ಆಡು ಮುಟ್ಟದ ಸೊಪ್ಪಿಲ್ಲಾ – ಅನ್ನುವುದು ಗಾದೆಮಾತು. ಆದರೆ ಆಡಿನ ಮಾಂಸವನ್ನು ಎಲ್ಲರೂ ತಿನ್ನುವುದಿಲ್ಲ. ಹಾಸನ ಹಾಗೂ ಮಂಡ್ಯದ ಕಡೆಯ ಮಂದಿ ಆಡಿನ ಮಾಂಸದ ಖಾದ್ಯಗಳನ್ನು ತಯಾರಿಸುವುದರಲ್ಲಿ ನಿಸ್ಸೀಮರು. ಕೋಳಿಮಾಂಸಕ್ಕಿಂತ ಆಡಿನ ಮಾಂಸ ತಂಪು. ಚಿಕನ್ನಿಂದ ಹೇಗೆ ರುಚಿಯಾದ ಆಹಾರಗಳನ್ನು ತಯಾರಿಸಬಹುದೋ ಹಾಗೆಯೇ ಆಡಿನ ಮಾಂಸದಿಂದಲೂ ಬ್ರೈನ್ ಮಸಾಲೆ, ಕೈಮಾ ಸಾರು, ಬೋಟಿ ಮೊಟ್ಟೆ ಫ್ರೈ ತಯಾರಿಸಬಹುದು ಎನ್ನುತ್ತಾರೆ, ಎಂ.ಎಸ್. ಧರ್ಮೇಂದ್ರ.

ಬ್ರೈನ್ ಮಸಾಲೆ

ಬೇಕಾಗುವ ಸಾಮಗ್ರಿಗಳು: ಮೇಕೆ ಬ್ರೈನ್ – 2, ಈರುಳ್ಳಿ – 1, ಟೊಮೆಟೊ – 1, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಕರಿಬೇವು – 1ಕಡ್ಡಿ, ಕೊತ್ತಂಬರಿಸೊಪ್ಪು– ಸ್ವಲ್ಪ, ಪುದೀನ –ಸ್ವಲ್ಪ, ಖಾರದಪುಡಿ – 1ಚಮಚ, ದನಿಯಾಪುಡಿ – 1ಚಮಚ, ಗರಂಮಸಾಲೆ –ಸ್ವಲ್ಪ, ತೆಂಗಿನಕಾಯಿ – ಸ್ವಲ್ಪ, ಎಣ್ಣೆ, ಸಾಸಿವೆ, ಉಪ್ಪು ರುಚಿಗೆ – ತಕ್ಕಷ್ಟು.

ತಯಾರಿಸುವ ವಿಧಾನ: ತೊಳೆದ ಮೇಕೆಯ ಬ್ರೈನ್ ಅನ್ನು ಬಿಸಿ ನೀರಿಗೆ ಹಾಕಿ ತೆಗೆದಿಟ್ಟುಕೊಳ್ಳಿ. ಈರುಳ್ಳಿ, ಕೊತ್ತಂಬರಿ, ಪುದೀನ ಕತ್ತರಿಸಿಟ್ಟುಕೊಳ್ಳಿ. ಟೊಮೆಟೊವನ್ನು ರುಬ್ಬಿ ರಸವನ್ನು ಸೋಸಿಟ್ಟುಕೊಳ್ಳಿ (ಟೊಮೆಟೊ ಪ್ಯೂರಿ), ತೆಂಗಿನಕಾಯಿಯನ್ನು ರುಬ್ಬಿಟ್ಟುಕೊಳ್ಳಿ. ತೆರೆದ ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು, ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೂ ಫ್ರೈ ಮಾಡಿ. ನಂತರ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಟೊಮೆಟೊರಸ, ಪುದೀನ, ರುಬ್ಬಿದ ತೆಂಗಿನಕಾಯಿ, ಉಪ್ಪು, ಖಾರದ ಪುಡಿ, ದನಿಯಾಪುಡಿ, ಗರಂಮಸಾಲೆ ಹಾಕಿ ಚೆನ್ನಾಗಿ ಫ್ರೈ ಮಾಡಿದ ಮೇಲೆ ನೀರು ಹಾಕಿ ಮುಚ್ಚಳ ಮುಚ್ಚಿ, ಚೆನ್ನಾಗಿ ಬೇಯಿಸಿ. ಬೆಂದ ನಂತರ ಬ್ರೈನ್ ಅನ್ನು ಕತ್ತರಿಸಿ ಹಾಕಿ ಸ್ವಲ್ಪ ಬೇಯಿಸಿ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಉದುರಿಸಿ ಕೆಳಗಿಳಿಸಿ.

