ಇಂದು ವಿಶ್ವ ಆಹಾರ ದಿನ. ಆಹಾರ ಎಲ್ಲರಿಗೂ ಸದಾಕಾಲ ಸಿಗಬೇಕು. ಯಾರಿಗೂ ದುರ್ಲಭವಾಗಿರಬಾರದು. ಸಿಗುವ ಆಹಾರ ಪೌಷ್ಠಿಕವಾಗಿರಬೇಕು ಎಂಬ ಆಶಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.

1945ರಲ್ಲಿ ವಿಶ್ವಸಂಸ್ಥೆ ಸ್ಥಾಪಿಸಿದ ಆಹಾರ ಮತ್ತು ಕೃಷಿ ಸಂಘಟನೆ ನೆನಪಿಗಾಗಿ, ಆಹಾರ ಭದ್ರತೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನ ಆಚರಿಸಲಾಗುತ್ತದೆ.

1979ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಆಹಾರ ದಿನವನ್ನು ಆಚರಿಸಲಾಯಿತು. ಪ್ರಸ್ತುತ 150ಕ್ಕೂ ಹೆಚ್ಚು ರಾಷ್ಟ್ರಗಳು ಆಚರಿಸುತ್ತಿವೆ.1981ರಿಂದ ಪ್ರತಿ ವರ್ಷ ಒಂದು ‘ವಿಷಯವಸ್ತು’ (ಥೀಮ್) ಮೂಲಕ ಆಹಾರ ದಿನವನ್ನು ಆಚರಿಸುತ್ತಾ ಜಾಗೃತಿ ಮೂಡಿಸಲಾಗುತ್ತಿದೆ.

ವಿಶ್ವದಾದ್ಯಂತ ಆಹಾರ ಭದ್ರತೆಗೆ ಕ್ರಮ ಕೈಗೊಳ್ಳುವುದು, ಈ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ವಿಶ್ವದಾದ್ಯಂತ ಯಾರೊಬ್ಬರೂ ಹಸಿವಿನಿಂದ ಮತ್ತು ಪೌಷ್ಟಿಕ ಆಹಾರದ ಕೊರತೆಯಿಂದ ಬಳಲಬಾರದು ಎಂದು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶ.

ಆಧುನಿಕ ತಂತ್ರಜ್ಞಾನದಿಂದಾಗಿ ಆಹಾರ ಪದಾರ್ಥಗಳ ಶೇಖರಣೆ ಸಾಧ್ಯವಾಗುತ್ತಿದೆ. ಆದರೆ ಅತಿವೃಷ್ಟಿ, ಅನಾವೃಷ್ಟಿಯಂತಹ ಸಮಸ್ಯೆಗಳ ಜತೆಗೆ, ಆಹಾರ ಪದಾರ್ಥಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳದೇ ಇರುವುದರಿಂದ ಆಹಾರ ಪದಾರ್ಥಗಳು ಪೋಲಾಗುತ್ತಿರುವುದು ಆಹಾರ ಭದ್ರತೆಯ ಗಂಭೀರ ಸಮಸ್ಯೆ ಎಂದು ವಿಶ್ವಸಂಸ್ಥೆ ಹೇಳಿದೆ.

ಶ್ರೀಮಂತ ರಾಷ್ಟ್ರಗಳಷ್ಟೇ ಅಲ್ಲ, ಬಡರಾಷ್ಟ್ರಗಳಲ್ಲೂ ಆಹಾರ ಪೋಲಾಗುತ್ತಿದೆ ಎಂದು ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ) ಹೇಳುತ್ತಿದೆ. ವಿಶ್ವದಾದ್ಯಂತ ಪ್ರತಿ ವರ್ಷ ಸುಮಾರು 130 ಕೋಟಿ ಟನ್ ಆಹಾರ ಪೋಲಾಗುತ್ತಿದೆ.

ಆಹಾರ ವ್ಯರ್ಥವಾದಂತೆ ಎಚ್ಚರಿಕೆ ವಹಿಸುತ್ತಾ, ಮುಂದಿನ ಪೀಳಿಗೆಗೆ ಉತ್ತಮ ಆಹಾರ ದೊರೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.