ಶೇಂಗಾ ಉಂಡೆ

ಬೇಕಾಗುವ ಸಾಮಗ್ರಿಗಳು: ಶೇಂಗಾ, ಒಣಕೊಬ್ಬರಿ, ಬಿಳಿ ಎಳ್ಳು, ಒಣಶುಂಠಿ, ಎಲಕ್ಕಿ, ಬೆಲ್ಲ, ಪುಟಾಣಿ ಹಿಟ್ಟು.

ಮಾಡುವ ವಿಧಾನ: ಮೊದಲು ಕಾದ ಬಾಣಲೆಯಲ್ಲಿ ನಮಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಶೇಂಗಾ ಕಾಳನ್ನು ಹುರಿದುಕೊಳ್ಳಬೇಕು. ಅರ್ಧ ಕಪ್ಪನಷ್ಟು ಬಿಳಿ ಎಳ್ಳು ಹುರಿದುಕೊಳ್ಳಬೇಕು. ನಂತರ ತುರಿದಿಟ್ಟುಕೊಂಡ ಒಂದು ಒಣಕೊಬ್ಬರಿ ಪೌಡರ ಹುರಿದುಕೊಳ್ಳಬೇಕು. ಹುರಿದಿಟ್ಟುಕೊಂಡ ಶೇಂಗಾ ಕಾಳಿನ ಮೇಲಿನ ಸಿಪ್ಪೆ ಸ್ವಚ್ಛ ಮಾಡಿಕೊಂಡು ಒಂದು ಸುತ್ತ ಮಿಕ್ಸಿ ಜಾರ್‌ನಲ್ಲಿ ಹಾಕಿ ಪೌಡರ್ ಮಾಡಿಕೊಳ್ಳಬೇಕು. ನಂತರದಲ್ಲಿ ಒಂದು ಬಾಣಲೆಯಲ್ಲಿ ಉಂಡಿ ಕಟ್ಟಲು ಬೇಕಾಗುವಷ್ಟು ಬೆಲ್ಲವನ್ನು ಉಂಡೆ ಆಕಾರಕ್ಕೆ ಬರುವ ಹಾಗೆ ಪಾಕ ಮಾಡಿಕೊಳ್ಳಬೇಕು. ಪಾಕ ಬರುವವರೆಗೂ ಬೇಯಿಸಬೇಕು. ಪಾಕ ಬಂದಮೇಲೆ ಅದಕ್ಕೆ ಮಿಶ್ರಣ ಮಾಡಿಟ್ಟುಕೊಂಡ ಶೇಂಗಾ ಪೌಡರ್‌ಗೆ ಕೊಬ್ಬರಿ ಪೌಡರ್, ಶುಂಠಿ, ಎಲ್ಲಕ್ಕಿ ಮಿಶ್ರಣ, ಪುಟಾಣಿ ಹಿಟ್ಟಿನ ಪೌಡರ್, ಬಿಳಿ ಎಳ್ಳನ್ನು ಪಾಕದಲ್ಲಿ ಹಾಕಿ ಮಿಶ್ರಣ ಮಾಡಿ ಉಂಡಿ ಕಟ್ಟಬಹುದು.

ಹೆಸರು ಹಿಟ್ಟಿನ ಉಂಡೆ

ಬೇಕಾಗುವ ಸಾಮಗ್ರಿಗಳು: ಹೆಸರು ಹಿಟ್ಟು, ಸಕ್ಕರೆ, ಬೆಣ್ಣೆ, ಎಲ್ಲಕಿ, ದ್ರಾಕ್ಷಿ, ಬಾದಾಮಿ, ಗೊಡಂಬಿ.

ಮಾಡುವ ವಿಧಾನ: ಹೆಸರು ಹಿಟ್ಟನ್ನು ಹಸಿ ವಾಸನೆ ಹೋಗುವವರೆಗೂ ತುಪ್ಪ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.(ತುಪ್ಪ ಹೆಚ್ಚು ಬಳಸಿದಷ್ಟು ಒಳ್ಳೆಯದು), ಹಸಿ ವಾಸನೆ ಹೋದ ನಂತರ ಅದಕ್ಕೆ ಸಕ್ಕರೆ ಪೌಡರ್ ಹಾಕಿ ಮಿಶ್ರಣ ಮಾಡಬೇಕು. ನಂತರ ತುಪ್ಪದಲ್ಲಿ ಹುರಿದಿಟ್ಟುಕೊಂಡ ಗೋಡಂಬಿ, ದ್ರಾಕ್ಷಿ, ಬಾದಾಮಿ ಹಾಕಬೇಕು. ಹುರಿದುಕೊಂಡ ಮಿಶ್ರಣಕ್ಕೆ ಎಲ್ಲಕ್ಕಿ ಪೌಡರ್ ಹಾಕಿ ಮಿಶ್ರಣ ಮಾಡಿ ಉಂಡೆ ಕಟ್ಟಬಹುದು. ಹೆಸರು ಹಿಟ್ಟಿನ ಉಂಡೆ ಬೇಸನ್ ಉಂಡೆ ರುಚಿಕೊಡುತ್ತದೆ.