ಮೇಕೆ ಕೈಮಾ ಸಾರು

ಬೇಕಾಗುವ ಸಾಮಗ್ರಿಗಳು: ಮೇಕೆ ಕೈಮಾ ಮಾಂಸ – 4/3ಕೆ.ಜಿ., ಶುಂಠಿ – 2ಇಂಚು ಉದ್ದದ್ದು, ಬೆಳ್ಳುಳ್ಳಿ – 2ಉಂಡೆ, ಕೊತ್ತಂಬರಿ – ಸ್ವಲ್ಪ, ಪುದೀನ – ಸ್ವಲ್ಪ, ಹುರಿಗಡಲೆ – 2ಚಮಚ, ದನಿಯಾಪುಡಿ – 2ಚಮಚ, ಖಾರದ ಪುಡಿ – 2ಚಮಚ, ಅರಿಸಿನಪುಡಿ – ಸ್ವಲ್ಪ, ಗರಂಮಸಾಲೆ – 1ಚಮಚ, ಈರುಳ್ಳಿ – 3, ಟೊಮೆಟೊ – 2, ಕಾಯಿ – ಅರ್ಧ ಹೋಳು, ಸಾಸಿವೆ, ಎಣ್ಣೆ, ತುಪ್ಪ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಈರುಳ್ಳಿ, ಕೊತ್ತಂಬರಿ, ತೆಂಗಿನಕಾಯಿ, ಪುದೀನ, ಅರಿಸಿನಪುಡಿ, ಹುರಿಗಡಲೆ, ಶುಂಠಿ, ಬೆಳ್ಳುಳ್ಳಿ, ಗರಂಮಸಾಲೆ, ದನಿಯಾಪುಡಿ, ಖಾರದ ಪುಡಿ, ಅರಿಸಿನಪುಡಿ, ಸ್ವಲ್ಪ ಉಪ್ಪು ಹಾಕಿ ನೀರು ಹಾಕದೆ ರುಬ್ಬಿಟ್ಟುಕೊಳ್ಳಿ.
ರುಬ್ಬಿದ ಮಿಶ್ರಣದಲ್ಲಿ ಕಾಲು ಭಾಗವನ್ನು ತೆಗೆದುಕೊಂಡು ಅದಕ್ಕೆ ಮೇಕೆ ಕೈಮಾ ಮಾಂಸ ಹಾಕಿ, ನೀರು ಬೆರಸದೆ ಮಾಂಸ ಮತ್ತು ಖಾರ ಬೆರೆಯುವಂತೆ ಮಿಕ್ಸಿಯಲ್ಲಿ ಮೂರು ಸುತ್ತು ರುಬ್ಬಿಕೊಂಡು ನಂತರ ಸಣ್ಣ ಉಂಡೆಗಳಾಗಿ ಮಾಡಿಟ್ಟುಕೊಳ್ಳಿ.
ಉಳಿದ ಮುಕ್ಕಾಲು ಭಾಗ ರುಬ್ಬಿದ ಮಿಶ್ರಣಕ್ಕೆ ಟೊಮೆಟೊ ಮತ್ತು ನೀರು ಹಾಕಿ ಸಣ್ಣಗೆ ರುಬ್ಬಿಕೊಳ್ಳಿ. ಫ್ರೈ ಪ್ಯಾನ್ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ರುಬ್ಬಿದ ಕಾರ ಮಿಶ್ರಣ ಮತ್ತು ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಕಾರ ಕುದಿಯಲು ಬಿಡಿ. ನಂತರ ಉಂಡೆಗಳನ್ನು ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ.

