ವಿವಿಧ ಸಿಹಿ ತಿನಿಸುಗಳನ್ನು ಮಾಡುವ ವಿಧಾನ ಇಲ್ಲಿದೆ

ಗೋಧಿ ನುಚ್ಚಿನ ಲಡ್ಡು

ಬೇಕಾಗುವ ಸಾಮಗ್ರಿಗಳು: ಗೋಧಿ ನುಚ್ಚು 1 ಕಪ್, ಸಕ್ಕರೆ 2 ಕಪ್, ಏಲಕ್ಕಿ ಪುಡಿ 1 ಚಮಚ, ತುಪ್ಪ 4 ಚಮಚ.
ಮಾಡುವ ವಿಧಾನ: ಗೋಧಿ ನುಚ್ಚನ್ನು ಚೆನ್ನಾಗಿ ತೊಳೆದು ಎರಡು ಕಪ್ ನೀರು ಸೇರಿಸಿ ಬೇಯಿಸಿಕೊಳ್ಳಿ. ದಪ್ಪ ತಳದ ಬಾಣಲೆಯಲ್ಲಿ ಸಕ್ಕರೆ ಕರಗಿಸಿ, ಬೇಯಿಸಿದ ಗೋಧಿ ನುಚ್ಚು, ಏಲಕ್ಕಿ ಪುಡಿ ಸೇರಿಸಿ ಸಣ್ಣ ಉರಿಯಲ್ಲಿ ಮಗುಚುತ್ತಿರಿ. ಮಿಶ್ರಣ ಚೆನ್ನಾಗಿ ಬೆರೆತ ಮೇಲೆ ತುಪ್ಪ ಸೇರಿಸಿ ಕೈಯಾಡಿ ಉರಿ ಆರಿಸಿ. ಸ್ವಲ್ಪ ತಣಿದ ನಂತರ ಅಂಗೈಯಲ್ಲಿ ತುಪ್ಪ ಸವರಿಕೊಂಡು ಸಣ್ಣ ಸಣ್ಣ ಉಂಡೆಗಳನ್ನು ಕಟ್ಟಿ.

ಮಿಲ್ಕ್ ಬರ್ಫಿ

ಬೇಕಾಗುವ ಸಾಮಗ್ರಿಗಳು: ಮಿಲ್ಕ್ ಪೌಡರ್ 1 ಕಪ್ಮೈದಾ 1/2 ಕಪ್ ಕಂದು ಸಕ್ಕರೆ ಪುಡಿ 1 1/2 ಕಪ್ ಹಾಲು 1/4 ಕಪ್ ಗೋಡಂಬಿ, ಬಾದಾಮಿ ತುಂಡುಗಳು 15-20 ತುಪ್ಪ 1/2 ಕಪ್.

ಮಾಡುವ ವಿಧಾನ: ಮೊದಲಿಗೆ ಸ್ವಲ್ಪ ತುಪ್ಪ ಹಾಕಿ ಮೈದಾ ಹಿಟ್ಟನ್ನು ಹುರಿದುಕೊಳ್ಳಿ. ಇದಕ್ಕೆ ಉಳಿದೆಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಮಿಶ್ರಣವನ್ನು ಸೇರಿಸಿ ಕೈಯಾಡುತ್ತಿರಿ. ಮಿಶ್ರಣ ಬೆಂದು ತಳ ಬಿಡುವಾಗ ಜಿಡ್ಡು ಸವರಿದ ತಟ್ಟೆಗೆ ಸುರುವಿ ಸ್ವಲ್ಪ ತಣಿದ ನಂತರ ಬೇಕಾದ ಆಕಾರಕ್ಕೆ ಕತ್ತರಿ

ಬ್ರೆಡ್ ಪೇಡ

ಬೇಕಾಗುವ ಸಾಮಗ್ರಿಗಳು: ಬ್ರೆಡ್ ಪುಡಿ 1 ಕಪ್ ಮಿಲ್ಕ್ ಪೌಡರ್ 2 ಚಮಚ ಕಂದು ಸಕ್ಕರೆ 1/2 ಕಪ್ ಗೋಡಂಬಿ ತುಂಡುಗಳು 8-10 ತುಪ್ಪ 2 ಚಮಚ.

ಮಾಡುವ ವಿಧಾನ: ಬ್ರೆಡ್ ಪುಡಿಯನ್ನು ತುಪ್ಪದಲ್ಲಿ ಹುರಿದುಕೊಂಡು ಹಾಲಿನ ಪುಡಿ ಮಿಶ್ರಣ ಮಾಡಿಟ್ಟುಕೊಳ್ಳಿ. ಕಂದು ಸಕ್ಕರೆ ಕರಗಿಸಿ ಬ್ರೆಡ್ ಹಾಲಿನಪುಡಿ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಗುಚಿ. ಮಿಶ್ರಣ ಪಾತ್ರೆ ಬಿಟ್ಟು ಬರುವಾಗ ಜಿಡ್ಡು ಸವರಿದ ತಟ್ಟೆಗೆ ವರ್ಗಾಯಿಸಿ ತಣಿದ ಮೇಲೆ ಪೇಡೆ ಆಕಾರಕ್ಕೆ ಕತ್ತರಿಸಿ ಗೋಡಂಬಿಯಿಂದ ಅಲಂಕರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.