ಅಳ್ಳು ಉಂಡೆ

ಬೇಕಾಗುವ ಸಾಮಗ್ರಿಗಳು: ಅಳ್ಳು, ಬೆಲ್ಲ, ಶುಂಠಿ, ಪುಟಾಣಿ ಹಿಟ್ಟು.

ಮಾಡುವ ವಿಧಾನ: ಮೊದಲು ಒಂದ ಬಾಣಲೆಗೆ ಬೆಲ್ಲ, ಸ್ವಲ್ಪ ನೀರು ಹಾಕಿ ಉಂಡೆ ಆಕಾರದಲ್ಲಿ ಪಾಕ ಬರುವವರೆಗೂ ಬೇಯಿಸಿಕೊಳ್ಳಬೇಕು. ಒಂದೆಳೆ ಪಾಕ ಬಂದ ಮೇಲೆ ಪುಟಾಣಿ ಹಿಟ್ಟಿನಲ್ಲಿ ಮಿಶ್ರಣ ಮಾಡಿಟ್ಟುಕೊಂಡ, (ಪುಟಾಣಿ ಹಿಟ್ಟು ಬಳಸದಿದ್ದರು ನಡೆಯುತ್ತದೆ) ಅಳ್ಳಿಗೆ ರುಚಿಗೆ ಬೇಕಾಗುವಷ್ಟು ಶುಂಠಿ, ಎಲಕ್ಕಿ ಪೌಡರ್ ಹಾಕಿ ಪಾಕದಲ್ಲಿ ಮಿಶ್ರಣ ಮಾಡಿ ಉಂಡೆಗಳನ್ನು ಕಟ್ಟಬಹುದು. ಪಾಕ ತಣ್ಣಗಾಗುವಷ್ಟರಲ್ಲಿ ಉಂಡೆಗಳನ್ನು ತಯಾರಿಸಿಕೊಳ್ಳಬೇಕು. ಬೆಲ್ಲದ ಬದಲು ಸಕ್ಕರೆಯನ್ನೂ ಬಳಸಬಹುದು.

ಗೋಧಿ ಹಿಟ್ಟಿನ ಉಂಡೆ

ಬೇಕಾಗುವ ಸಾಮಗ್ರಿಗಳು: ತುಪ್ಪ, ಗೋಧಿ ಹಿಟ್ಟು, ಸಕ್ಕರೆ, ಎಲ್ಲಕ್ಕಿ, ಗೋಡಂಬಿ, ದ್ರಾಕ್ಷಿ.

ಮಾಡುವ ವಿಧಾನ: ಒಂದು ಬಾಣಲೆಗೆ ಒಂದು ಕಪ್ ಕರಗಿಸಿದ ತುಪ್ಪ ಹಾಕಿ ಕಾಯಿಸಿಕೊಳ್ಳಬೇಕು. ಕಾದ ತುಪ್ಪಕ್ಕೆ ಗೋಡಂಬಿ ಹಾಕಿ ಸ್ವಲ್ಪ ಹುರಿದುಕೊಳ್ಳಬೇಕು. ನಂತರ ನಾಲ್ಕು ಕಪ್ಪ ಗೋಧಿ ಹಿಟ್ಟು ಹಾಕಿಕೊಂಡು ಸಣ್ಣ ಪ್ರಮಾಣದ ಉರಿಯಲ್ಲಿ ಹುರಿದುಕೊಳ್ಳಬೇಕು. ನಂತರ ಕಾಲಕಪ್ಪಿನಷ್ಟು ಇನ್ನಷ್ಟು ತುಪ್ಪು ಹಾಕಿ ಹುರಿದುಕೊಳ್ಳಬೇಕು. ಹುರಿದುಕೊಂಡ ನಂತರ ಒಲೆ ಆರಿಸಿ ಬಾಣಲೆ ಕೆಳಗಿಟ್ಟುಕೊಂಡು ಹುರಿದುಕೊಂಡ ಗೋಧಿ ಹಿಟ್ಟಿನ ಮಿಶ್ರಣಕ್ಕೆ ಎಲ್ಲಕ್ಕಿ ಪುಡಿ, ಸ್ವಲ್ಪ ಸ್ವಲ್ಪ ಸಕ್ಕರೆ ಪುಡಿ ಹಾಕಿ ಮಿಶ್ರಣ ಮಾಡಬೇಕು. (ನಾಲ್ಕು ಕಪ್ಪು ಗೋಧಿ ಹಿಟ್ಟಿಗೆ ನಾಲ್ಕು ಕಪ್ಪ ಸಕ್ಕರೆ ಬಳಬೇಕು) ಉಂಡೆ ಕಟ್ಟಲು ಬರುವ ಹಾಗೆ ಮಿಶ್ರಣ ಮಾಡಬೇಕು. ಮಿಶ್ರಣ ಮಾಡಿದ ನಂತರ ದ್ರಾಕ್ಷಿ ಹಾಕಿ ಉಂಡೆಗಳನ್ನು ತಯಾರಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.