‘ಹಲೋ... ಟೀವಿ ನ್ಯೂಸ್ ಚಾನೆಲ್ನೋರಾ? ನಾನು ಮಳೆ ಮಾತಾಡೋದು’.

‘ಏನು? ಮಳೇನಾ? ಹಂಗೂ ಹೆಸರಿಟ್ಕಂತಾರ?’

‘ಯಾಕೆ... ನೀವು ಸೂರ್ಯ, ಚಂದ್ರ, ಆಕಾಶ ಅಂತ ಹೆಸರಿಟ್ಕಳಲ್ವಾ? ಹಂಗೇ ನಾನು ಮಳೆ’.

‘ಸರಿ, ಏನು ಫೋನ್ ಮಾಡಿದ್ದು?’

‘ನಿಮ್ ನ್ಯೂಸ್ ಚಾನೆಲ್ನಲ್ಲಿ ನನ್ನ ಮಾನ ಯಾಕೆ ಕಳೀತಿದೀರಿ?’

‘ನಾವೆಲ್ಲಿ ನಿಮ್ ಮಾನ ಕಳೆದಿದೀವಿ?’

‘ಮತ್ತೇನು? ಮಳೆ ಅವಾಂತರ, ಜನರ ಬದುಕು ಕಸಿದ ಮಳೆ, ಜೀವ ತೆಗೆದ ಮಳೆ ಅಂತೆಲ್ಲ ತೋರಿಸ್ತಿದೀರಿ. ಅಲ್ಲರೀ, ಚರಂಡಿ ಹೂಳು ತೆಗೆಯಲ್ಲ, ರಾಜಕಾಲುವೆ ಮೇಲೆ ಮನೆ ಕಟ್ಕಂಡಿದೀರಿ, ಮತ್ತೆ ನಾನೆಲ್ಲಿ ಹರೀಬೇಕು? ರಸ್ತೆ ಮೇಲೆ ತಾನೆ? ಕಳಪೆ ಕಾಮಗಾರಿ ಮಾಡಿದ್ದಕ್ಕೆ ರಸ್ತೆಗುಂಡಿ ಬೀಳುತ್ತೆ. ರಸ್ತೆ ಮೇಲೆ ವ್ಹೀಲಿಂಗ್, ರೀಲಿಂಗ್ ಮಾಡೋ ನಿಮ್ ಮಕ್ಕಳಿಗೆ ಚರಂಡೀಲಿ ತೇಲಿಂಗ್ ಮಾಡೋದು ಕಲ್ಸಿ, ಇಲ್ಲಿ ಮುಳುಗಿದ್ರೆ ಇನ್ನೆಲ್ಲಾದ್ರು ಏಳ್ತಾರೆ’.

‘ಅಲ್ಲ, ನೀವೇನ್ ಹೇಳ್ತಿದೀರಿ?’

‘ಇರೋದನ್ನೇ ಹೇಳ್ತಿರೋದು. ತಗ್ಗು ಪ್ರದೇಶಕ್ಕೆ ನೀರು ಅಂತಿದ್ರಲ್ಲ, ಈ ಸಲ ಐದನೇ ಫ್ಲೋರ್ಗೂ ನುಗ್ಗಿದೀನಿ. ನನ್ನ ದಾರಿ ನನಗೆ ಬಿಡದಿದ್ರೆ ನಿಮ್ ದಾರಿಗೇ ನಾನು ನುಗ್ಗೋದು’.

‘ಅಲ್ಲ, ಸ್ವಲ್ಪ ಸಮಾಧಾನ...’

‘ಏನ್ರೀ ಸಮಾಧಾನ? ನೀವು ಕರೆದಾಗ ಬರ್ಬೇಕು, ಬೇಡ ಅಂದಾಗ ಆಕಾಶದಲ್ಲೇ ನಿಲ್ಬೇಕಾ? ಮಳೆ ಬರದಿದ್ರೆ ಬರ ಅಂತೀರಿ, ಬಂದ್ರೆ ಅವಾಂತರ ಅಂತೀರಿ’.

‘ಹಲೋ... ಹಲೋ...’

‘ಯಾಕ್ರೀ... ಸಿಗ್ನಲ್ ಸಿಗ್ತಿಲ್ವಾ? ಅಥ್ವ ನಾಟಕನಾ?’

‘ಅಯ್ಯೋ ಸಿಗ್ನಲ್ ಸಿಗೋದಿರ್ಲಿ, ಟವರ್ರೇ ಕಳ್ತನ ಆಗೋಗೇತಂತೆ. ಇರ್ರಿ, ಬ್ರೇಕಿಂಗ್ ನ್ಯೂಸ್ ಕೊಡ್ಬೇಕು’.

‘ಆಹಾ, ಎಂಥಾ ಸುಳ್ಳು. ಮೊಬೈಲ್ ಕಳ್ತನ ಆಗೋದು ಕೇಳಿದ್ದೆ, ಟವರ್ರೇ ಕಳ್ತನಾನ?’

‘ಅಯ್ಯೋ ದೇವ್ರಾಣೆ ಕಣ್ರಿ, ಶಿವಮೊಗ್ಗದಲ್ಲಿ ಕದ್ದಾರಂತೆ, ಇಡ್ರೀ ಫೋನು’.

ಮಳೆ ಮಾತಾಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.