ಬೋಟಿ ಮೊಟ್ಟೆ ಫ್ರೈ
ಬೇಕಾಗುವ ಸಾಮಗ್ರಿಗಳು: ಬೋಟಿ – 1/2ಕೆ.ಜಿ. (ಜಠರ, ದೊಡ್ಡಕರುಳು, ಸಣ್ಣಕರುಳು ಮತ್ತು ಶ್ವಾಸಕೋಶ – ಎಲ್ಲವೂ ಸೇರಿ), ಮೊಟ್ಟೆ – 3, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1ಚಮಚ, ಹಸಿಮೆಣಸಿನಕಾಯಿ – 4, ಕೊತ್ತಂಬರಿ – ಸ್ವಲ್ಪ, ಪುದೀನ – ಸ್ವಲ್ಪ, ಕರಿಬೇವು – 1ಕಡ್ಡಿ, ದನಿಯಾಪುಡಿ – 1ಚಮಚ, ಖಾರದ ಪುಡಿ – 1ಚಮಚ, ಅರಿಸಿನಪುಡಿ – ಸ್ವಲ್ಪ, ಗರಂಮಸಾಲೆ – 1ಚಮಚ, ಕಾಳುಮೆಣಸಿನಪುಡಿ – ಸ್ವಲ್ಪ, ಜೀರಿಗೆಪುಡಿ – ಸ್ವಲ್ಪ. ಸೋಯಾ ಸಾಸ್ – ಸ್ವಲ್ಪ, ವಿನೆಗರ್ – ಸ್ವಲ್ಪ, ಈರುಳ್ಳಿ – ಎರಡು, ಟೊಮೆಟೊ – 1, ತೆಂಗಿನಕಾಯಿ – ಅರ್ಧ ಹೋಳು, ಸಾಸಿವೆ, ನಿಂಬೆಹಣ್ಣು – 1, ಎಣ್ಣೆ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಬೋಟಿ ಅಂದರೆ ಜಠರ, ದೊಡ್ಡಕರುಳು, ಸಣ್ಣಕರುಳುಗಳ ಒಳಭಾಗ ಹೊರಬರುವಂತೆ ಮಾಡಿ ನೀರು ಹಾಕಿ ಚೆನ್ನಾಗಿ ಕುದಿಸಿ, ಆರಿದ ನಂತರ ಸಣ್ಣಗೆ ಕತ್ತರಿಸಿ ತೊಳೆಯಿರಿ. ಇದಕ್ಕೆ ಶ್ವಾಸಕೋಶವನ್ನು ಕತ್ತರಿಸಿ ಹಾಕಿ, ತೆರೆದ ಪಾತ್ರೆಯಲ್ಲಿ ಕುದಿಸಿ. ನೊರೆಯ ರೀತಿ ತೇಲುವುದನ್ನು ಚೆಲ್ಲಿ. ಮತ್ತೆ ತೊಳೆದು, ಒಂದೆರೆಡು ಬಾರಿ ವಾಸನೆ ಹೋಗುವ ತನಕ ಕುದಿಸಿ ನೀರನ್ನು ಚೆಲ್ಲಿ. (ಚೆನ್ನಾಗಿ ತೊಳೆಯುವುದು ತುಂಬ ಮುಖ್ಯ, ತೊಳೆಯದಿದ್ದರೆ ಗ್ರೇವಿ ತಯಾರಿಸಿದ ನಂತರ ಕೆಟ್ಟ ವಾಸನೆ ಬರುತ್ತದೆ.) ಚೆನ್ನಾಗಿ ತೊಳೆದ ಬೋಟಿಗೆ ಅರಿಸಿನಪುಡಿ, ಉಪ್ಪು, ಖಾರದಪುಡಿ ಹಾಕಿ ಸ್ವಲ್ಪ ನೀರು ಹಾಕಿ ಕುಕ್ಕರ್ನಲ್ಲಿ ಚೆನ್ನಾಗಿ ಬೇಯಿಸಿಟ್ಟುಕೊಳ್ಳಿ. ಈರುಳ್ಳಿ, ಕೊತ್ತಂಬರಿ, ಹಸಿಮೆಣಸಿನಕಾಯಿ, ಪುದೀನ ಕತ್ತರಿಸಿಟ್ಟುಕೊಳ್ಳಿ. ಫ್ರೈ ಪ್ಯಾನ್ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಈರುಳ್ಳಿ ಹಾಕಿ ಕಂದುಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಉಪ್ಪು, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಪುದೀನ, ಕಾಳುಮೆಣಸಿನಪುಡಿ ಹಾಕಿ. ಸ್ವಲ್ಪ ಫ್ರೈ ಮಾಡಿದ ಮೇಲೆ ಬೆಂದ ಬೋಟಿ (ಬೆಂದ ನೀರನ್ನು ಹಾಕಬೇಡಿ), ಜೀರಿಗೆಪುಡಿ, ದನಿಯಾಪುಡಿ, ಖಾರದ ಪುಡಿ, ಗರಂಮಸಾಲೆ, ಸೋಯಾ ಸಾಸ್, ವಿನಿಗರ್ ಹಾಕಿ ತಿರುಗಿಸಿ ಮುಚ್ಚಳ ಮುಚ್ಚಿ; ಚೆನ್ನಾಗಿ ಬೇಯಿಸಿ. ನಂತರ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಆಗುವಂತೆ ತಿರುಗಿಸಿ. ಮೊಟ್ಟೆ ಬೆಂದ ನಂತರ ಸ್ವಲ್ಪ ನಿಂಬೆರಸ ಹಾಕಿ ಕತ್ತರಿಸಿದ ಕೊತ್ತಂಬರಿ ಉದುರಿಸಿ. ಮುಚ್ಚಳ ಮುಚ್ಚಿ ಸ್ವಲ್ಪ ಬೇಯಿಸಿ ಕೆಳಗಿಳಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.