೊರಬರುವಂತಿರಲಿಲ್ಲ. ಸಾರ್ವಜನಿಕವಾಗಿ ಮರಣದಂಡನೆ ಮತ್ತು ಚಾಟಿ ಏಟಿನ ಶಿಕ್ಷೆ ನೀಡುವುದು ಸಾಮಾನ್ಯವಾಗಿತ್ತು.

ಇದನ್ನೂ ಓದಿ:ಉಗ್ರರನ್ನು ವಿವಾಹವಾಗುವಂತೆ ಅಫ್ಗನ್ ಸ್ತ್ರೀಯರಿಗೆ ತಾಲಿಬಾನಿಗಳ ಒತ್ತಾಯ: ವರದಿ

ಅಫ್ಗಾನಿಸ್ತಾನಕ್ಕೆ ‘ನೈಜ ಇಸ್ಲಾಮಿಕ್ ವ್ಯವಸ್ಥೆ’ಯನ್ನು ಕಲ್ಪಿಸಲು ಬಯಸಿದ್ದಾಗಿ ತಾಲಿಬಾನ್ ಈ ವರ್ಷಾರಂಭದಲ್ಲಿ ಹೇಳಿತ್ತು.

ಅಂತರರಾಷ್ಟ್ರೀಯ ಮಾನ್ಯತೆ ಇಲ್ಲ

ನೆರೆಯ ಪಾಕಿಸ್ತಾನ, ಚೀನಾ ಸೇರಿದಂತೆ ಮೂರ್ನಾಲ್ಕು ದೇಶಗಳು ಮಾತ್ರ ಈ ಹಿಂದೆ ಅಧಿಕಾರದಲ್ಲಿ ಇದ್ದ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.