ರಾಮನಗರ: ನಾನು ಮುಖ್ಯಮಂತ್ರಿಯಾಗಿದ್ದಾಗ ಏತ ನೀರಾವರಿ ಮೂಲಕ ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸಲು ₹150 ಕೋಟಿ ಬಿಡುಗಡೆ ಮಾಡಿದೆ. ಅದರ ಫಲವಾಗಿ ಇಲ್ಲಿನ ಕೆರೆಗಳು ತುಂಬಿವೆ. ಇದಕ್ಕೆ ಕಾರಣವಾದ ನಾನು ಭಗೀರಥನೇ ಹೊರತು ಯೋಗೇಶ್ವರ್ ಅಲ್ಲ ಎಂದು ಬಿಜೆಪಿಯ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು.

ನಾನು ಮಾಡಿದ ಕೆಲಸದ ಕ್ರೆಡಿಟ್ ನನಗೇ ಬರಬೇಕು. ಆದರೆ ಯೋಗೇಶ್ವರ್ ಅದರ ಕ್ರೆಡಿಟ್ ತೆಗೆದುಕೊಂಡು ಭಗೀರಥ ಎಂದು ಹೇಳಿಕೊಂಡು ಚುನಾವಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ಹಾಗೆ ಹೇಳಿಕೊಳ್ಳದೆ ಚುನಾವಣೆ ಎದುರಿಸಲಿ ಎಂದು ನಗರದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಈ ಉಪ ಚುನಾವಣೆ ನಮಗೆ ದೊಡ್ಡ ಸವಾಲು. ಇಲ್ಲಿ ವ್ಯಕ್ತಿಯೇ ಪಕ್ಷ ಎಂದು ಬಿಂಬಿಸಿಕೊಂಡು ಪ್ರತಿ ಸಲ ಸ್ಚಾರ್ಥಕ್ಕಾಗಿ ಪಕ್ಷಾಂತರ ಮಾಡಿದ ಯೋಗೇಶ್ವರ್ ರಾಜಕಾರಣದಲ್ಲಿ ಇರಬೇಕೊ ಬೇಡವೊ ಎಂದು ನಿರ್ಧರಿಸುವ ಚುನಾವಣೆ ಇದಾಗಿದೆ ಎಂದರು.

ಆರನೇ ಸಲ ಪಕ್ಷಾಂತರ ಮಾಡಿ ಈಗ ಕಾಂಗ್ರೆಸ್ ಸೇರಿರುವ ಯೋಗೇಶ್ವರ್ ನಡೆ, ರಾಜಕೀಯ ಪಕ್ಷಗಳು ಒಬ್ಬ ವ್ಯಕ್ತಿಯನ್ನು ಎಷ್ಟರಮಟ್ಟಿಗೆ ಇಡಬೇಕು ಎಂಬುದು ದೊಡ್ಡ ಪಾಠ. ನಾವು ಈ ಭಾಗದಲ್ಲಿ ಅವರ ಮೇಲೆ ಅವಲಂಬಿನೆ ಆಗಿದ್ದು ನಿಜ. ಈಗ ಅವರು ಮಾಡಿರುವ ದ್ರೋಹಕ್ಕೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಹೇಳಿದರು.
.ಚನ್ನಪಟ್ಟಣ ಉಪಚುನಾವಣೆ: JDS ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ರೋಡ್ ಶೋ.ಚನ್ನಪಟ್ಟಣ ಉಪಚುನಾವಣೆ | ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ: ದೇವೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.