ಯಾವುದೇ ಹಬ್ಬದ ವೇಳೆ ಊಟದ ತಟ್ಟೆಯಲ್ಲಿ ಇರಲೇಬೇಕಾದ ಸಿಹಿ ಖಾದ್ಯ ಕರ್ಜಿಕಾಯಿ (Karjikai). ಕಡಬು, ಕರಿಗಡಬು (Karigadubu) ಎಂದೂ ಕರೆಸಿಕೊಳ್ಳುವ ಈ ಸ್ವೀಟ್ ಎಲ್ಲರ ಅಚ್ಚುಮೆಚ್ಚು. ಹಬ್ಬ (Festival) ಮುಗಿದ ನಂತರವೂ ವಾರದವರೆಗೆ ಇಟ್ಟು ತಿನ್ನಬಹುದಾದ ಕರ್ಜಿಕಾಯಿ ಸಿದ್ಧ ಮಾಡುವ ಕೆಲಸ ಅಮ್ಮಂದಿರಿಗೆ ಇಷ್ಟ. ಅದೇ ಕರ್ಜಿಕಾಯಿಯೊಳಗೆ ತುಂಬಿಸುವ ‘ಹೂರಣ’ ಮಕ್ಕಳಿಗೆ ಹೆಚ್ಚು ಇಷ್ಟ! ಬೇಗ ಮತ್ತು ಸುಲಭವಾಗಿ ಕರ್ಜಿಕಾಯಿ ಹೇಗೆ ಮಾಡಬೇಕು ಎಂಬ ಟಿಪ್ಸ್ ಕೊಟ್ಟಿದ್ದಾರೆ ಸಿಹಿಕಹಿ ಚಂದ್ರು (Sihikahi Chandru). ಸಾಮಾನ್ಯ ಕರ್ಜಿಕಾಯಿಗೆ ಒಂದು ವಿಶೇಷ ‘ಟ್ವಿಸ್ಟ್’ ಅವರು ಕೊಟ್ಟು ತಯಾರಿಸಿರುವ ಈ ಸಿಹಿ ಖಾದ್ಯ ನಿಮ್ಮ ಮನಸನ್ನು ಗೆಲ್ಲಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.